ಕೆಜೆಪಿಯವರು ತೆಂಗಿನಕಾಯಿ ಕೊಟ್ರೆ ಕಾಂಗ್ರೆಸ್ನೋರು ಏನು ಕೊಡ್ತಾರೆ?
ಓಂ. ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
= ಪೂಜಾಗಾಂಧಿ ತ್ರಿಭಾಷಾ ನಟಿಯಾಗೋದು ಬಿಟ್ಟು 'ತ್ರಿಪಕ್ಷ' ರಾಜಕಾರಣಿಯಾಗಿದ್ದಾಳಲ್ಲ?
-ಅದಕ್ಕೆ ಈಗ 'ತ್ರಿಶಂಕು' ಸ್ಥಿತಿಯಲ್ಲಿರೋದು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
= ಹೆಣ್ಣು ಸತ್ತರೆ ಮೋಹಿನಿ, ಗಂಡು ಸತ್ತರೆ?
-ಕೆಲವರು ಬಿಳಿ ಬಟ್ಟೆ ಹಾಕ್ಕೊಂಡಿರೋ ಪುಢಾರಿಗಳಾಗ್ತಾರಂತೆ!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
= ಚುನಾವಣಾ ಪ್ರಚಾರಕ್ಕೆ ಐಷಾರಾಮಿ ವಾಹನಗಳೇಕೆ?
-ಕೊಳ್ಳೆ ಹೊಡೆಯಲು ಹಿಂದೆಲ್ಲ 'ರಥ'ಗಳಲ್ಲೇ ಬರುತ್ತಿದ್ದರಲ್ಲ!
ಬರ್ಕ್ಲಿ ರಮೇಶ್ ಕಿರಗಂದೂರು, ಮಂಡ್ಯ
= ಮಹಾತ್ಮಗಾಂಧಿಗೂ, ಸೋನಿಯಾಗಾಂಧಿಗೂ ವ್ಯತ್ಯಾಸವೇನು?
-ಅಜ್ಜ ಮನೆ ಕಟ್ಟಿದ, ಸೊಸೆ 'ದರ್ಬಾರ್' ನಡೆಸ್ತಿದ್ದಾಳೆ!
ಜೆ.ಆರ್. ಆದಿನಾರಾಯಣಮುನಿ, ಶ್ರೀ ಕೋಡಿಹಳ್ಳಿಮಠ
ಸದ್ದಿಲ್ಲದೆ ಬದುಕುವುದು ಸಾಧ್ಯವೇ?
-ಬದುಕಿಗೆ 'ಸೈಲೆನ್ಸರ್' ಅಳವಡಿಸಿಕೊಂಡು ನೋಡಬೇಕು!
ದೀಪಾ. ಕೆ. ವಿಭೂತಿ, ಹರಿಹರ
ಕಲಿಯುಗದಲ್ಲಿ ಮಾನವೀಯ ಧರ್ಮ ಎಷ್ಟು ಕಾಲಿನ ಮೇಲೆ ನಿಂತಿದೆ?
-ಅದರ ಕಾಲ ಮೇಲೆ ಅದು ನಿಲ್ಲೋದೇ ಕಷ್ಟ!
ಪಿ.ಜೆ. ರಾಘವೇಂದ್ರ, ಮೈಸೂರು
= ಕೆಜೆಪಿಯವರು ತೆಂಗಿನಕಾಯಿ ಕೊಟ್ರೆ ಕಾಂಗ್ರೆಸ್ನೋರು ಏನು ಕೊಡ್ತಾರೆ?
-'ತೆಂಗಿನಕಾಯಿ' ಕೀಳಲು 'ಕೈ' ಕೊಡ್ತಾರೆ!
ವಿ. ಹೇಮಂತ್ಕುಮಾರ್, ಬೆಂಗಳೂರು
= ಅಗ್ನಿ ಸಾಕ್ಷಿಗೂ ಪ್ರೇಮಸಾಕ್ಷಿಗೂ ವ್ಯತ್ಯಾಸವೇನು?
-ಅಗ್ನಿ ಸಾಕ್ಷಿಗೆ ಕಲ್ಯಾಣಮಂಟಪ ಬೇಕು, ಪ್ರೇಮಸಾಕ್ಷಿಗೆ ಪಾರ್ಕ್ ಸಾಕು!
ವಿಷ್ಣುಶಂಕರ್, ಶಿವಮೊಗ್ಗ
= ಈ ಪ್ರಪಂಚದಲ್ಲಿ ಜಗಳವಾಡದೆ ಸಂಸಾರ ನಡೆಸುವ ದಂಪತಿಗಳು ಇದ್ದಾರ ಘ್ನಾನಣ್ಣ?
-ಇದ್ದಾರೆ, ಹೆಂಡತಿ ಬೆಂಗಳೂರಿನಲ್ಲಿ, ಗಂಡ ಅಮೇರಿಕದಲ್ಲಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.