ಬೆಕ್ಕು
ಕವಿ ರಿಲ್ಕ್ನ ಬೆಕ್ಕು
ಕೆ.ವಿ. ತಿರುಮಲೇಶರ ಬೆಕ್ಕು
ಹೀಗೆ ಬೆಕ್ಕುಗಳು ಬರೆಸಿಕೊಂಡ ಕವಿತೆಗಳ ಬಗ್ಗೆ
ಅಂತಾ ಅಚ್ಚರಿಯೇನಿಲ್ಲ
ಹಾಗೆ ನೋಡಿದರೆ
ಪ್ರತಿ ಗಂಡಸರಲ್ಲೂ ಒಂದು ಬೆಕ್ಕು
ಸದಾ
ಜಾಗೃತವಾಗಿರುತ್ತೆ!
ಕದ್ದು ಹಾಲು ಕುಡಿಯಲು
ಕಣ್ಣುಚ್ಚಿಕೊಂಡೇ.
ನೆಲ
ಒಂಟಿಯಾಗಿ
ಹೆಗಲಲಿ ನೇಗಿಲ ಎಳೆದು
ಅಜ್ಜಿ ಬಿತ್ತಿದ ರಾಗಿಗೆ
ಸಗಣಿ ಗೊಬ್ಬರ ಹಾಕಿ
ಖಂಡುಗಟ್ಟಲೆ
ರಾಗಿ ಬೆಳೆದ ಅಜ್ಜನ
ಹೊಲದ ಮೇಲಿವತ್ತು
ಚತುಷ್ಕೋನ ರಸ್ತೆ
ರಾರಾಜಿಸುತ್ತಿದೆ;
ಆರಾಮಾಗಿ ಮಲಗಿರುವ
ಅವನ ಎದೆಯ ಮೇಲೆ
ಅನಿಲ ಟ್ಯಾಂಕರ್ಗಳು
ಅಡ್ಡಾಡುತ್ತಿವೆ
ನೋವಾಗುತ್ತಿರುವುದು ಮಾತ್ರ
ನನಗೆ!
-ಕು.ಸ. ಮಧುಸೂಧನ್
ku.sa.madhusudan@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.