ನೀವು ಕಾನೂನು
ಹೈಕೋರ್ಟ್ಗೆ ದೂರು ನೀಡಿ
ರಮೇಶ್, ಹಾವೇರಿ
ನನ್ನ ತಂದೆಯ ಮೇಲೆ 20 ಗುಂಟೆ ಜಮೀನು ವಿಷಯದಲ್ಲಿ ಒಬ್ಬರು ಮೇಲ್ಮನವಿ, ರೆಗ್ಯುಲರ್ ಅಪೀಲ್.. ವಗೈರೆ ಹತ್ತು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿ ಕೊನೆಗೆ ಎಲ್ಲದರಲ್ಲೂ ನಾವೇ ವಿಜಯಿಯಾಗಿದ್ದೇವೆ. 1967ರಿಂದ ಇಲ್ಲಿಯವರೆಗೆ ಅನೇಕ ಸುಳ್ಳು ದಾಖಲಾತಿ ಆಧಾರದ ಮೇಲೆ ಪ್ರಕರಣ ದಾಖಲಿಸಿ ನಮಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಕೊಟ್ಟವರ ವಿರುದ್ಧ ಪರಿಹಾರವೇನು? ದಾಖಲೆಗಳನ್ನು ಗಮನಿಸದೆ ನಮ್ಮ ವಿರುದ್ಧ ಆದೇಶ ನೀಡಿದ ಹಾಗೂ ಚಕ್ಕುಬಂದಿಯನ್ನು ತಪ್ಪಾಗಿ ನಮೂದಿಸಿದ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಬಹುದೇ? ನಗರಸಭೆಯವರು ಕಾಂಪೌಂಡ್ ಗೋಡೆ ನಿರ್ಮಿಸಲು ಅನಗತ್ಯ ಕಿರುಕುಳ ನೀಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬಹುದೇ?
- ಸಿವಿಲ್ ಪ್ರಕ್ರಿಯಾ ಸಂಹಿತೆಯ ಕಲಂ 35-ಎ ರಂತೆ ಸಿವಿಲ್ ನ್ಯಾಯಾಲಯವೇ (ವಿಚಾರಣೆ ನಡೆಸಿದ ನ್ಯಾಯಾಲಯ) ನಿಮ್ಮ ಅರ್ಜಿಯ ಮೇಲೆ ಅವರಿಗೆ 3000 ರು.ಗಳಿಗೆ ಮೀರದಂತೆ ದಂಡ ವಿಧಿಸಬಹುದು. ಬೇಕಾದರೆ ನೀವು ಕೋರ್ಟಿಗೆ ಅರ್ಜಿ ಹಾಕಿ ಸುಳ್ಳು ದಾಖಲೆಗಳನ್ನು ಪೊಲೀಸರಿಗೆ ರವಾನಿಸಿ ನ್ಯಾಯಾಲಯವೇ ಕ್ರಿಮಿನಲ್ ದೂರು (ನಕಲಿ ದಾಖಲೆ) ಸಲ್ಲಿಸಬೇಕೆಂದು ಕೇಳಬಹುದು. ನ್ಯಾಯಾಧೀಶರು ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ನಿರ್ಲಕ್ಷಿಸಿದ್ದರೆ ಅಥವಾ ಚೆಕ್ಕುಬಂದಿ ತಪ್ಪಾಗಿ ದಾಖಲಿಸಿದ್ದರೆ ಹೈಕೋರ್ಟಿಗೆ ದೂರು ನೀಡಬಹುದು. ಅನಗತ್ಯ ಕಿರುಕುಳ ನೀಡಿದ ನಗರಸಭೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು.
ಸಿವಿಲ್ ಕೋರ್ಟ್ನಲ್ಲಿ ದಾವಾ ಹೂಡಿ
ಹೆಸರು, ಊರು ಬೇಡ
ಮಿತ್ರರೊಬ್ಬರಿಗೆ ಚೆಕ್ ಮೂಲಕ ರು. 3000 ಸಾಲ ಕೊಟ್ಟಿದ್ದು, ಸಾಯುವುದಕ್ಕೆ ಮುಂಚೆ ನನ್ನ ಸಾಲ ವಾಪಸ್ ಕೊಡಬೇಕೆಂದು ಕಾಗದವೊಂದರಲ್ಲಿ ಬರೆದು ಸತ್ತರು. ನಾನು ಈ ಹಣ ವಾಪಸ್ ಪಡೆಯಲು ಯಾವ ಸೆಕ್ಷನ್ ಅಡಿ ದೂರು ದಾಖಲಿಸಬೇಕು?
- ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆಯ ಕಲಂ 26 ಹಾಗೂ ಆದೇಶ ಗಐಐರ ನಿಯಮ 2ರಂತೆ ದಾವಾ ಹೂಡಬೇಕು.
ಪೆನ್ಷನ್ ಮೇಲೆ ಯಾರಿಗೂ ಹಕ್ಕಿಲ್ಲ
ಡಿ.ಟಿ.ಎನ್. ಪ್ರಸಾದ್, ಗೋಕುಲ, ಬೆಂಗಳೂರು
ತಾಯಿಗೆ ಕುಟುಂಬ ವೇತನ (ಪೆನ್ಷನ್) ಬರುತ್ತಿದ್ದು, ನನ್ನ ಸಹೋದರನೊಬ್ಬ ಅದರಲ್ಲಿ ತನಗೆ ಹಕ್ಕಿದೆಯೆಂದು ದಾವಾ ಹಾಕುವುದಾಗಿ ಹೆದರಿಸುತ್ತಿದ್ದಾನೆ. ಪರಿಹಾರವೇನು?
- ಕಲಂ 13 ಹಿಂದೂ ಉತ್ತರಾಧಿಕಾರ ಕಾಯ್ದೆಯನ್ವಯ ನಿಮ್ಮ ತಾಯಿಗೆ ಬಂದ ಪೆನ್ಷನ್ ಹಣವನ್ನು ಆಕೆ ತನಗೆ ಸರಿಕಂಡ ರೀತಿಯಲ್ಲಿ ವಿಲೇವಾರಿ ಮಾಡಲು ಸಂಪೂರ್ಣ ಸ್ವತಂತ್ರಳು. ಅದರ ಮೇಲೆ ಯಾರಿಗೂ ಹಕ್ಕಿಲ್ಲ. ಒಂದು ವೇಳೆ ವಿಲೇವಾರಿ ಮಾಡದೇ ಸತ್ತರೆ ಆಗ ಎಲ್ಲ ಮಕ್ಕಳಿಗೂ (ಹೆಣ್ಣು ಮಕ್ಕಳೂ ಸೇರಿ), ಅದರ ಮೇಲೆ (ಆಕೆಯ ಬಳಿ ಇದ್ದ ಹಣದ ಮೇಲೆ) ಸಮಾನ ಹಕ್ಕಿರುತ್ತದೆ.
ಎಲ್ಲ ಮಕ್ಕಳಿಗೂ ಹಕ್ಕಿದೆ
ಮಾ.ತಿ. ಆಲೂರು
ತಂದೆಗೆ ಇಬ್ಬರು ಹೆಂಡತಿಯರು. ಎರಡನೇ ಹೆಂಡತಿ ಮಕ್ಕಳಿಗೆ ನಮಗೆ ತಿಳಿಸದೇ ನಮ್ಮ ತಂದೆ ನಿವೇಶನ ನೋಂದಣಿ ಮಾಡಿಸಿಕೊಟ್ಟಿರುತ್ತಾರೆ. ಮೊದಲನೇ ಹೆಂಡತಿ ಮಕ್ಕಳಾದ ನಮಗೆ ಅದರ ಮೇಲೆ ಹಕ್ಕಿದೆಯೇ? ಈಗ ತಂದೆ ಹಾಗೂ ಇಬ್ಬರು ಹೆಂಡತಿಯರೂ ಮರಣ ಹೊಂದಿದ್ದಾರೆ.
- ಎಲ್ಲ ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಈ ನಿವೇಶನವಲ್ಲದೆ, ಬೇರೆ ಆಸ್ತಿಯಿದ್ದರೆ ವಿಭಾಗ ಮಾಡಿಕೊಳ್ಳುವಾಗ ಅದನ್ನೂ ಗಣನೆಗೆ ತೆಗೆದುಕೊಂಡು ವಿಭಾಗಿಸಬಹುದು. ಆದರೆ ಆ ನಿವೇಶನ ಸ್ವಯಾರ್ಜಿತವಾಗಿದ್ದರೆ ಅದನ್ನು ವಿಭಾಗದಲ್ಲಿ ಗಣನೆಗೆ ತೆಗೆದುಕೊಳ್ಳುವಂತಿಲ್ಲ. <
- ಎಚ್.ಆರ್. ಕಸ್ತೂರಿರಂಗನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.