ಅತಿವೇಗದ ಸಂಗತಿ
ನಾಲ್ಕು ಜನ ಇಂಟರ್ವ್ಯೂಗೆ ಹೋಗಿದ್ದರು. ಅದರಲ್ಲಿ ಕೋಲ್ಯನೂ ಒಬ್ಬ. ಸರಿ ಉತ್ತರ ಕೊಟ್ಟವರಿಗೆ ಗ್ಯಾರೆಂಟಿ ಕೆಲ್ಸ. ಸಂದರ್ಶಕ ಕೇಳಿದ ಪ್ರಶ್ನೆ ಇದಾಗಿತ್ತು, 'ವಿಶ್ವದಲ್ಲಿ ಅತಿ ವೇಗವಾಗಿ ಚಲಿಸುವುದು ಯಾವುದು?'.
1ನೆಯವ: ಬೆಳಕು ಸಾರ್.
2ನೆಯವ: ಮೆದುಳಿನ ಆಲೋಚನೆ.
3ನೆಯವ: ಮಿಟುಕಿಸುವಾಗ ರೆಪ್ಪೆಗಳ ಚಲನೆ ಸಾರ್.
ಕೋಲ್ಯ: ಲೂಸ್ಮೋಶನ್ ಸರ್.
(ಕೋಲ್ಯನ ಉತ್ತರ ಕಂಡು ಸಂದರ್ಶಕನಿಗೆ ಅಚ್ಚರಿ)
ಸಂದರ್ಶಕ: ಲೂಸ್ಮೋಶನ್ನಾ... ಯಾಕೆ!!?
ಕೋಲ್ಯ: ಹೌದು, ಎಷ್ಟೋ ಸಲ ರಾತ್ರಿ ಇದು ಅನುಭವಕ್ಕೆ ಬಂದಿದೆ. ಹಾಸಿಗೆ ಮೇಲೆ ಮಲಗಿದ್ದಾಗ ಹೊಟ್ಟೆ ನೋವು ಶುರುವಾಗುತ್ತೆ. ಇದೇನು ಅಂಥ ನಾನು ಯೋಚಿಸುವ ಮೊದಲೇ, ಲೈಟ್ ಆನ್ ಮಾಡಿ ನೋಡ್ಬೇಕು ಅಂತಿರುವಾಗಲೇ, ಭೇದಿ ಶುರುವಾಗಿರುತ್ತೆ!
=
ಕೋಲ್ಯ, ಫಂಟಾ ಮಾವಿನಮರದ ಕೆಳಗೆ ನಿಂತುಕೊಂಡು ಮಾವಿನಹಣ್ಣಿಗೆ ಕಲ್ಲು ಹೊಡೆಯುತ್ತಿದ್ದರು. ಅಷ್ಟರಲ್ಲೇ ಫಂಟಾನಿಗೆ ಡೌಟ್ ಶುರುವಾಯಿತು.
ಫಂಟಾ: ಬಹುಶಃ ಅದು ಹಣ್ಣಲ್ಲ, ಕಾಯಿ ಇರಬೇಕು.
ಕೋಲ್ಯ: ಹೌದಲ್ಲ, ಅದು ಹಣ್ಣಾ ಕಾಯಿನಾ ಅಂತ ಪರೀಕ್ಷೆನೇ ಮಾಡ್ಲಿಲ್ಲ ಅಲ್ವಾ?
- ಎಂದು ಹೇಳಿದ ಕೋಲ್ಯ ಕೂಡಲೇ ಮರ ಏರಿದ. ನಾಲ್ಕನೇ ಕೊಂಬೆಯ ಕೊನೆಗೆ ಸಾಗಿ, ಅದನ್ನು ಮುಟ್ಟಿ ಕೆಳಗಿಳಿದು ಹೇಳಿದ, 'ಇದು ಹಣ್ಣೇ ಮಾರಾಯ'.
ನಂತರ ಅವರಿಬ್ಬರೂ ಆ ಹಣ್ಣಿಗೆ ಕಲ್ಲು ಹೊಡೆಯುವುದನ್ನು ಮುಂದುವರಿಸಿದರು.
=
ಕೋಲ್ಯ: ಹಲೋ, ಡಾಕ್ಟರ್... ನನ್ನ ಹೆಂಡ್ತಿಗೆ ಹೆರಿಗೆ ನೋವು ಶುರುವಾಗಿದೆ. ವಿಪರೀತ ಚೀರಾಡ್ತಿದ್ದಾಳೆ.
ಡಾಕ್ಟರ್: ಇದು ಮೊದಲನೇ ಮಗುನಾ?
ಕೋಲ್ಯ: ಅಲ್ಲಾ, ನಾನು ಗಂಡ ಮಾತಾಡ್ತಿದ್ದೀನಿ.
ಕೋಲ್ಯನ ಗರ್ಲ್ಫ್ರೆಂಡ್ ತನ್ನ ಬಟ್ಟೆಯನ್ನೆಲ್ಲ ಬಿಚ್ಚಿ ಹೇಳಿದಳು, 'ಈಗ ನನ್ನನ್ನು ನಿನ್ನ ಹೆಂಡ್ತಿ ಥರ ಟ್ರೀಟ್ ಮಾಡು'. ಕೋಲ್ಯ ಪುರುಸೊತ್ತು ಕೊಡದೆ ಅವಳ ಬಟ್ಟೆಯನ್ನೆಲ್ಲ ನೀರಿಗೆ ಅದ್ದಿ ಒಗೆಯಲು ಶುರುಮಾಡಿದ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.