ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಘ್ನಾನಪೀಠ

Mainashree
Updated On : 18 May 2013, 3:25 am

ಮನುಷ್ಯನಿಗೆ ಕಾಮವೇ ಇರದೆ ಹೋಗಿದ್ದರೆ ಹೇಗಿರುತ್ತಿತ್ತು?
ವಿಷ್ಣು ಶಂಕರ್, ಶಿವಮೊಗ್ಗ.
    ಸಮಯಸೂಚಕ ಗಡಿಯಾರಕ್ಕೂ, ಸಮಯ ಸಾಧಕ ಮನುಷ್ಯನಿಗೂ ವ್ಯತ್ಯಾಸವೇನು?
    - ಅದರಲ್ಲಿ ಮುಳ್ಳು ಇರುತ್ತದೆ. ಮನುಷ್ಯನಲ್ಲಿ 'ಮುಳ್ಳಿನ ಮನಸ್ಸು' ಇರುತ್ತದೆ!

ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
    ಆಂಬ್ಯುಲೆನ್ಸ್‌ಗೆ 108 ಸಂಖ್ಯೆಯನ್ನೇ ಏಕೆ ಕೊಟ್ಟಿದ್ದಾರೆ?
    - ಮನುಷ್ಯನಿಗೆ ನೂರೆಂಟು ಕಾಯಿಲೆ ಇದೆ ಅಂತಾರಲ್ಲ!

ಬಿ.ವಿ. ನಾರಾಯಣ್, ಬೆಳಗೊಳ
    ಸಿದ್ರಾಮಣ್ಣ ಮುಖ್ಯಮಂತ್ರಿಯಾಗಲು ನಾನೇ ಕಾರಣ ಅಂದ್ರಂತೆ ಯಡಿಯೂರಪ್ಪ?
    - ನಾವೆಲ್ಲ ಮಾಜಿ ಮಂತ್ರಿಗಳಾಗಲೂ ನೀವೇ ಕಾರಣ ಅಂದ್ರಂತೆ ಶೋಭಾ, ಉದಾಸಿ, ಮುಂತಾದವರೆಲ್ಲ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
    ಮನುಷ್ಯನಿಗೆ ಕಾಮವೇ ಇರದೆ ಹೋಗಿದ್ದರೆ ಹೇಗಿರುತ್ತಿತ್ತು?
    - ಜೀವನಕ್ಕೆ ಬೇಗನೇ ಫುಲ್‌ಸ್ಟಾಪ್ ಬರ್ತೀತು!

ವಿಶ್ವ ಸಹೃದಯ, ದಾವಣಗೆರೆ
    ನಮ್ಮ ಭಾರತದಲ್ಲಿ ತಪ್ಪು ಮಾಡಿದವರಿಗೆ ಬೇಗನೆ ಶಿಕ್ಷೆ ನೀಡುವುದಿಲ್ಲ. ಏಕೆ?
    -ಮಾಡಿದ್ದು ತಪ್ಪು ಅಂತ ಬೇಗನೆ ಗೊತ್ತಾಗೋಲ್ಲ!

ಸಿ. ಅನಂತರಾವ್ ಹೆರೇಹಳ್ಳಿ, ಭರಮಸಾಗರ
    ನಮ್ಮ ಸರ್ಕಾರ 1ರು.ಗೆ ಇಡ್ಲಿ, 5ರು. ಅನ್ನಸಾಂಬಾರ್ ಕೊಡುವುದು ಸಾಧ್ಯವೇ?
    - ಒಂದು ರು.ಗೆ ಅಕ್ಕಿನೇ ಕೊಡ್ತೀವಿ, ಇಡ್ಲಿನಾದ್ರೂ ಮಾಡ್ಕೊಳ್ಳಿ, ಅನ್ನನಾದ್ರೂ ಮಾಡ್ಕೊಳ್ಳಿ ಅಂತಿದ್ದಾರೆ ಸಿದ್ರಾಮಣ್ಣ!

ಜಾತಕದಲ್ಲೇನುಂಟು?
ಕೋಲ್ಯ ಜಾತಕ ತೋರಿಸಲೆಂದು ಜ್ಯೋತಿಷಿ ಬಳಿ ಹೋದ.
ಜ್ಯೋತಿಷಿ: ನಿಮ್ಮ ಹೆಸರು ಕೋಲ್ಯ ಅಲ್ವಾ?
ಕೋಲ್ಯ: ಹೌದು, ಸ್ವಾಮಿ.
ಜ್ಯೋತಿಷಿ: ನಿಮ್ಮ ಪತ್ನಿ ಹೆಸರು ಕೋಲ್ಯಿಣಿ ಅಲ್ವಾ?
ಕೋಲ್ಯ: ಹೌದು, ಸ್ವಾಮಿ.
ಜ್ಯೋತಿಷಿ: ನಿಮಗೆ ಇಬ್ಬರು ಮಕ್ಕಳು; ಮರಿಕೋಲ್ಯ, ಮರಿಕೋಲ್ಯಿಣಿ.
ಕೋಲ್ಯ: ಖಂಡಿತಾ ಹೌದು.
ಜ್ಯೋತಿಷಿ: ನೀವು ನಿನ್ನೆಯಷ್ಟೇ 3 ಕೆ.ಜಿ. ಸಕ್ಕರೆ, 30 ಕೆ.ಜಿ. ಅಕ್ಕಿ ತಂದ್ರಿ ಅಲ್ವಾ?
ಕೋಲ್ಯ: ಏನ್ ಸ್ವಾಮಿ ನೀವು... ಇಷ್ಟು ಕರೆಕ್ಟ್ ಹೇಳ್ತಿದ್ದೀರಲ್ಲಾ...!
ಜ್ಯೋತಿಷಿ: ಕರೆಕ್ಟಾಗಿ ಹೇಳ್ದೇ ಏನು... ನೀವು ಜಾತಕದ ಬದಲು ರೇಶನ್ ಕಾರ್ಡ್ ತಂದ್ಕೊಟ್ಟಿದ್ದೀರಲ್ಲ...

ಕೋಲ್ಯ ಝೆರಾಕ್ಸ್ ಅಂಗಡಿ ಇಟ್ಟಿದ್ದ. ಪ್ರತಿ ಬಾರಿ ಝೆರಾಕ್ಸ್ ಮಾಡಿದ ಮೇಲೂ, ಆ ಝೆರಾಕ್ಸ್ ಕಾಪಿಯ ಪ್ರತಿ ಅಕ್ಷರಗಳನ್ನು ತಪ್ಪದೇ ಓದಿ, ಗಿರಾಕಿಗೆ ಕೊಡುತ್ತಿದ್ದ. ಏಕೆಂದರೆ, ಎಲ್ಲಾದರೂ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದ್ಯ ಎಂಬ ಭಯ ಅವನನ್ನು ಕಾಡುತ್ತಿತ್ತು.

ಟಿಕೆಟ್ ಟಿಕೆಟ್
ಪೈಲ್ವಾನ್ ಒಬ್ಬ ಬಸ್ಸು ಹತ್ತಿದ. ಆತನ ಬಳಿ ಬಂದ ಕಂಡಕ್ಟರ್, 'ಟಿಕೆಟ್ ಟಿಕೆಟ್‌' ಎಂದ. ಆ ಪೈಲ್ವಾನ್ ಗತ್ತಿನಲ್ಲಿ, 'ಟಿಕೆಟ್ ಗಿಕೆಟ್ ತಗೊಳ್ಳೋ ಅಭ್ಯಾಸ ನನ್ಗಿಲ್ಲ' ಎಂದು ಗಟ್ಟಿದನಿಯಲ್ಲಿ ಹೇಳಿದ. ಮತ್ತೆ ಕೇಳಿದರೆ ಎಲ್ಲಿ ಪೆಟ್ಟು ಬೀಳುತ್ತೋ ಎಂಬ ಭಯದಿಂದ ಕಂಡಕ್ಟರ್ ತೆಪ್ಪಗೆ ಮುಂದೆ ಹೋದ. ಮತ್ತೆ ಮರುದಿನವೂ ಅದೇ ಪ್ರಸಂಗ ನಡೆಯಿತು. ಹೀಗಾಗಿ, ತನ್ನ ದೇಹ ದೌರ್ಬಲ್ಯದ ಬಗ್ಗೆ ಕಂಡಕ್ಟರ್‌ಗೇ ಅಸಹ್ಯ ಹುಟ್ಟಿತು. ಮರುದಿನದಿಂದಲೇ ಜಿಮ್‌ಗೆ ಹೋಗಿ, ಬಾಡಿಯನ್ನು ಫಿಟ್ ಮಾಡಿಕೊಳ್ಳತೊಡಗಿದ. ಮತ್ತೆ ಮತ್ತೆ ಆ ಪೈಲ್ವಾನ್ ಬಸ್ಸಿನಲ್ಲಿ ಸಿಕ್ಕರೂ 'ಟಿಕೆಟ್ ಗಿಕೆಟ್ ತಗೊಳ್ಳೋ ಅಭ್ಯಾಸ ನನ್ಗಿಲ್ಲ' ಎಂಬ ಅವನ ಒರಟು ದನಿ ಕಂಡಕ್ಟರ್‌ನನ್ನು ಇರಿದು ಇರಿದು ಕೊಲ್ಲುತ್ತಿತ್ತು. 6 ತಿಂಗಳ ನಂತರ ಕಂಡಕ್ಟರ್‌ನ ಬಾಡಿಯೂ, ಪೈಲ್ವಾನ್‌ನ ದೇಹದಂತೆಯೇ ಬಲಿಷ್ಠವಾಯಿತು. ಮತ್ತೆ ಬಸ್ಸಿನಲ್ಲಿ ಪೈಲ್ವಾನ್ ಎದುರಾದ.
ಕಂಡಕ್ಟರ್: (ಜೋರು ದನಿಯಲ್ಲಿ) ಬಡ್ಡಿಮಗನೆ, ಯಾಕೆ ನೀನು ಟಿಕೆಟ್ ತೆಗೆದ್ಕೊಳ್ಳೋದಿಲ್ಲ?
ಪೈಲ್ವಾನ್: ನನ್ನ ಬಳಿ ಬಸ್ ಪಾಸ್ ಇದೆ!

ಮರಿಕೋಲ್ಯ: ದೇವರೇ ಹೇಗಾದ್ರೂ ಮಾಡಿ ಬೆಂಗಳೂರನ್ನು ಅಮೆರಿಕದ ರಾಜಧಾನಿಯನ್ನಾಗಿ ಮಾಡು.
ದೇವರು: ಯಾಕಪ್ಪಾ, ಹಾಗೇಕೆ ಮಾಡಲಿ?
ಮರಿಕೋಲ್ಯ: ನಾನು ಎಕ್ಸಾಮ್‌ನಲ್ಲಿ ಅಮೆರಿಕದ ರಾಜಧಾನಿ ಬೆಂಗಳೂರು ಅಂತ ಬರೆದಿದ್ದೇನೆ!
=
ಗರ್ಲ್‌ಫ್ರೆಂಡ್: ನಿನ್ನ ಮಾಜಿ ಪ್ರೇಯಸಿ ಸಿಕ್ಕಾಪಟ್ಟೆ ಹಾಟ್?
ಕೋಲ್ಯ: ಗೊತ್ತಾಗ್ಲಿಲ್ಲ, ಯಾರ್ ಹೇಳು..!?
ಗರ್ಲ್‌ಫ್ರೆಂಡ್: ಯಾರೂ ಇಲ್ಲ, ನಾನೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments