ಹೇನು: ಇದರಿಂದ ತಲೆಪ್ರತಿಷ್ಠೆಗೆ ಧಕ್ಕೆ.
ಫೋಟೋಶಾಪ್: ದೇವರಫೋಟೋಗಳಿರುವ ಅಂಗಡಿ.
ತಪರಾಕಿ: ಇದಕ್ಕೇನು ತಪಸ್ಸು ಮಾಡಬೇಕಿಲ್ಲ. ಇನ್ನೊಬ್ಬರ ತಪಕ್ಕೆ ಭಂಗ ತಂದರೆ ಸಾಕು.
ಮೊಟ್ಟೆ: ಮನುಷ್ಯರಿಗಾಗಿ, ಆಮ್ಲೇಟಿಗೋಸ್ಕರ ಕೋಳಿ ಇಡುವ ತತ್ತಿ.
ಹಗುರ: ಹುಡುಗಿಯರು ಎಷ್ಟೇ ತೂಕವಿದ್ದರೂ ನಿರ್ಭಾರ.
ಹಂದಿ: ಕೊಳೆಗೇರಿ ನಿವಾಸಿ.
ದಿನಪತ್ರಿಕೆ: ತಿಂಗಳಾಂತ್ಯದಲ್ಲಿ ತೂಕಕ್ಕೆ ಹಾಕುವ ಪೇಪರ್.
ಸ್ನಾನ: ಸೋಪುಗಳನ್ನು ಸವೆಸಲು ಇರುವ ತಂತ್ರ.