ಮಮತೆ ಕವಿತೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಲಿ ಭಾಷೆಯಲ್ಲಿ ಕವಿತೆಗಳನು ಬರೆದಿದ್ದಾರೆ. ಅದೀಗ 'ಅರ್ತ್‌ಸಾಂಗ್' ಎಂಬ ಹೆಸರಿನಿಂದ ಇಂಗ್ಲಿಷ್‌ನಲ್ಲೂ ಪ್ರಕಟವಾಗಿದೆ. ಈಕೆ ಎಲ್ಲದರ ಮೇಲೂ ಕವಿತೆ ಬರೆದಿದ್ದಾರೆ. ರಾಜಕೀಯ, ಪ್ರಕೃತಿ, ಸಂಸಾರ... ಹೀಗೆ ಯಾವುದೂ ಈಕೆಯ ಲೇಖನಿಯಿಂದ ಬಚಾವಾಗಿಲ್ಲ. ಉದಾಹರಣೆಗೆ ಇಲ್ಲೊಂದು ಚರಣ ನೋಡಬಹುದು:
'ರಾಜಕೀಯ ಇಂದು ಕೊಳಕು ಆಟವಾಗಿದೆ
ಈ ಹಿಂದೆ ಅದಕ್ಕೆ ತುಂಬಾ ಗೌರವವಿತ್ತು
ಈಗ ರಾಜಕೀಯ ಅಂದರೆ ವ್ಯವಹಾರ
ಪಕ್ಷದ ಕಚೇರಿಗಳೇ ಅಂಗಡಿಗಳು'
ಇವನು ಬರೆಯುವ ಮೊದಲು ಮಮತಾ ತುಸು ಬಿಡುವು ಮಾಡಿಕೊಂಡು ನಿಜವಾದ ಕವಿತೆಗಳನು ಓದಬೇಕಿತ್ತು ಎನಿಸುತ್ತದೆ. ತನ ಪಾರ್ಟಿ ಕಾರ್ಯಕರ್ತರಿಂದ ಮಗ್ಗುಲು ಮುರಿಸಿಕೊಂಡ ಕಮ್ಯುನಿಸ್ಟರು, ತಾನು ಪೊಲೀಸ್ ಕಸ್ಟಡಿಗೆ ತಳ್ಳಿದ ಕಾರ್ಟೂನಿಸ್ಟರು, ಬಾಲ ಬಿಚ್ಚದಂತೆ ತಾನು ತಾಕೀತು ಮಾಡಿ ಕೂರಿಸಿರುವ ಮೀಡಿಯಾಗಳು... ಇವುಗಳ ಬಗ್ಗೆ ಆಕೆ ಬರೆದಂತಿಲ್ಲ. ಮುಂದಿನ ಸಂಕಲನದಲ್ಲಿ ಬರೆಯಲಿ ಎಂದು ಆಶಿಸಬಹುದು.
ಅದ್ಸರಿ, ಈ ರಾಜಕಾರಣಿಗಳಿಗೇಕೆ ಕಾವ್ಯವನು ಹೀಗೆ ಬಲಾತ್ಕರಿಸುವ ಹುಚ್ಚು? ನಮ್ಮ ವೀರಪ್ಪ ಮೊಯ್ಲಿಯವರನು ನೋಡಿಯಾದರೂ ಬುದ್ಧಿ ಕಲಿಯಬಾರದೆ?
-ಕೇರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.