ಮಕ್ಕಳ ಕವಿತೆ
ರಜೆ ಕಳೆಯುವೆ ತಣ್ಣಗೆ
ಬೇಸಿಗೆ ಬಂತು ಬೇಸಿಗೆ
ಸುಡು ಸುಡು ಬಿಸಿಲ ಬೇಸಿಗೆ
ಬಂತು ಕಾಂಕ್ರೀಟು ಕಾಡಿಗೆ
ಬರವೋ ತಣ್ಣನೆ ಗಾಳಿಗೆ
ಎಚ್ಚರ ತಪ್ಪಿದರೆ ನಾಲಿಗೆ
ಕಾಯಿಲೆ ಖಂಡಿತ ಮೈಯಿಗೆ
ಬೇಡಿಕೆ ಕಾದಾರಿಸಿದ ನೀರಿಗೆ!
ಸೆಕೆಯ ತಡೆಯಲು ಮೆಲ್ಲಗೆ
ತೊಡುವೆ ಉಡುಪು ತೆಳ್ಳಗೆ
ಕ್ರಿಕೆಟು-ಬ್ಯಾಟು ಮೂಲೆಗೆ
ಬೇಡೆನು ಬೇಕರಿ ತಿಂಡಿಗೆ
ಹೋಗುವೆ ಅಜ್ಜನ ಊರಿಗೆ
ಮೈಯನೊಡ್ಡೆನು ಬಿಸಿಲಿಗೆ
ಪುಸ್ತಕ ಓದುವೆ ಮನಸ್ಸಿಗೆ
ಜೋಕಾಲಿ ಕಟ್ಟುವೆ ಕೊಂಬೆಗೆ
ತಂಗಳು ಅಜ್ಜನ ಎಮ್ಮೆಗೆ
ಘಮ-ಘಮ ಮಜ್ಜಿಗೆ ನನಗೆ
ಹೊಲಕೆ ಹೋಗುವೆ ಸಂಜೆಗೆ
ಕುಣಿಯುವೆ ಹಕ್ಕಿ ಹಾಡಿಗೆ
ರಜೆಯನು ಕಳೆಯುವೆ ತಣ್ಣಗೆ
= ಸಾ.ಮ. ಶಿವಮಲ್ಲಯ್ಯ,
ಸಾಸಲಾಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.