ಕಲಾಲೋಕ ಸೃಷ್ಟಿ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚಿಗೆ ನಡೆದ ಸೃಷ್ಟಿ ದಸರಾ ರಾಷ್ಟ್ರೀಯ ಸಂಗೀತ - ನೃತ್ಯ - ನಾಟಕ ಉತ್ಸವದಲ್ಲಿ ನೃತ್ಯ ಕಲಾಮಂದಿರದವರ ನೃತ್ಯಗಳು ವರ್ಣಮಯವಾಗಿತ್ತು. ರೂಪಾ ಕಿರಣ್, ಶುಭಾ ಧನಂಜಯ್, ಶ್ರಾವ್ಯ, ಸಂಚಿತಾ ಲಹೋಟೆ, ರೇವತಿ ಶ್ರೀನಿವಾಸನ್, ರಾಧಿಕ ಶೆಟ್ಟಿ ಅವರ ನೃತ್ಯಗಳು ಗಮನ ಸೆಳೆದವು. ಇವರ ಒಡಿಸ್ಸಿ, ಕೂಚಿಪುಡಿ, ದಾಂಡಿಯಾ ನೃತ್ಯಗಳು ಆಕರ್ಷಿಸಿದವು. ತಬಲಾ ತರಂಗ್ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ಡಾ.ಎ.ವಿ.ಸತ್ಯನಾರಾಯಣ ಅವರು ಕುವೆಂಪು ಭಾವಗೀತೆಗಳಿಗೆ ಅದ್ಭುತ ಕಥಕ್ ನೃತ್ಯ ಪ್ರದರ್ಶನ ನೀಡಿದರು. ಡಾ.ಆರ್.ಕೆ.ಶ್ರೀಕಂಠನ್ ಅವರಿಗೆ 'ಸೃಷ್ಟಿ ರಾಷ್ಟ್ರೀಯ ಸಂಗೀತ ಸಮಾನ್' ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.