ಸಂಸ್ಕಾರದ ರೂಪಾಂತರ
ಹಿಂದುಸ್ತಾನಿ ಸಂಗೀತದಲ್ಲಿ ಶಿಷ್ಯನಿಗೆ 'ಷಾಗಿರ್ದ್' ಎಂಬ ಪದ ಬಳಸುತ್ತಾರೆ. ಬಹಳ ಸುಂದರವಾದ ಅರ್ಥವಿದೆ ಈ ಪದಕ್ಕೆ. 'ಷಾ' ಎಂದರೆ 'ಗುರು' ಎಂಬ ಅರ್ಥದಲ್ಲಿ ಬಳಸುತ್ತಾರೆ. 'ಗಿರ್ದ್' ಎಂದರೆ ಆ ಗುರುವಿನ ಹಿಂದೆ- ಮುಂದೆ ಸದಾಕಾಲ ಸುಳಿದಾಡುತ್ತಿರುವವನು ಎನುವ ಅರ್ಥ. ಅಂದರೆ, ಯಾರು ಸದಾಕಾಲ ಗುರುಗಳ ಸಹವಾಸದಲ್ಲಿದ್ದು ಅವರ ಸ್ವಭಾವ, ಚಿಂತನೆಗಳನು ತನದಾಗಿಸಿಕೊಳ್ಳುತ್ತ, ತಾನೂ ಗುರುವಾಗಲು ಪ್ರಯತಿಸುತ್ತಿರುತ್ತಾನೋ ಅವನು 'ಷಾಗಿರ್ದ್'.
ಸಂಗೀತ ಕೇವಲ ಅರ್ಥ ಮಾಡಿಕೊಳ್ಳುವ, ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಬರೆದು ಸೈ ಎನಿಸಿಕೊಳ್ಳುವ, ಕಾಪಿ ಮಾಡಿ ವಶಮಾಡಿಕೊಳ್ಳಬಲ್ಲ, ಪುಸ್ತಕ ಓದಿ ಅರಿಯಬಲ್ಲ ವಿದ್ಯೆ ಅಲ್ಲ. ನಾಲ್ಕು ಗೋಡೆಗಳ ನಡುವೆ ಕುಳಿತು ಪಡೆಯುವ ಪಠ್ಯ ಶಿಕ್ಷಣವೂ ಅಲ್ಲ. ಇದು ಒಂದು ವಿಧವಾದ ಸಂಪೂರ್ಣ ಸಂಸ್ಕಾರದಿಂದ ಆಗುವ ರೂಪಾಂತರ.
ಗುರು - ಶಿಷ್ಯರ ಸಂಬಂಧದ ಬಗ್ಗೆ ನಮ್ಮ ಗುರುಗಳು ಸದಾ ಹೇಳುವ ಮಾತು - 'ಗುರು ಮೊಟ್ಟಮೊದಲು ಶಿಷ್ಯನನು ತುಂಡುತುಂಡು ಮಾಡಿ ಒಂದು ಗಂಟಲ್ಲಿ ಹಾಕಿ ಕಟ್ಟಿ ಇಟ್ಟು ಬಿಡುತ್ತಾನಂತೆ. ಅಂದರೆ, ಶಿಷ್ಯನ 'ಅಹಂ', 'ವಿಚಾರ', 'ಅಸ್ತಿತ್ವ' ಎಲ್ಲವನು ಸಂಪೂರ್ಣ ನೆಲಸಮ ಮಾಡಿ, ನಂತರ ಅದನು ಚೆನಾಗಿ ತನ 'ಕೃಪೆ' ಎಂಬ ಗಂಟಲ್ಲಿ ಕಟ್ಟಿ ಇಟ್ಟುಬಿಡುತ್ತಾನೆ. ಅಂದರೆ ಶಿಷ್ಯನಿಗೆ ಗುರುವಿನ ಬಳಿ ಯಾವುದೇ ಅಸ್ತಿತ್ವವೇ ಇರುವುದಿಲ್ಲ. ನನ ವಿಚಾರ, ನನ ಬುದ್ಧಿ, ನನ ಬದುಕು, ನನ ಸಾಧನೆ - ಎಂಬೀ ಯಾವ ವಿಚಾರಗಳಿಗೂ ಅಲ್ಲಿ ಸ್ಥಳವೇ ಇರುವುದಿಲ್ಲ. ಹೀಗೆ ಒಮ್ಮೆ ಪೂರ್ತಿ ಅವನ ಸ್ವಂತ - ತಾನು - ತನದು ಎಂಬ ವಿಚಾರಗಳೆಲ್ಲ ಅಸ್ತಿತ್ವ ಕಳೆದುಕೊಂಡ ನಂತರ, ಅದು ಪಕ್ವವಾಗುವವರೆಗೆ ಕಾದು, ಆ ತುಂಡುಗಳನೆಲ್ಲ ತನಗೆ ಬೇಕಾದ ಹಾಗೆ, ತನ ಅಂತರ್‌ದೃಷ್ಟಿಗೆ ಯೋಗ್ಯವಾಗುವ ರೀತಿಯಲ್ಲಿ ಮರಳಿ ಜೋಡಿಸಿ, ಅಲ್ಲಿ ಸಂಪೂರ್ಣ ತನನೇ ಮರಳಿ ನಿರ್ಮಿಸಿಕೊಳ್ಳುತ್ತಾನೆ. ಹೀಗೆ ಒಬ್ಬ 'ಶಿಷ್ಯ' ಜನ್ಮ ಪಡೆಯುತ್ತಾನೆ.
ಆದರೆ ಆ ತುಂಡುಮಾಡಿಸಿಕೊಳ್ಳುವ ಅನುಭವಕ್ಕೆ, ತನ ಅಸ್ತಿತ್ವವನು ಕರಗಿಸಿಕೊಳ್ಳುವ ಸಂಸ್ಕಾರಕ್ಕೆ ಆ ಶಿಷ್ಯ ಸಿದ್ಧನಿರಬೇಕಷ್ಟೆ.
ಎಲ್ಲ ಸಂಗೀತಗಾರರ ಜೀವನದಲ್ಲೂ ಈ 'ತುಂಡು ಮಾಡಿಸಿಕೊಳ್ಳುವ' ಅವಧಿ ಬಂದಿರುತ್ತದೆ. ಎಷ್ಟೋ ಕಲಾವಿದರಿಗೆ ಅದು ಎರಡು, ಮೂರು, ನಾಲ್ಕು ವರ್ಷಗಳಷ್ಟು ದೀರ್ಘ ಅವಧಿಯದ್ದಾಗಿದೆ. ಆ ಅವಧಿಯಲ್ಲಿ ಏನೂ ಇರುತ್ತಿರಲಿಲ್ಲ, ಸಂಗೀತವೂ ಸಹ! ವಿಚಾರಕ್ಕಂತೂ ಆಸ್ಪದವೇ ಇರುತ್ತಿರಲಿಲ್ಲ ಅದು ನಿಜವಾದ ತಾಳ್ಮೆಯ ಪರೀಕ್ಷೆ. ಚಿಕ್ಕ ವಯಸ್ಸಿನಲ್ಲಿ ಸಾವಿರಾರು ಜನರನು ಮರುಳುಗೊಳಿಸಬಲ್ಲ ಅಗಾಧ ಪ್ರತಿಭೆ ಇದ್ದವರೂ, ಗುರುಗಳೇ ಅವರನು 'ಬಾ, ನಿನಗೆ ನಾನು ಕಲಿಸುತ್ತೇನೆ' ಎಂದು ಕರೆದೊಯ್ದವರೂ ಕೂಡ ಈ ಅವಧಿಯನು ಅನುಭವಿಸಿದ್ದಾರೆ. ದೈಹಿಕವಾಗಿ ಮಾನಸಿಕವಾಗಿ ಇದ್ದೂ ಕೂಡ, 'ನಾನು' ಎಂಬ ಅಸ್ತಿತ್ವವೇ ಇಲ್ಲದಂತೆ ಇರುವುದು ಅಷ್ಟು ಸುಲಭ ಸಾಧ್ಯವಲ್ಲ. ಇದರಲ್ಲಿ ಗೆದ್ದವರೇ ಆ ಅಪಾರ ಜ್ಞಾನರಾಶಿಗೆ ಯೋಗ್ಯರೆನಿಸಿದ್ದಾರೆ.
ಅದಕ್ಕೇ ಬಹಳಷ್ಟು ಕಲಾವಿದರಿಗೆ ಸಂಗೀತ ಜ್ಞಾನದ ಜತೆಜತೆಗೆ, ಅವರಿಗೇ ಅರಿವಿಲ್ಲದಂತೆ ಗುರುಗಳ ಹಾವ - ಭಾವ, ಕುಳಿತುಕೊಳ್ಳುವ ರೀತಿ, ಮಾತನಾಡುವ ಶೈಲಿ ಹೀಗೆ ಗುರುಗಳ ಸ್ವಭಾವವೂ ಅವರಲ್ಲಿ ಬೇರೂರಿಬಿಟ್ಟಿರುತ್ತದೆ. ಹೇಗೆ ಸಂಸ್ಕಾರಗೊಂಡ ಹಾಲು ತುಪ್ಪವಾದ ಮೇಲೆ ಮರಳಿ ಹಾಲಾಗಲಾರದೋ ಹಾಗೆ ಈ ಸಂಸ್ಕಾರದ ಕುಲುಮೆಯಲ್ಲಿ ಪುಟಿದು ಬೆಳಗುವ ಕಲಾವಿದ ಎಂದೂ ತಿರುಗಿ ನೋಡುವ ಪ್ರಮೇಯವಿಲ್ಲ. <
- ಶ್ರುತಿ ಭಟ್
shrutikbhat@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.