ಗುಂಡ ಕಪ್ಪೆಯ ಮೇಲೆ ಸಂಶೋಧನೆಗೆ ಹೊರಟಿದ್ದ. ಕಪ್ಪೆಯನ್ನು ಹಿಡಿದು ಅದರ ಒಂದು ಕಾಲನ್ನು ತೆಗೆದು ಹೇಳಿದ- 'ಇನ್ನು ಹಾರು'. ಕಪ್ಪೆ ಸ್ವಲ್ಪ ದೂರಕ್ಕೆ ಹಾರಿತು. ಅವನು ಪುನಃ ಅದನ್ನು ಹಿಡಿದು ಅದರ ಮತ್ತೊಂದು ಕಾಲನ್ನು ಕೂಡ ತೆಗೆದು ಹೇಳಿದ- 'ಇನ್ನು ಹಾರು'. ಕಪ್ಪೆ ಕಷ್ಟಪಟ್ಟು ಹಾರಿತು. ಅವನು ಕಪ್ಪೆಯ ಮೂರನೇ ಕಾಲನ್ನು ತೆಗೆದ. ಕಪ್ಪೆ ಜಿಗಿಯಲು ಯತ್ನಿಸಿತು ಅಷ್ಟೇ. ಗುಂಡ ಅದನ್ನು ಮತ್ತೆ ಹಿಡಿದು ಬಾಕಿ ಇದ್ದ ಒಂದು ಕಾಲನ್ನು ಕೂಡ ತೆಗೆದ. ಕಪ್ಪೆ ಅಲುಗಾಡಲಿಲ್ಲ. ಅವನು ಸಂತೋಷದಿಂದ ಶರಾ ಬರೆದ- 'ಕಪ್ಪೆಯ ಒಂದೊಂದೇ ಕಾಲು ನಷ್ಟವಾಗುವಾಗಲೂ ಅದರ ಕೇಳುವ ಶಕ್ತಿ ಕಡಿಮೆಯಾಗುತ್ತದೆ ಮತ್ತು ಅದಕ್ಕೆ ಕಾಲುಗಳು ಇಲ್ಲವಾದರೆ ಕಿವಿಯೇ ಕೇಳಿಸುವುದಿಲ್ಲ!'