ಮಕ್ಕಳು ತಪ್ಪು ಮಾಡಿದರೆ, ಸುಳ್ಳು ಹೇಳಿದರೆ ಹೇಗೆ ಶಿಕ್ಷಿಸುವುದು?
*ಕುಡಿಯೋದು ಅಂದ್ರೆ ಎಲ್ಲರೂ 'ಹೆಂಡ' ಅಂತಾನೆ ಯಾಕೆ ತಿಳ್ಕೋತಾರೆ ಸಾರ್?
-ರಾಜಕಾರಣಿ ಅಂದ್ರೆ ಎಲ್ಲರೂ 'ಪುಢಾರಿ' ಅಂತಲೇ ತಿಳ್ಕೋತಾರಲ್ಲ ಹಾಗೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
* ಅವಳಿಗೆ ಕಾಲ್ ಮಾಡಿದಾಗೆಲ್ಲ ಟವರ್ ಸಿಗ್ತಿಲ್ಲ ಅಂತಾಳಲ್ಲ?
-ಇನ್ಯಾರೋ ಟವರ್ ಓನರ್ ಅನ್ನು ಲವ್ ಮಾಡ್ತಿರಬೇಕು!
ಕಾಳಿದಾಸ ರಾಮಕೃಷ್ಣ ನಗರ, ಮೈಸೂರು
* ಕತ್ರಿನಾಗೂ, ಕರೀನಾಗೂ ಇರುವ ವ್ಯತ್ಯಾಸವೇನು?
-ಅವಳು ಸೇಫು, ಇವಳು ಸೈಫ್!
ಸಿ. ಅನಂತರಾವ್ ಹಿರೇಹಳ್ಳಿ, ಭರಮಸಾಗರ
* ಕನಸಿಗೂ ಕಲ್ಪನೆಗೂ ವ್ಯತ್ಯಾಸವೇನು?
-ಕನಸು ಅದಾಗೇ ಬೀಳುತ್ತೆ, ಕಲ್ಪನೆ ನೀವೇ ಮಾಡ್ಕೋಬೇಕು!
ವಿ. ಹೇಮಂತಕುಮಾರ್ ಬೆಂಗಳೂರು
* ಕೇವಲ ಐದು ಜನ ಪಾಂಡವರಿಗೆ ನೂರುಜನ ಕೌರವರು ಏಕೆ ಹೆದರಿದರು?
'ಸ್ಪೀಕರ್' ಕೃಷ್ಣ ಪಾಂಡವರ ಕಡೆ ಇದ್ದನಲ್ಲ!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
* ಹೆಣ್ಣು ಕೊಟ್ಟ ಮಾವನ ಬಳಿ ಸಾಲ ಕೇಳಿದರೆ ತಪ್ಪಾ?
-ಆಗ ನಿಮ್ಮ ಹೆಂಡ್ತಿ 'ಮೀಟರ್ ಬಡ್ಡಿ' ವಸೂಲು ಮಾಡ್ತಾರೆ!
- ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
* ಮಕ್ಕಳು ತಪ್ಪು ಮಾಡಿದರೆ, ಸುಳ್ಳು ಹೇಳಿದರೆ ಹೇಗೆ ಶಿಕ್ಷಿಸುವುದು?
-ಬೇಸಿಗೆ ಶಿಬಿರಕ್ಕೆ ಹಾಕಿಬಿಡಿ!
ಪೇಂಟರ್ ಪಾಪು, ಸಂತೇಮರಹಳ್ಳಿ
-ಘಾಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.