ನೀವಲ್ಲೇನನು ನೋಡಿದಿರಿ?
ಕಾಂಕ್ರೀಟ್ ಕಾಡಿನ
ನಾಡಿನ ಮಕ್ಕಳೆ
ನೀವಲ್ಲೇನನು ನೋಡಿದಿರಿ?
ಮೂಡಣದಂಚಲಿ
ಮೂಡುವಾ ರವಿಯ
ನೆಟ್ಟಗೆ ನೇರಕೆ ನೋಡಿದಿರಾ?
ನೀಲಿಯ ಬಾನನು
ಉಜ್ಜುತ ಸವೆಯುವ
ಚಂದ್ರನ ಚೆಲ್ವಿಕೆ ನೋಡಿದಿರಾ?
ಬೆಳ್ಳನೆ ತುಪ್ಪಳ
ಬೆಚ್ಚಗೆ ಹೊದ್ದಿಹ
ಮುದ್ದಿನ ಕುರಿಮರಿ ನೋಡಿದಿರಾ?
ಬೇಲಿಯ ಹಾಗಲ
ಬಳ್ಳಿಯ ಕುಂಬಳ
ಬೆಟ್ಟದ ನೆಲ್ಲಿಯ ನೋಡಿದಿರಾ?
ನೋಡುವ ತವಕವು
ನಿಮ್ಮೊಳು ಇದ್ದರೆ
ಬನ್ನಿರಿ ಹಳ್ಳಿಯ ನಂದನಕೆ.
- ಲಕಾವ್ಯಶ್ರೀ ರವಿರಾಜ್, ಮಧುಗಿರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.