ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಕಾಂಗ್ರೆಸ್‌ನವರ ಐದು ಬೆರಳಿಗೂ ಬಿಜೆಪಿಯವರ

Vishwanath S
Updated On : 11 May 2013, 12:56 pm

ಕಾಂಗ್ರೆಸ್‌ನವರ ಐದು ಬೆರಳಿಗೂ ಬಿಜೆಪಿಯವರ ಎರಡು ಬೆರಳಿಗೂ ಏನು ವ್ಯತ್ಯಾಸ?
    ಹೇಮಂತಕುಮಾರ್, ಬೆಂಗಳೂರು.
    ಹುಡುಗರಿಗಿಂತ ಹುಡುಗಿಯರ ಬರವಣಿಗೆ ಸುಂದರವಾಗಿರುತ್ತೆ ಏಕೆ?
    -ಹುಡುಗರು 'ಲೈನ್‌' ಹಾಕುವುದಕ್ಕೆ ಹೆಚ್ಚು ಗಮನ ಕೊಡ್ತಾರೆ!

    ಬರ್ಕ್‌ಲಿ ರಮೇಶ್, ಅರಗಂದೂರು, ಮಂಡ್ಯ.
    ಹೆಣ್ಣಿನ ಸೊಂಟದಂತೆ ಗಂಡಸಿನ ಸೊಂಟ ಬಳಕುವುದಿಲ್ಲ ಏಕೆ?
    -ಗಂಡಸಿನ ಸೊಂಟ ಅಲ್ಲಾಡುತ್ತಿರುತ್ತೆ, ನೀವು ನೋಡೋಲ್ಲ ಅಷ್ಟೆ!

    ಪಿ.ಜಿ. ರಾಘವೇಂದ್ರ, ಮೈಸೂರು.
    ಕೆಜೆಪಿ ತೆಂಗಿನ ಕಾಯಿಯ ಜೊತೆಗೊಂದು ಹೋಳು ಏಕೆ?
    -ಹಾಗೇ ಕಚ್ಚಿ ತಿನ್ನೋರಿಗೆ!

    ಜೆ.ಆರ್. ಆದಿನಾರಾಯಣಮುನಿ,
    ಶ್ರೀಕೋಡಿಹಳ್ಳಿಮಠ
    ಮನುಷ್ಯ ಮೂಕನಾಗುವುದು ಯಾವಾಗ?
    -ಇಂತಹ ಪ್ರಶ್ನೆ ಎದುರಾದಾಗ!

    ಸಿ. ಅನಂತರಾವ್ ಹಿರೇಹಳ್ಳಿ, ಭರಮಸಾಗರ.
    ಕಾಂಗ್ರೆಸ್‌ನವರ ಐದು ಬೆರಳಿಗೂ ಬಿಜೆಪಿಯವರ ಎರಡು ಬೆರಳಿಗೂ ಏನು ವ್ಯತ್ಯಾಸ?
    - ಅವರದ್ದು ಐದು ವರ್ಷಕ್ಕೊಬ್ಬ ಮುಖ್ಯಮಂತ್ರಿ, ಬಿಜೆಪಿ ಅವರದ್ದು ಎರಡು ವರ್ಷಕ್ಕೊಬ್ಬ ಮುಖ್ಯಮಂತ್ರಿ!

    ವಿಶ್ವಸುಹೃದಯ, ದಾವಣಗೆರೆ
    ಹುಡುಗಿಯರು ನಾಯಿಯನ್ನು ನೋಡಿದರೆ ತುಂಬಾ ಭಯಪಡುತ್ತಾರಲ್ಲ?
    -ನಾಯಿಯನ್ನು ಹಿಡ್ಕೊಂಡಿರೋರನ್ನ ಅನ್ಸುತ್ತೆ!

    ಉಜ್ಜನಿ ಜಲೇಂದ್ರ, ಚನ್ನಪಟ್ಟಣ.
    ಹೆಂಡತಿ ಊಟ ಬಡಿಸುವುದಕ್ಕೂ ಹೋಟೆಲ್ ಮಾಣಿ ಊಟ ಬಡಿಸುವುದಕ್ಕೂ ಏನು ವ್ಯತ್ಯಾಸ?
    -ಹೆಂಡತಿ ಬಡಿಸುತ್ತಾಳೆ, ಮಾಣಿ ಬಡಬಡಿಸ್ತಾನೆ!


-ಘಾಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments