ಜೋಕ್ಸ್ಪಿಯರ್
ಕಚೇರಿಗೆ ಬಂದ ಹೆಂಡತಿ
ಹೆಂಡತಿಗೆ ಗಂಡನ ಮೇಲೇಕೋ ಡೌಟ್ ಬಂತು. ಸೀದಾ ಆಫೀಸಿಗೆ ಹೋದಳು. ಗಂಡ ಸ್ಫುರದ್ರೂಪಿ ಸೆಕ್ರೆಟರಿಯನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದ. ಹೆಂಡತಿ ಬಾಗಿಲು ತೆಗೆದ ತಕ್ಷಣ ಗಂಡ ಹೀಗಂದ, 'ನಮ್ಮ ಸಂಸ್ಥೆ ಎಂಥ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದೆ. ಇನ್ನೊಂದು ಚೇರ್ ಖರೀದಿ ಮಾಡೋದಿಕ್ಕೂ ನನ್ಗೆ ಸಾಧ್ಯವಾಗ್ತಿಲ್ವಲ್ಲ'!
ಕೋಲ್ಯ: ನನ್ಗೆ ಸಿಕ್ಕಾಪಟ್ಟೆ ತಲೆ ನೋಯ್ತಿದೆ. ಡಾಕ್ಟರ್ ಹತ್ರ ಹೋಗ್ಬೇಕು.
ಫಂಟಾ: ಮೂರ್ಖ, ನನ್ಗೂ ನಿನ್ನೆ ಹಾಗೆಯೇ ಆಯ್ತು. ಸೀದಾ ಮನೆಗೆ ಹೋಗಿ, ಹೆಂಡ್ತಿಗೆ ಕಿಸ್ ಕೊಟ್ಟೆ. ತಲೆನೋವೇ ಮಾಯ.
ಕೋಲ್ಯ: ಹಾಗಾದ್ರೆ, ನಿನ್ ಹೆಂಡ್ತಿಗೆ ಫೋನ್ ಮಾಡಿ ಹೇಳು, ಇನ್ನೈದ್ ನಿಮಿಷದಲ್ಲಿ ಅಲ್ಲಿರ್ತೀನಿ ಅಂತ.
ಆ ಪುಟ್ಟ ಹುಡುಗಿ ಅದೇ ಮೊದಲು ಮದುವೆ ಸಮಾರಂಭಕ್ಕೆ ಹೋಗಿದ್ದಳು.
ಪುಟ್ಟಿ: ಯಾಕೆ ಅಮ್ಮ, ಮದ್ವೆ ಹೆಣ್ಣು ಬಿಳಿ ಡ್ರೆಸ್ ಹಾಕ್ಕೊಂಡಿದ್ದಾಳೆ.
ತಾಯಿ: ಬಿಳಿ ಬಣ್ಣ ಖುಷಿಯ ಸಂಕೇತ. ಹಾಗಾಗಿ.
ಪುಟ್ಟಿ: ಹಾಗಾದ್ರೆ, ಮದ್ವೆಗಂಡೇಕೆ ಕಪ್ಪು ಕೋಟ್ ಹಾಕ್ಕೊಂಡಿದ್ದಾನೆ?
ಸ್ಟಾಪ್ ಸ್ಟಾಪ್!
ಕೋಲ್ಯ ನಡೆದು ಹೋಗುತ್ತಿದ್ದ. ಎಲ್ಲಿಂದಲೋ 'ಸ್ಟಾಪ್' ಅಂತ ವಾಯ್ಸ್ ಬಂತು. ಕೂಡಲೇ ನಿಂತ, ತಕ್ಷಣವೇ ಕಾಲುಬುಡದಲ್ಲೇ ಕಲ್ಲುಬಂಡೆ ಉರುಳಿ ಹೋಯಿತು. 'ಅಬ್ಬಾ, ಬಚಾವಾದೆ' ಎಂದು ಮತ್ತೆ ನಡೆಯತೊಡಗಿದ. ಎರಡು ನಿಮಿಷದ ಬಳಿಕ, ಮತ್ತೆ 'ಸ್ಟಾಪ್' ಅಂತ ದನಿ ಕೇಳಿತು. ಕಾಲೆದುರೇ ನಾಗರ ಹಾವಿತ್ತು. ಕೋಲ್ಯ ಛಂಗನೆ ಪಕ್ಕಕ್ಕೆ ಹಾರಿ, ಪ್ರಾಣ ಉಳಿಸಿಕೊಂಡ. ಅನಾಮಿಕ ದನಿಗೆ ಕೇಳಿದ, 'ಯಾರು ನೀನು?'. ಅದು ಹೇಳಿತು, 'ನಾನು ದೇವರು'. ಕೋಲ್ಯ ಹೇಳಿದ, 'ನಾನು ಮದ್ವೆ ಆಗ್ತಿದ್ದಾಗ ಎಲ್ಲಿಗೆ ಹಾಳಾಗ್ ಹೋಗಿದ್ದೆ?'!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.