ಮಕ್ಕಳ ಕವಿತೆ
ಏಕೆ ಇನಿತು ಕೋಪ ನಮ್ಮ-
ಮೇಲೆ ಸೂರ್ಯ ದೇವನೆ?
ಬೆಳಗಿನಿಂದ ಸಂಜೆ ವರೆಗೆ
ಕೊಡುವೆ ಬಿಸಿಲ ವೇದನೆ!
ರಜೆಯು ಉಂಟು ಶಾಲೆಗಳಿಗೆ
ಆಟ ಆಡೊ ಮನಸಿದೆ,
ನೆತ್ತಿ ಸುಡುವ ಬಿಸಿಲು ಉಂಟು
ಏಕೊ ನಿನಗೆ ಮುನಿಸಿದೆ!
ಫ್ಯಾನು ತಿರುಗುತಿದ್ದರೂವೆ
ಬಿಸಿಯ ಗಾಳಿ ಬೀಸಿದೆ,
ಎತ್ತ ನೋಡು ಎಲ್ಲೂ ನೋಡು
ಸೆಖೆಯೆ ಬಲೆಯ ಹಾಸಿದೆ!
ಕೆರೆ, ನದಿ, ಬಾವಿಗಳಲೂ
ನೀರು ಬತ್ತಿಹೋಗಿವೆ,
ಬಿಸಿಲ ಅಮಲಿನೊಳಗೆ ನಮ್ಮ
ಕಣ್ಣುಗಳೂ ತೂಗಿವೆ!
ಜೀವದುಳಿವು, ಉತ್ಪತ್ತಿಗೆ
ನಿನ್ನ ಬಿಸಿಲೇ ಕಾರಣ,
ಗುರುಗಳೆಮಗೆ ತಿಳಿಸಿರುವರು
ಅದಕೆ ಮರೆವೆ, ತಲ್ಲಣ! <
- ಗುರುರಾಜ ಬೆಣಕಲ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.