ಘರ್ ಘರ್
ಕೋಲ್ಯ ಮದ್ವೆಯಾಗಿ ಕೆಲವೇ ದಿನಗಳಾಗಿದ್ದವು. ಹನಿಮೂನ್ ಮುಗಿಸಿ, ಆಫೀಸಿಗೆ ಹೋದ. ಯಾಕೋ ಅನುಮಾನ ಶುರುವಾಗಿ, ಹೆಂಡ್ತಿಗೆ ಕರೆ ಮಾಡಿದ.
ಕೋಲ್ಯ:ಎಲ್ಲಿದ್ದೀಯಾ?
ಕೋಲ್ಯಿಣಿ: ಮನೆಯಲ್ಲಿದ್ದೀನ್ರೀ...
ಕೋಲ್ಯ: ಹೌದಾ? ಒಮ್ಮೆ ಮಿಕ್ಸಿ ಆನ್ ಮಾಡು.
ಹೆಂಡ್ತಿ ಮಿಕ್ಸಿ ಆನ್ ಮಾಡಿದಳು. ಘರ್ರ್ ಘರ್ರ್ ಸೌಂಡು ಕೇಳಿತು.
ಕೋಲ್ಯ: ಸರಿ, ಸರಿ. ಸಂಜೆ ಬರ್ತೀನಿ.
ಮರುದಿನ ಮತ್ತೆ ಅದೇ ಅನುಮಾನ.
ಕೋಲ್ಯ: ಎಲ್ಲಿದ್ದೀಯಾ?
ಕೋಲ್ಯಿಣಿ: ಮನೆಯಲ್ಲಿದ್ದೀನ್ರೀ.
ಕೋಲ್ಯ: ಮಿಕ್ಸ್ ಆನ್ ಮಾಡು...
ಘರ್ರ್ ಘರ್ರ್ ಸದ್ದು ಕೇಳಿತು.
ಮೂರನೇ ದಿನ ಕೋಲ್ಯ ಫೋನು ಮಾಡಲಿಲ್ಲ. ಅದಕ್ಕೂ ಮೊದಲೇ ಮನೆಗೆ ಬಂದ. ನೋಡಿದರೆ ಹೆಂಡತಿ ಇರಲಿಲ್ಲ. ಕೆಲಸದವಳೊಬ್ಬಳೇ ಇದ್ದಳು.
ಕೋಲ್ಯ: ಎಲ್ಲಿ ಇವಳು?
ಕೆಲಸದಾಕೆ: ಎಲ್ಲಿಗೋ ರೆಡಿಯಾಗಿ ಹೋದ್ರಪ್ಪ, ಬ್ಯಾಗಲ್ಲಿ ಮಿಕ್ಸಿನೂ ಇಟ್ಕೊಂಡ್ ಹೋದ್ರು!
ಜಂಪ್ ಜಂಪ್
ಫಂಟಾ: ಬಿಸಿ ಸ್ಟೌ ಮೇಲೆ ಯಾಕೆ ಪಾಪ್‌ಕಾರ್ನ್ ಜಂಪ್ ಆಗುತ್ತೆ?
ಕೋಲ್ಯ: ನೀನು ಅದರ ಮೇಲೆ ಕೂತ್ರೂ ಹಾಗೇ ಜಂಪ್ ಆಗ್ತೀಯಾ.
===
ಒಮ್ಮೆ ಭಗವಂತ ಕೋಲ್ಯನ ಅಷ್ಟೂ ಮೆಮೊರಿಯನ್ನೂ ಕ್ಲಿಯರ್ ಮಾಡಿದ. ಕೊನೆಗೆ ಕೇಳಿದ, 'ಏನಾದ್ರೂ ನೆನಪಾಗ್ತಿದ್ಯಾ ನಿನ್ಗೆ?'. ಕೋಲ್ಯ ಹೇಳಿದ, 'ನನ್ನ ಹೆಂಡ್ತಿ ನೆನಪಾಗ್ತಿದ್ದಾಳೆ'. ಭಗವಂತನಿಗೆ ತಲೆಬಿಸಿ ಆಯ್ತಂತೆ; 'ಏನ್ ಮಾಡಿದ್ರೂ ಈ ವೈರಸ್ ಡಿಲೀಟ್ ಆಗೋದೇ ಇಲ್ವಲ್ಲಾ!'.