ನಿಶ್ಶಬ್ದ ಕೋಶ
ಅನುಭವಿ: ಮೂರು ಅಥವಾ ಮೂರಕ್ಕಿಂತ ಹೆಚ್ಚು ಬಾರಿ ಮದುವೆಯಾದವ.
ಇತ್ಯಾದಿ: ಪೆನ್ನಿನ ಇಂಕನ್ನು ಉಳಿಸಿದ ಪದ.
ನರ್ಸ್: ರೋಗಿಗಳನ್ನು ಎಬ್ಬಿಸಿ ನಿದ್ರೆ ಮಾತ್ರೆ ನುಂಗಲು ಕೊಡುವವಳು.
ವಿಚಾರಸಂಕಿರಣ: ಒಂದೇ ವಿಷಯವನ್ನು ನಾಲ್ಕಾರು ತಜ್ಞರು ಕನ್ಫ್ಯೂಸ್ ಆಗುವಂತೆ ಹೇಳುವ ಕಾರ್ಯಕ್ರಮ.
ಡಾಕ್ಟರ್: ಮಾತ್ರೆಗಳಿಂದ ರೋಗ ಗುಣ ಮಾಡಿ, ಬಿಲ್ ಮೂಲಕ ಮತ್ತೆ ರೋಗ ಬರಿಸುವವರು.
ಆಫೀಸ್: ಮದುವೆಯಾದವರಿಗೆ ರಿಲ್ಯಾಕ್ಸ್ ಸಿಗುವ ವಲಯ.
ಗಡ್ಡಮನುಷ್ಯ: ಶೇವಿಂಗ್ನಲ್ಲೂ ಸೇವಿಂಗ್ ಮಾಡಿದವ.
ಟೆಸ್ಟ್ ಮ್ಯಾಚ್: ಭಾರತೀಯರಿಗೆ ಮೂರು ಅಥವ ನಾಲ್ಕು ದಿನದ ಕ್ರಿಕೆಟ್ ಪಂದ್ಯ.
ರಾಜಭವನ: ಹೋಟೆಲ್ ಅಲ್ಲ, ರಾಜ್ಯಪಾಲರ ಗೃಹ.
ಸೆಲ್ಫಿಶ್: ಜೈಲಿನ ಒಳಗಿರುವ ಮೀನು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.