ವಿಮರ್ಶೆಯ ಪರಿಭಾಷೆ
ಹೊಸ ಕವಿಗಳ, ಕತೆಗಾರರ ಕೃತಿಗಳನು ವಿಮರ್ಶಕರು ವಿಮರ್ಶಿಸುವ ಮಾದರಿಗಳು ವಿಶಿಷ್ಟವಾಗಿರುತ್ತವೆ. ಅವು ಸದಾ ಎರಡರ್ಥ ಹೊಮ್ಮಿಸುವಂತಿರುತ್ತವೆ. ಹಾಗೆ ಡಬ್ಬಲ್ ಮೀನಿಂಗ್ ಕೊಡುವ ಕೆಲವು ವಾಕ್ಯಗಳು ಇಲ್ಲಿವೆ. ಕಂಸದಲ್ಲಿರೋದು ಅವುಗಳ ನಿಜವಾದ ಮೀನಿಂಗು.
: ಇದನು ಒಮ್ಮೆ ಓದಬಹುದು. (ದೇವ್ರಾಣೆ ಓದೋಕೆ ಹೋಗ್ಬೇಡಿ!)
: ಸಂಗ್ರಾಹ್ಯ ಕೃತಿ (ಮನೆಯಲ್ಲಿರಲಿ ಅಷ್ಟೇ, ಓದೋದೇನೂ ಬೇಕಾಗಿಲ್ಲ)
: ಹಿರಿಯ ಕವಿಗಳಿಂದ ಇವರು ಪ್ರೇರಣೆ ಪಡೆದಿದ್ದಾರೆ. (ಸಿಕ್ಕಾಪಟ್ಟೆ ಸಾಲುಗಳನು ಕದ್ದಿದಾರೆ ಕಣ್ರೀ!)
: ತಮ್ಮ ಅಭಿವ್ಯಕ್ತಿಗೆ ಹೊಸ ಹಾದಿಯನು ಹುಡುಕುತ್ತಿರುವುದು ಗೊತ್ತಾಗುತ್ತಿದೆ. (ಹೇಗೆ ಬರೆಯಬೇಕಂತ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿದಾರೆ)
: ಕೆಲವು ಪ್ರಶೆಗಳನು ಎತ್ತುತ್ತಾರೆ. (ಉತ್ತರಗಳು ಗೊತ್ತಿಲ್ಲವಾದ್ದರಿಂದ)
: ಇವರು ಇನಷ್ಟು ಉತ್ತಮ ಕೃತಿಗಳನು ನೀಡಲಿ ಎಂಬ ಆಶಯ. (ಇದು ತೀರಾ ಕೆಟ್ಟದಾಗಿದೆ ಬಿಡಿ!)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.