ಪಾರ್ಕ್
'ಬೇಗ ಬಾ ಬಸ್ಸು ಮಿಸ್ಸಾಗುತ್ತೆ' ಎಂದು ತಾರಕ ಸ್ವರದಲ್ಲಿ ಕಿರುಚುತ್ತಾ ಬಸ್ಸಿನ ಮೆಟ್ಟಲೇರಿದೆ. ನನ ಹಿಂದೆಯೇ ಸೆಕೆಂಡಿನ ಅಂತರದಲ್ಲಿ ಅವಳೂ ಬಸ್ಸಿನೊಳಗೆ ತೂರಿಕೊಂಡಳು. ಒಲಿಂಪಿಕ್ನಲ್ಲಿ ಪದಕ ಪಡೆದವರ ಮುಖದ ಹೊಳಪು ನಮ್ಮಲ್ಲಿ. ಅದಕ್ಕೆ ಕಾರಣವೂ ಇತ್ತು. ಬರೀ ನಾವಿಬ್ಬರೇ ಆಗಿದ್ದರೆ ಚಲಿಸುತ್ತಿರುವ ಬಸ್ಸನು ಓಡುತ್ತಲೇ ಏರುತ್ತಿದ್ದೆವೋ ಏನೋ.. ಆದರೆ ನನ ಕೈಯ್ಯಲ್ಲಿ ಈಗಿನೂ ನಡೆಯುವುದಕ್ಕೆ ಕಲಿಯುತ್ತಿರುವ ಮಗ, ಅವಳ ಕೈಯ್ಯಲ್ಲಿ 'ಈ ಬಸ್ಸು ಬೇಡ' ಎಂದು ಕಿರುಚುತ್ತಿರುವ ಮೂರು ವರ್ಷದ ಮಗಳು. ಅವರಿಬ್ಬರ ಬೇಕುಬೇಡಗಳನು ಪೂರೈಸಲು ಹಿಡಿದುಕೊಂಡ ದೊಡ್ಡ ಬ್ಯಾಗು. ಇದಿಷ್ಟರಲ್ಲಿ ಯಾವುದನೂ ಕೆಳಗೆ ಉಳಿಸದೆ ಬಸ್ಸನೇರಿದ ನಮಗೆ ಸಂತಸವಾಗದೇ ಇದ್ದೀತೇ...
ಆತ್ಮೀಯ ಗೆಳತಿ ನೈನಾ ಕೊಡಗಿನ ಪುಟ್ಟ ಹಳ್ಳಿಯೊಂದರಿಂದ ನನನು ನೋಡಲು ಪೇಟೆಗೆ ಬಂದಿದ್ದಳು.
ನನಗೆ ನಮ್ಮೂರ ಪಾರ್ಕ ಅನು ಅವಳಿಗೆ ತೋರಿಸುವ ಉತ್ಸಾಹ. 'ನಾನು ಕೊಡಗಿನಲ್ಲಿ ಕಾಣದ ಅದ್ಯಾವ ಹೂವಿದೆಯೆ ಇಲ್ಲಿ.. ನಿನೆ ಸಮುದ್ರ ತೀರದಲ್ಲಿ ನಡೆದೂ ನಡೆದೂ ಸುಸ್ತಾಗಿದೆ. ಇವತ್ತು ಹಾಯಾಗಿ ಕಾಲು ಚಾಚಿ ಹಳೇ ಸುದ್ದಿಗಳನು ನೆನಪಿಸಿಕೊಳ್ಳೋಣ' ಎಂದು ಗೋಗರೆಯುತ್ತಿದ್ದ ಅವಳನು ಎಬ್ಬಿಸಿ ಹೊರಡಿಸಿ ಬಸ್ಸು ಏರಿಸುವಲ್ಲಿ ಸಫಲಳಾಗಿದ್ದೆ.
ಬಸ್ಸೊಳಗೆ ಖಾಲಿ ಸೀಟಿಗಾಗಿ ಕಣ್ಣಾಡಿಸಿದೆವು. ಮಕ್ಕಳನು ಕರೆದುಕೊಂಡು ಬಂದರೆ ಆಗುವ ಒಂದೇ ಒಂದು ಉಪಕಾರ ಎಂದರೆ ಬಸ್ಸಿನೊಳಗೆ ಯಾರಾದರು ಪುಣ್ಯಾತ್ಮರು ಕರೆದು ಸೀಟ್ ಕೊಡುವುದು. ಒಳಗೊಳಗೇ ಅವರು ಬಯ್ದುಕೊಳ್ಳುವುದು ನಮಗೆ ಕೇಳುವುದಿಲ್ಲ ಬಿಡಿ. ಅವಸರದಲ್ಲಿ ಹಿಂದಿನ ಬಾಗಿಲಿನಲ್ಲಿ ಹತ್ತಿದ್ದ ಕಾರಣ ಹಿಂದಿನ ಸೀಟಿನ ಎರಡು ಜನ ಮೇಲೆದ್ದು ನಮ್ಮನು ಅಲ್ಲಿ ಕೂರಲು ಹೇಳಿ ತಮ್ಮ ಬೆನು ನೆಟ್ಟಗೆ ಮಾಡಿಕೊಳ್ಳುವ ಪ್ರಯತ ಮಾಡುತ್ತಾ ನಿಂತುಕೊಂಡರು.
ನಾವು ಸೀಟು ಸಿಕ್ಕಿದ ಖುಷಿಯಲ್ಲಿ ಇದ್ದೆಲ್ಲಾ ಹಲ್ಲುಗಳನು ಬಿಟ್ಟು ಅವರಿಗೊಂದು 'ಥ್ಯಾಂಕ್ಯೂ' ಹೇಳಿ ಮಕ್ಕಳನು ತೊಡೆಯ ಮೇಲೇರಿಕೊಂಡು ಆಸೀನರಾದೆವು. ಆಗಲೇ ತಿಳಿದಿದ್ದು ಸತ್ಯ ಸಂಗತಿ. ಸೀಟಿನ ಸ್ಪಂಜು ಎಂಬ ವಸ್ತು ಯಾವುದೋ ಒಂದು ಕಾಲದಲ್ಲಿ ಅಲ್ಲಿತ್ತು ಎಂದು ಪ್ರಮಾಣ ಮಾಡಿ ಹೇಳಿದರೂ ನಂಬದಂತಿತ್ತು. ಒಂದೊಂದು ಜಂಪ್ಗಳಲ್ಲಿ ಎತ್ತಿಎತ್ತಿ ಹಾಕಿದಾಗ ನಾವು ಮಕ್ಕಳು ಸಮೇತ ಮೇಲಕ್ಕೇರಿ ಪುನಃ ಕಬ್ಬಿಣ ಕಾಣುತ್ತಿರುವ ಸೀಟಿನ ಅಸ್ಥಿಪಂಜರದ ಮೇಲೆ ಬೀಳುತ್ತಿದ್ದೆವು.
ಅಷ್ಟರಲ್ಲಿ ಕಂಡಕ್ಟರ್ 'ಯಾರಲ್ಲಿ ರಾಮಕಾಂತಿ' ಅಂದ. ನಮ್ಮ ಎದುರು ಕುಳಿತಿದ್ದವಳು ರಭಸದಿಂದ ಎದ್ದು ಕೆಳಗಿಳಿದಳು. ಇನೂ ಸ್ವಲ್ಪ ಮುಂದೆ ಹೋದಂತೆ 'ಯಾರ್ರೀ ಜ್ಯೋತಿ' ಎಂಬ ಕಂಡಕ್ಟರಿನ ಉದ್ಗಾರ ಕೇಳಿಸಿತು. ನಮ್ಮ ಪಕ್ಕದಲ್ಲಿ ಕುಳಿತಿದ್ದವಳು ತನ ಸಮಾನು ಸರಂಜಾಮಿನೊಂದಿಗೆ ನಮ್ಮ ಕಾಲುಗಳನು ಜ್ಯಾಮ್ ಮಾಡುತ್ತಾ ಇಳಿದಳು.
ನನ ಗೆಳತಿ ನನ ಪಕ್ಕೆಗೆ ತಿವಿದು 'ಟಿಕೆಟ್ ತೆಕ್ಕೊಳ್ಳೊವಾಗ ಕಂಡೆಕ್ಟರ್ಗೆ ನನ ಹೆಸರು ಹೇಳ್ಬೇಡ' ಅಂದಳು.
'ನಿನ ಹೆಸರಾ... ಯಾಕೇ... ನೀನೇನು ಪ್ರೈಮ್ಮಿನಿಸ್ಟರಾ ಹೆಸರು ಹೇಳಿದ ಕೂಡಲೇ ಗೊತ್ತಾಗಲು' ಅಂದೆ.
'ಅಲ್ಲಾ ಕಣೇ ಈಗ ರಾಮಕಾಂತಿ, ಜ್ಯೋತಿ ಅಂತೆಲ್ಲ ಅವರ ಹೆಸರು ಕರೆದಾಗ ಅವ್ರು ಇಳ್ದಿದ್ದಲ್ವಾ...' ಅಂದಳು.
'ಅದೆಲ್ಲ ನಮ್ಮೂರ ಹೆಸರುಗಳು ಕಣೆ' ಎಂದು ಜಂಭದಿಂದ ನುಡಿದು, 'ಸ್ವಲ್ಪ ಪೇಟೆ ಕಡೆ ಹೆಸರುಗಳು, ಹೋಗುವ ರೂಟ್ಗಳು ಗೊತ್ತರಬೇಕು ಕಣೆ. ಇಲ್ದಿದ್ರೆ ಕಷ'್ಟ ಎಂದು ಅವಳ ಹೆಡ್ಡತನಕ್ಕೆ ಮರುಕ ಸೂಚಿಸಿದೆ.
ಬಸ್ಸು ಸಡನ್ ಆಗಿ ಹಾಕಿದ ಬ್ರೇಕ್ ನನ ಮಾತಿಗೂ ಬ್ರೇಕ್ ಹಾಕಿ, ಸೀಟಿನಿಂದ ಮೇಲೆ ಹಾರಿ ಮುಂದಿನ ಸೀಟಿನವಳ ತಲೆಯ ಮೇಲೆ ಕೂತಿದ್ದ ನಮ್ಮ ಬ್ಯಾಗನು ಜಾಗ್ರತೆಯಾಗಿ ಕೆಳಗಿಳಿಸಿದೆ. ಶಾಲೆಯಲ್ಲಿ ಮೊದಲು ಶಿಕ್ಷಕರು ಕೊಡುತ್ತಿದ್ದ 'ಪರಂಗಿ ಮಣೆ' ಎಂಬ ಶಿಕ್ಷೆಯನು ಮತ್ತೊಮ್ಮೆ ಅನುಭವಿಸುತ್ತಾ ನಮ್ಮ ಕಾಲಿನ ಬಲದಲ್ಲೇ ಕುಳಿತು ಪ್ರಯಾಣಾನಂದವನು ಅನುಭವಿಸುತ್ತಿದ್ದೆವು. ನಾನು ಹೊರಗೆ ಕಣ್ಣು ಹಾಯಿಸಿ 'ನಾವಿಳಿಯುವ ಜಾಗ ಬಂತು ಏಳೆ' ಎಂದೆ. 'ಬೇಗ...ಬೇಗ...' ಎಂದು ಒದರುತ್ತಿದ್ದ ಕಂಡಕ್ಟರ್ನ ಮಾತಿಗೆ ಒಂದಿಷ್ಟೂ ಬೆಲೆ ಕೊಡದೆ, ಬೀಳುತ್ತಿರುವ ಮಕ್ಕಳು, ಬ್ಯಾಗುಗಳನು ಸಂಭಾಳಿಸಿಕೊಂಡು ನಿಧಾನಕ್ಕೆ ಲ್ಯಾಂಡಿಂಗ್ ಮಾಡಿದೆವು.
ನಮ್ಮೆದುರೇ ದೂಳೆಬ್ಬಿಸುತ್ತಾ ಸಾಗಿದ ಬಸ್ಸಿನ ದೂಳು ಮರೆಯಾಗಿ ಸ್ಪಷ್ಟವಾದ ನಂತರ ನನಗೆ ನಾವಿಳಿಯುವ ಸ್ಟಾಪಿನ ಮೊದಲನೇ ಸ್ಟಾಪಿನಲ್ಲಿ ಇಳಿದು ಬಿಟ್ಟಿದ್ದೇವೆಂದು ಜ್ಞಾನೋದಯವಾಯಿತು. ನಾಲ್ಕು ಮಾರ್ಗಗಳು ಕೂಡುವ ಜಾಗದಲ್ಲಿ ಇಳಿದು ಯಾವ ಕಡೆ ಹೋಗಬೇಕೆಂದು ಕಣ್ಕಣ್ ಬಿಡುತ್ತಿರುವ ನನನು ಸಂಶಯದಿಂದ ನೋಡಿದ ಗೆಳತಿ, 'ನಿಂಗೂ ದಾರಿ ಗೊತ್ತಿಲ್ವೇನೇ..ಬೇಕಿದ್ರೆ ಯಾರನಾದ್ರೂ ಕೇಳೋಣ' ಎಂದು ಸಲಹೆ ನೀಡಿದಳು.
ಅವಳೆದುರು ಆಗಷ್ಟೇ ರೂಟ್ಗಳ ಬಗ್ಗೆ ಭಾಷಣ ಮಾಡಿ ಈಗ 'ದಾರಿ ಗೊತ್ತಿಲ್ಲ' ಎನುವುದು ಅವಮಾನಕಾರಿ ವಿಷಯವಲ್ಲವೇ? 'ಇಲ್ಲ ಕಣೆ. ಮಕ್ಕಳಿಗೆ ಏನಾದ್ರು ತಿನೋಕೆ ಹಿಡ್ಕೊಂಡು ಹೋಗೋಣ. ಅಲ್ಲೆಲ್ಲಾ ಹಾಳು ಮೂಳು ಡೇಟ್ ಬಾರ್ ಆಗಿದ್ದು ಮಾರ್ತಾರೆ' ಎಂದು ನನ ಅಗಾಧ ಜ್ಞಾನ ಪ್ರದರ್ಶಿಸಿದೆ. ಹತ್ತಿರದಲ್ಲಿದ್ದ ಅಂಗಡಿಗೆ ನುಗ್ಗಿ ಚಾಕೋಲೆಟ್, ಬಿಸ್ಕತ್ ಇತ್ಯಾದಿಗಳನು ತುಂಬಿದ ಚೀಲಕ್ಕೆ ತುರುಕಿದೆ.
ಮೊದಲೊಮ್ಮೆ ಬಂದಿದ್ದ ನೆನಪಿನಲ್ಲಿ 'ನಾಲ್ಕು ಹೆಜ್ಜೆ ಹಾಕಿದ್ರೆ ಸಿಗುತ್ತೆ ಕಣೆ. ಆ ಬಸ್ಸಲ್ಲಿ ಬೇರೇ ಕೂತು ಕಾಲೆಲ್ಲ ಜೋಮು ಹಿಡಿದಿತ್ತು. ನಡೀವಾಗ ಸರಿ ಆಗುತ್ತೆ' ಅಂದೆ. ಬಸ್ಸಿನ ಅಲುಗಾಟಕ್ಕೆ ತೊಟ್ಟಿಲು ತೂಗಿದಂತಾಗಿ ನಿದ್ದೆ ತೂಗುತ್ತಿದ್ದ ಅವಳ ಮಗಳನು ಎತ್ತಿ ಸೊಂಟಕ್ಕೇರಿಸಿ ನನ ಮಾತಿಗೆ 'ಹೂಂ' ಎಂದು ನನೊಡನೆ ಹೆಜ್ಜೆ ಹಾಕಿದಳು.
ನಾನು ಹೇಳಿದ ನಾಲ್ಕು ಹೆಜ್ಜೆ ನಲ್ವತ್ತಾಗಿ ನಾನೂರು ದಾಟಿದರೂ ಪಾರ್ಕ್ ಎಂಬುದು ಕಾಣದೆ ಅತ್ತಿತ್ತ ಮರಗಳಿಲ್ಲದೇ ಬಣಗುಡುತ್ತಿದ್ದ ರಸ್ತೆ ಹೆಬ್ಬಾವಿನಂತೆ ಮಲಗಿ ಭಯವೆಬ್ಬಿಸಿತು. ಮಧ್ಯಾಹ ಊಟ ಮುಗಿಸಿದ ಕೂಡಲೇ ನನ ಅವಸರಕ್ಕೆ ಹೊರಟ ಕಾರಣ ಸೂರ್ಯ ನೆತ್ತಿ ಮೇಲೆಯೇ ಕೂತಿದ್ದ. ದಕ್ಷಿಣ ಕಾಶ್ಮೀರವೆಂಬ ಖ್ಯಾತಿಯ ಚಳಿ ನಾಡು ಕೊಡಗಿನ ಮೂಡಿ (ಹುಡುಗಿ) ಮೂಡ್ ಆಫ್ ಮಾಡಿಕೊಂಡು 'ನಾನಿನು ಒಂದು ಹೆಜ್ಜೆ ಮುಂದೆ ಇಡಲ್ಲ' ಅಂತ ಮೊಂಡು ಹಿಡಿದಳು. ಅನಿವಾರ್ಯವಾಗಿ ಅಲ್ಲೇ ಕಾಯುತ್ತಾ ನಿಂತು ಬಳಿ ಬಂದ ರಿಕ್ಷಾವೊಂದಕ್ಕೆ ಕೈ ತಡೆದು ನಿಲ್ಲಿಸಿ, 'ಪಾರ್ಕ್' ಎಂದು ಸ್ಟೈಲಾಗಿ ಹೇಳಿ ಕೂತೆವು. ಅವನು ನಮ್ಮನು ಒಂದು ರೀತಿ ನೋಡಿ ನಾವು ನಡೆದು ಬಂದ ಹಾದಿಯಲ್ಲೇ ನಮ್ಮನು ಮತ್ತೆ ಮೆರವಣಿಗೆ ಕರೆದೊಯ್ದು, ನಾಲ್ಕು ಮಾರ್ಗಗಳು ಸೇರುವ ಸರ್ಕಲ್ ದಾಟಿ ಇನೊಂದು ರಸ್ತೆಯಲ್ಲಿ ಸ್ವಲ್ಪವೇ ದೂರದಲ್ಲಿ 'ಪಾರ್ಕ್' ಎಂಬ ಬೋರ್ಡ್ನೆದುರು ನಿಲ್ಲಿಸಿದ.
ನಾನೀಗ ಮುಸಿಮುಸಿ ನಗುತ್ತಿದ್ದ ಗೆಳತಿಯ ಮುಖ ನೋಡುವ ಧೈರ್ಯ ಮಾಡದೇ ಸುಮ್ಮನೆ ದುಡ್ಡೆಣಿಸಿ ನೀಡಿ ಪಾರ್ಕ್ನ ಪ್ರವೇಶ ದ್ವಾರದೆಡೆಗೆ ನಡೆದೆ. ಅಲ್ಲೊಂದು ಇಲ್ಲೊಂದು ಎಲೆಗಳನು ಬೋಳಿಸಿ ನಿಂತಿದ್ದ ಮೇ ಫ್ಲವರ್, ನಡೆವ ಕಾಲು ಹಾದಿಯಲ್ಲಿ ವಿಫುಲವಾಗಿ ಬೆಳೆದು ಹೂ ಬಿಟ್ಟಿದ್ದ ಕಾಡು ಲಂಟಾನಾ, ಪಾರ್ಥೇನಿಯಂ, ಕಿರ್ರೀಂ.. ಕಿರ್ರೀಂ ಎಂದು ತುಂಡಾಗುವಂತೆ ಸದ್ದು ಮಾಡುತ್ತಾ ಮಕ್ಕಳ ಭಾರ ಹೊರಲಾರದೇ ಹೊತ್ತು ಜೀಕುತ್ತಿರುವ ಜೋಕಾಲಿ.. ಅತ್ತಿತ್ತ ಹರಿದೆಸೆದ ಪೇಪರ್, ಪ್ಲಾಸ್ಟಿಕ್ಗಳು ಗಾಳಿಗೆ ಮೇಲೆದ್ದು ಹಾರಾಡುತ್ತಿರುವ ನೋಟ, ಅಲ್ಲಲ್ಲಿ ಕದ್ದು ಮುಚ್ಚಿ ಪ್ರೇಮಿಸುತ್ತಿರುವ ರೋಮಿಯೋ- ಜ್ಯೂಲಿಯೆಟ್ಗಳು.. ಮೊದಲೇ ಬಿಸಿಲಿಗೆ ಕೆಂಪಾಗಿದ್ದ ಗೆಳತಿಯ ಮುಖ ಇದನೆಲ್ಲಾ ನೋಡಿ ಸಿಟ್ಟಿನಿಂದ ಇನಷ್ಟು ರಾಗರಂಜಿತವಾಯಿತು.
ಅಲ್ಲೇ ಸಣ್ಣ ಹಾರೆ ಹಿಡಿದು ಮಣ್ಣು ಅಗೆಯುತ್ತಿದ್ದ ಕೆಲಸದವನನು ಕಂಡೆ. ಗೆಳತಿಯ ಕಡೆಗೆ ತಿರುಗಿ 'ತುಂಬಾ ಗಿಡಗಳಿತ್ತು ಕಣೆ ಇಲ್ಲಿ. ಬಹುಶಃ ಎಲ್ಲಾ ತೆಗೆದು ಹೊಸದಾಗಿ ಗಿಡ ನೆಡ್ತಾರೇನೋ. ನೋಡಲ್ಲಿ ಅವು ತೋಡ್ತಿದ್ದಾನೆ. ಅದೂ ತುಂಬಾ ದೊಡ್ಡ ಗುಂಡಿ ಬೇರೆ. ಯಾವುದಾದ್ರು ಫಾರಿನ್ ಹೂವಿನ ಮರ ಹಾಕ್ತಾರೇನೋ ಇಲ್ಲಿ' ಎಂದು ಅವಳನೆಳೆದುಕೊಂಡು ಅತ್ತ ನಡೆದೆ.
'ನಾನು ಕಳೆದ ಸಲ ಬಂದಿದ್ದಾಗ ತುಂಬಾ ಗಿಡ ಇತ್ತಿಲ್ಲಿ, ಎಲ್ಲೋಯ್ತು ಅದೆಲ್ಲ' ಅಂತ ಅಗೆಯುತ್ತಿದ್ದ ಕೆಲಸದವನಲ್ಲಿ ಕೇಳಿದೆ. 'ಅಯ್ಯೋ, ಅದೆಲ್ಲ ಫವರ್ ಶೋ ಇದ್ದಾಗ ನರ್ಸರಿಯವರು ತಂದಿಡ್ತಾರೆ. ಮುಗಿದ ಕೂಡ್ಲೇ ತೆಗೊಂಡು ಹೋಗ್ತಾರೆ' ಅಂದ.
ನನನು ಕನಿಕರದಿಂದ ನೋಡಿದ ಗೆಳತಿಯ ನೋಟವನು ನಿರ್ಲಕ್ಷ್ಯಿಸಿ, 'ಈಗ ಯಾವ ಗಿಡ ನೆಡೋದಿಕ್ಕೆ ಗುಂಡಿ ಮಾಡ್ತಾ ಇದ್ದೀರಾ? ಗುಂಡಿಯ ಅಳತೆ ನೋಡಿದ್ರೆ ಯಾವ್ದಾದ್ರು ಮರ ಆಗೋ ಜಾತಿಯ ಗಿಡ ನೆಡ್ತಿದ್ದಿರೇನೋ ಅನಿಸ್ತಾ ಇದೆ' ಎಂದು ನನ ಪಾಂಡಿತ್ಯವನು ಪ್ರದರ್ಶನಕ್ಕಿರಿಸಿದೆ.
'ಕುಡಿಯಕ್ಕೆ ಒಂದು ಬೊಗಸೆ ನೀರಿಲ್ಲ ಇಲ್ಲಿ. ಅದನು ಮನೆಯಿಂದ್ಲೇ ಹೊತ್ಕೊಂಡು ಬರ್ಬೇಕು. ಅಂತಾದ್ರಲ್ಲಿ ಇಲ್ಲಿ ಮರ ನೆಡೋದಾ...' ಅಂದ ಬೆವರಿಳಿಸಿಕೊಂಡು. 'ಮತ್ಯಾಕೆ ಇಷ್ಟೊಂದು ದೊಡ್ಡ ಗುಂಡಿ' ಅಂದೆ. 'ನನ್ ಕರ್ಮ ಏನ್ ಹೇಳ್ತೀರಾ? ಯಾವ್ದೋ ಅಡಾಡಿ ಬೀದಿ ನಾಯಿ ಇಲ್ಲೇ ಪಾರ್ಕ್ ಒಳಗೆ ಸತ್ತಿದೆ. ಮೂರು ದಿನ ಆದ್ರೂ ಮುನಿಸಿಪಲಿಟಿಯವರು ಬರ್ಲಿಲ್ಲ. ಇನು ಅವ್ರು ಬರಲ್ಲ. ಅದ್ಕೇ ನಾನೇ ಹೂತಾಕ್ತಿದ್ದೀನಿ. ಏನೋ ದಯೆ ಇಟ್ಟು ನೀವು ನನ ಕಷ್ಟ ಕೇಳಿದಿರಿ. ಒಂದೈದು ರೂಪಾಯಿ ಕೊಟ್ರೆ ನಿಮ್ಮೆಸರು ಹೇಳಿ ಒಂದು ಚಾ ಕುಡೀತೀನಿ ತಾಯಿ' ಎಂದು ಹಲ್ಲು ಬಿಟ್ಟ.
ಅಷ್ಟರಲ್ಲಿ ರಾಗ ತೆಗೆಯುತ್ತಿದ್ದ ನನ ಮಗ ಮತ್ತು ಅವಳ ಮಗಳ ಗಲಾಟೆಯಿಂದ ಬೇಸತ್ತ ಗೆಳತಿ,
ಐದು ರೂಪಾಯಿ ಅವನಿಗಿತ್ತು ಇನೇನೋ ಕೇಳ ಹೊರಟ ನನನು 'ಸಾಕು ನಡಿಯೆ ಮನೆಗೆ.. ಇನೇನಾದ್ರೂ ಪ್ರಶೆ ಕೇಳಿದ್ರೆ ನಿನ ಅದೇ ಗುಂಡೀಲಿ ಹೂತಾಕ್ತೀನಿ' ಎಂದು ಎಕ್ಸಿಟ್ ದ್ವಾರದೆಡೆಗೆ ನನನು ನೂಕಿಕೊಂಡು ಹೊರಟಳು.
- ಅನಿತಾ ನರೇಶ್ ಮಂಚಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.