ಆದಿಯಲ್ಲಿ ದೇವನು ಒಬ್ಬನೆ ಇದ್ದ ಸುಮ್ಮನೆ
ಆದಿಯಲ್ಲಿ ದೇವನು ಒಬ್ಬನೆ ಇದ್ದ ಸುಮ್ಮನೆ
ಬೋರ್ ಬೋರ್ ಎನ್ನುತ್ತ ಮಾಡಿದ ಮಹಾನ್ ತಪ್ಪ
ಮೇಲೆ ಆಕಾಶ ಕೆಳಗೆ ಭೂಮಿ ಮಧ್ಯ ಗಾಳಿ
ಸೃಷ್ಟಿಸೇ ಬಿಟ್ಟ ಆ ನನ್ನ ಅಪ್ಪ
ಬೀಸುವ ಗಾಳಿ ಒಂದೇ
ಸುಡುವ ಸೂರ್ಯ ಒಬ್ಬನೆ
ತಂಪನೀಯುವ ಚಂದ್ರ ಒಬ್ಬನೆ
ದೈವ ಕೂಡ ಒಬ್ಬನೆ
ನಂತರ ಕೂರಲಿಲ್ಲ ಸುಮ್ಮನೆ
ಹಂಚಿದ ಖಾತೆಗಳನ್ನು ಬಿಮ್ಮನೆ
ಕೋಲು ಹಿಡಿದು
ಒಬ್ಬರ ಹಿಂದೊಬ್ಬರ ನಿಲ್ಲಿಸಿದ
ಮೊದಲು ಬಿಸಿಲು ನಂತರ ಮಳೆ ಆಮೇಲೆ ಚಳಿ
ನೆತ್ತಿ ಸುಟ್ಟಿತ್ತು ಬಿಸಿಲು
ಗಾಳಿ ಬೀಸಿತು ತಂಪನ್ನೀಯಲು
ಮಳೆ ಸುರಿಯಿತು ಬೆಳೆ ಬೆಳೆಯಲು
ಎಲ್ಲ ಸರಿಯಿದೆ ಅನ್ನಿಸಿದಾಗ
ರಿಪೀಟ್ ರಿಪೀಟ್ ಎಂದು ಆಜ್ಞೆ ನೀಡಿ
ಹೊರಟ ದೇವ ರೆಸ್ಟ್ಗೆಂದು
ಆಯಿತು ಭೂಮಿಯಲ್ಲಿ ಸುಗ್ಗಿ
ಸಿಕ್ಕಿದವರಿಗೆ ಸೀರುಂಡೆ
ಬೆಳೆದರು ಮಾವು ಸೇಬು
ಆದರೂ ತುಂಬಲಿಲ್ಲ ಜೇಬು
ಆಗ ಬದಲಾಯಿತು ಮಲಗಿರುವ ದೇವನ ನಶೀಬು
ಇದು ಮಾವಿನ ತೋಪು ಇದು ಸೀಬೆ ತೋಪು
ಎರಡೂ ತೋಪುಗಳ ಮೇಲೆ ಸುರಿದದ್ದು
ಒಂದೇ ಮಳೆ ಒಂದೇ ಗಾಳಿ
ಬೇರು ಇಳಿದದ್ದು ಒಂದೇ ಇಳೆ
ಗಿಡದಿಂದ ಗಿಡಕ್ಕೆ ಹಾರುವ ಹಕ್ಕಿ ಒಂದೇ
ತೋಪು ತೋಪಿಗೊಂದು ಬೇಲಿ ಅಂದರು ಹಿರೀಕರು
ಮಾವಿನ ಪಕ್ಕ ಬೇವೇಕೆ ಆಗಬಾರದು?
ಬೇವಿನ ಪಕ್ಕ ಸೀಬೆ ಏಕೆ ಆಗಬಾರದು?
ಅಂತ ಕೇಳಲಿಲ್ಲ ಸರೀಕರು
ಮಾವಿಗೆ ಮಾವು ಬೇವಿಗೆ ಬೇವು
ಬೇಡ ಬೇಡವೀ ಬೇಲಿ ಎಂದು ಅತ್ತರೂ
ನಿಲ್ಲಿಸಲಾಗಲಿಲ್ಲ ಹರಿವ ನೆತ್ತರು!
-ಪಾಲ್ ಸುದರ್ಶನ್
jspaulsudarshan@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.