ಕಾರಣ
ಹರಿದ ಲಂಗದ ಕಸಿ
ನೆಲದ ಮೇಲೆ ಚಿನ್ನ ಚಿತ್ತಾರ
ತುಟಿ ಕೆನ್ನೆಯ ಮೇಲೆ ಯಾರೋ
ಬರೆದ ಕವನದ ಸಾಲು...
ಯಾರದೋ ಮನೆಯ ಹೇಂಟೆ
ಕುಕ್ಕಿ ತಿನ್ನುವ ಹುಳ ಹುಪ್ಪಡಿಗಳ
ಕಸಿದು, ಜುಟ್ಟು ನಿಮಿರಿಸಿ ಕೇಕೆ
ಹಾಕಿ ಮೈಥುನಕೆ ಆಹ್ವಾನಿಸುವ
ಯಾರದೋ ಮನೆಯ ಹುಂಜ
ಬಸವನಹುಳಕೂ ಓಟದ ಸ್ಪರ್ಧೆಯ
ಚಪಲ! ಹಿಂದೆ ಸರಿಯುವ ಅಗೋಚರ
ಕಾಲ; ತಿಪ್ಪೆಯೊಳಗೆ
ತಲೆ ಎತ್ತಿ ನಿಂತ ಅಣಬೆ.
ಊರ ಗೌಡನ ಆಣತಿಗೆ
ಕೆರಿಯ ಗುಡಿಸಿಲಿಗೆ ಬೆಂಕಿ;
ಕಲಿತ ಹುಡುಗಿ ಮಂಚ
ಏರಲು ಧಿಕ್ಕರಿಸಿದ ಕಾರಣ.
- ಶಿ.ಕಾ.ಬಡಿಗೇರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.