ಆ ಸೆಕ್ರೇಟರಿ ಸಿಕ್ಕಾಪಟ್ಟೆ ಹಾಟ್. ಸಂಜೆ ಐದರ ಹೊತ್ತಿಗೆ ಬಾಸ್ ಆಕೆಯನ್ನು ಕ್ಯಾಬಿನ್ ಒಳಗೆ ಕರೆದ. ತುಂಬಾ ಖುಷಿಯಲ್ಲೇ ಒಳಗೆ ಹೋದ ಸೆಕ್ರೇಟರಿ, ಐದು ನಿಮಿಷದ ಬಳಿಕ ಅಳುತ್ತಾ ಬಂದಳು. ಇದನ್ನು ನೋಡಿದ ಕೋಲ್ಯನಿಗೆ 'ಓಹ್! ಒಳಗೇನೋ ನಡೆದಿದೆ. ಬಡ್ಡಿಮಗ ಬಾಸ್ ಏನೋ ಕಿತಾಪತಿ ಮಾಡಿದ್ದಾನೆ' ಅಂತ ಅನ್ನಿಸ್ತು. ಇದೇ ರೈಟ್ ಟೈಮು. ಈಗ ಸೆಕ್ರೇಟರಿಯ ಕಣ್ಣೀರೊರೆಸಿದರೆ ಪರ್ಮನೆಂಟಾಗಿ ಬೀಳ್ತಾಳೆ ಎಂಬ ಆಸೆಯನ್ನೂ ಕೋಲ್ಯ ತನ್ನೊಳಗಡೆ ಚಿಗುರಿಸಿಕೊಂಡ.
ಕೋಲ್ಯ: ಯಾಕ್ರೀ ಅಳ್ತೀರಾ? ಬಾಸ್ ಏನ್ಮಾಡಿದ್ರು?
ಸೆಕ್ರೇಟರಿ: ಏನಿಲ್ಲ, 'ಇವತ್ತು ನೈಟ್ ನೀವು ಫ್ರೀನಾ?' ಅಂತ ಬಾಸ್ ಕೇಳಿದ್ರು.
ಕೋಲ್ಯ: ಹ್ಞಾಂ, ಗೊತ್ತಿತ್ತು ಆ ನನ್ಮಗ ಹಂಗೇ ಕೇಳ್ತಾನೆ ಅಂತ. ಅದಕ್ಕೆ ನೀವೇನಂದ್ರಿ?
ಸೆಕ್ರೇಟರಿ: ಹೌದು, ಫ್ರೀ ಇದ್ದೀನಿ ಅಂತ ಖುಷಿಯಲ್ಲೇ ಹೇಳಿದೆ. ಅದಕ್ಕವರು, 'ಸರಿ ಈ 45 ಪುಟಗಳನ್ನು ನೈಟು ಟೈಪ್ ಮಾಡಿ, ನಾಳೆ ಬೆಳಗ್ಗೆ ಫೈಲು ರೆಡಿಮಾಡಿ' ಅಂದ್ರು. ಆ ಸೆಕ್ರೇಟರಿ ಅಳುವುದನ್ನು ಮುಂದುವರಿಸಿದಳು!