ಸಾಪ್ತಾಹಿಕಪ್ರಭ

ಆಸ್ತಿಯಲ್ಲಿ ಹಕ್ಕಿಲ್ಲ! (ನೀವು ಕಾನೂನು)

- ಎಚ್.ಆರ್. ಕಸ್ತೂರಿರಂಗನ್

ಗಿರೀಶ್, ಶಿವಮೊಗ್ಗ
ಪ್ರ: ನಾವು ಅಣ್ಣ ತಮ್ಮಂದಿರು ಪಿತ್ರಾರ್ಜಿತ ಆಸ್ತಿಯನ್ನು ಪರಸ್ಪರ ಒಪ್ಪಿಗೆಯಿಂದ ಮಾರಾಟ ಮಾಡಿದ್ದೇವೆ. ಬಂದ ಹಣದಿಂದ ಖರೀದಿಸಿದ ಆಸ್ತಿಯ ಮೇಲೆ ಪುನಃ ಅಣ್ಣ ತಮ್ಮಂದಿರಿಗೆ ಹಕ್ಕಿದೆಯೇ?
ಉ: ಪಾಲು ಆಗಿರಲಿ ಬಿಡಲಿ, ನೀವೆಲ್ಲ ಒಟ್ಟು ಆಸ್ತಿ ಮಾರಿ ಬಂದ ಹಣವನ್ನು ಹಂಚಿಕೊಂಡ ಮೇಲೆ ಅದು ಆಸ್ತಿ ಭಾಗವಾ ದಂತೆಯೇ. ಆದ್ದರಿಂದ ಮಾರಾಟ ದಿಂದ ಬಂದ ಹಣದಿಂದ ಖರೀದಿಸಿದ ಆಸ್ತಿಯ ಮೇಲೆ ಅಣ್ಣ ತಮ್ಮಂದಿರಿಗೆ ಯಾವ ಹಕ್ಕೂ ಇಲ್ಲ.

ಭೂಮಿ ಕೈ ಬಿಡುವುದೆ?
ಮಂಜುಳಮ್ಮ, ಹರವಿಗೊಂಡನಳ್ಳಿ, ಚಳ್ಳಕೆರೆ ತಾಲೂಕು
ಪ್ರ: 1956ರಲ್ಲಿ ಸರ್ಕಾರದಿಂದ ಮಂಜೂರಾದ ಜಮೀನನ್ನು ಪರಿಶಿಷ್ಟ ಜನಾಂಗದವರೊಬ್ಬರು 1969ರಲ್ಲಿ ವೀರಶೈವರೊಬ್ಬರಿಗೆ ಮಾರಾಟ ಮಾಡಿದರು. ಅವರಿಂದ ನಾವು (ನಾವೂ ವೀರಶೈವರೇ) 1989ರಲ್ಲಿ ಅದನ್ನು ಖರೀದಿಸಿದೆವು. ಈಗ ಆ ಪರಿಶಿಷ್ಟ ಜನಾಂಗದವರು ಜಮೀನು ವಾಪಸ್ ಕೊಡಿಸಬೇಕೆಂದು ಉಪವಿಭಾಗಾಧಿಕಾರಿಗಳ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಇದಕ್ಕೆ ಎಸ್ಸಿಎಸ್ಟಿ ಕಾಯಿದೆ ಅನ್ವಯವಾಗುತ್ತದೆಯೇ?
ಉ: 1956ರಲ್ಲಿ ಮಂಜೂರಾತಿ ನಿಯಮಗಳಲ್ಲಿ ಪರಭಾರೆ ಮಾಡಲು ಅವಕಾಶ ಇಲ್ಲದಿದ್ದರೆ ಅಥವಾ ಹತ್ತು ವರ್ಷ/ಹದಿನೈದು ವರ್ಷದ ನಂತರ ಸರ್ಕಾರದ ಅನುಮತಿ ಇಲ್ಲದೆ ಪರಭಾರೆ ಮಾಡಬಾರದೆಂದು ಇದ್ದರೆ ಆ ನಿಯಮ ಉಲ್ಲಂಘಿಸಿ ಮಾರಾಟ ಮಾಡಿದ್ದಾರೆ. ಆ ಪರಭಾರೆ ಊರ್ಜಿತವಾಗುವುದಿಲ್ಲ. ಅಥವಾ 1988ಕ್ಕಿಂತ ಮುಂಚೆ (ಎಸ್ಸಿಎಸ್ಟಿಗಳ ಜಮೀನು ಪರಭಾರೆ ನಿಷೇಧ ಅಧಿನಿಯಮ ಜಾರಿಗೆ ಬಂದ ವರ್ಷ). 30 ವರ್ಷ ಅನುಭೋಗದಲ್ಲಿದ್ದರೆ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ. ನಿಮ್ಮ ಪ್ರಕರಣದಲ್ಲಿ 1956ರಲ್ಲಿ ಮಂಜೂರಾದ ಜಮೀನನ್ನು 1969ರಲ್ಲಿ ಪರಭಾರೆ ಮಾಡಿರುವುದು ನಿಯಮದ ಉಲ್ಲಂಘನೆಯಾಗಿದ್ದು, ನೀವು ಖರೀದಿಸಿದ ವ್ಯವಹಾರ ನಿಯಮಬಾಹಿರ. ಇಂತಹ ಅರ್ಜಿ ಸಲ್ಲಿಸಲು ಮೂಲ ಹಿಡುವಳಿದಾರರ ಉತ್ತರಾಧಿಕಾರಿಗೆ ಯಾವ ಲಿಮಿಟೇಷನ್ನೂ ಇರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ