ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಪ್ರಾಮಾಣಿಕತೆ

Vishwanath S
Updated On : 11 May 2013, 12:59 pm

ಇದು ಒಬ್ಬ ಹುಡುಗನ ಕಥೆ. ಅವನು ಪಾರ್ಕ್‌ನಲ್ಲಿ ಆಟ ಆಡಿ ಮನೆಗೆ ಹೋಗುವಾಗ ದಾರಿಯಲ್ಲಿ ಯಾರದೋ ಪರ್ಸ್ ಸಿಕ್ಕಿತು. ಅದರಲ್ಲಿ ಒಂದು ಸಾವಿರ ರುಪಾಯಿಗಳು ಇದ್ದವು. ಆಗ ಅವನಿಗೆ ತುಂಬಾ ಖುಷಿಯಾಯಿತು. ಏಕೆಂದರೆ ಅವನು ಈ ಹಣದಿಂದ ವೀಡಿಯೊ ಗೇಮ್ ತಗೋಬಹುದು ಎಂದು ಯೋಚಿಸಿದ.
ಅವನು ಹಾಗೆ ಯೋಚಿಸುವಾಗ ಒಂದು ಧ್ವನಿ ಪರ್ಸ್‌ನಿಂದ ಕೇಳಿಬಂದಿತು. ಅದು ಹೇಳಿತು- 'ಈ ಪರ್ಸ್‌ನ್ನು ಕಳೆದುಕೊಂಡ ವ್ಯಕ್ತಿಗೆ ಕೊಟ್ಟುಬಿಡು. ಅವನಿಗೆ ಈ ಹಣದ ಅಗತ್ಯವಿದೆ' ಎಂದಿತು. ಆಗ ಅವನು ಎರಡೂ ಕಡೆಯಿಂದ ಯೋಚಿಸುತ್ತಿದ್ದ. ಒಂದು ಅವನಿಗೆ ವೀಡಿಯೊ ಗೇಮ್ ಖರೀದಿಸಬೇಕಾಗಿತ್ತು, ಇನ್ನೊಂದು ಕಡೆ ಅವನದಲ್ಲದ ಈ ಹಣವನ್ನು ಪರ್ಸ್ ಕಳೆದುಕೊಂಡ ವ್ಯಕ್ತಿಗೆ ಕೊಡಬೇಕಿತ್ತು.
ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದೆ ಹುಡುಗ ಈ ವಿಷಯದ ಬಗ್ಗೆ ಯೋಚಿಸತೊಡಗಿದ. ಆಗ ಶಿಕ್ಷಕಿಯ ಮಾತು ನೆನಪಾಯಿತು. ಅವರು ಹೇಳಿದ್ದರು ನೀವು ಯಾವಾಗಲೂ ಪ್ರಾಮಾಣಿಕತೆಯಿಂದ ಇರಬೇಕು. ಯಾವ ಕೆಲಸ ಮಾಡುವಾಗಲೂ ಸರಿಯಾಗಿ ಯೋಚಿಸಬೇಕು. ನೀವು ಒಳ್ಳೆಯ ಕೆಲಸ ಮಾಡಿದರೆ, ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ.'
ಹೀಗೆ ಯೋಚಿಸುತ್ತಿರುವಾಗ ಒಬ್ಬ ತಾತ ಏನನ್ನೋ ಹುಡುಕುತ್ತ ಅಲ್ಲಿಗೆ ಬಂದನು. ಆಗ ಹುಡುಗ 'ನೀವು ಏನಾದರೂ ಕಳ್ಕೊಂಡಿದೀರಾ?' ಅಂತ ಕೇಳಿದನು. ಆಗ ತಾತ 'ನಾನು ನನ್ನ ಪರ್ಸನ್ನು ಕಳೆದುಕೊಂಡಿದ್ದೇನೆ. ಅದರಲ್ಲಿ ಒಂದು ಸಾವಿರ ರುಪಾಯಿಗಳಿದ್ದವು. ಆ ಹಣದಿಂದ ನಾನು ನನ್ನ ಹೆಂಡತಿಗೆ ಔಷಧವನ್ನು ಖರೀದಿಸಬೇಕಾಗಿತ್ತು' ಎಂದ. ಆಗ ಹುಡುಗ, ನಿಮ್ಮ ಕಳೆದ ಪರ್ಸ್ ನನ್ನ ಬಳಿ ಇದೆ, ತಗೊಳ್ಳಿ ಎಂದು ತಾತನಿಗೆ ಪರ್ಸ್ ಕೊಟ್ಟ. ತನ್ನ ಕಳೆದುಹೋದ ಪರ್ಸ್ ಸಿಕ್ಕಿದ್ದಕ್ಕೆ ತಾತನಿಗೆ ತುಂಬಾ ಖುಷಿಯಾಯಿತು. 'ನಿನಗೆ ಒಳ್ಳೆಯದಾಗಲಿ ಮಗು' ಎಂದು ತಾತ ಹರಸಿದ.
ಈ ಘಟನೆ ಆದ ಮೇಲೆ ಹುಡುಗ ತನ್ನ ಮನಸ್ಸಿನಲ್ಲಿ 'ನಾನು ಈ ಹಣದಿಂದ ವೀಡಿಯೊಗೇವ್ ಖರೀದಿಸಿಬಿಡುತ್ತಿದ್ದೆ. ಆದರೆ ಇದು ನನ್ನ ಹಣವಲ್ಲ. ಅದು ಬೇರೆಯವರದು, ಆ ಹಣ ಅವರಿಗೆ ಸೇರಬೇಕಾದ್ದು. ಆ ಹಣವಿಲ್ಲದಿದ್ದರೆ ಅಜ್ಜಿಗೆ ಔಷಧ ಖರೀದಿಸಲಾಗುತ್ತಿರಲಿಲ್ಲ. ತಾತ ತುಂಬಾ ತೊಂದರೆ ಪಡಬೇಕಾಗುತ್ತಿತ್ತು' ಅಂದುಕೊಂಡ. ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಆತನ ಮನಸ್ಸು ಖುಷಿಗೊಂಡಿತ್ತು.

-ಧ್ರುವ ಎನ್. ಹಿರೇಗೌಡ್ರ,
8ನೇ ತರಗತಿ, ಪಾರ್ಶ್ವನಾಥ ಆಂಗ್ಲ
ಮಾಧ್ಯಮ ಶಾಲೆ, ಗದಗ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments