ಘ್ನಾನಪೀಠ
- ರವೀಂದ್ರನಾಥ ಶಿ. ಯಡಹಳ್ಳಿ
ಸ್ಟಾರ್ಗೂ ಬಾರ್ಗೂ ಇರುವ ವ್ಯತ್ಯಾಸವೇನೂ ಗುರೂ?
-ಸ್ಟಾರ್ ಕೆಟ್ಟರೆ 'ಬಾರ್'ಗಳ ಹಿಂದೆ ಹೋಗೋದು ಖಂಡಿತಾ ಸಾರ್!
- ಸ್ವಾಮಿ ನಿರ್ಮಲಾ, ಉಡಿಗಾಲ
ದೊಡ್ಡ ಮಟ್ಟದಲ್ಲಿ ಮೂರ್ಖರಾದವರಿಗೆ ಸನ್ಮಾನ ಹಮ್ಮಿಕೊಂಡಿದ್ದೇನೆ. ಮುಖ್ಯ ಅತಿಥಿಯಾಗಿ ಬರುವೆಯಾ ಘ್ನಾನ?
-ನನ್ನ ಬಗ್ಗೆ ನಾನೇ ಹೇಳಿಕೊಳ್ಳುವಷ್ಟು 'ಸಣ್ಣ ಮಾನ' ನನ್ನದಲ್ಲಪ್ಪಾ!
- ಪಿ.ಜೆ.ರಾಘವೇಂದ್ರ, ಮೈಸೂರು
ರಾಜಕಾರಣಿಗಳು ಅಜ್ಞಾನಿಗಳು ಎಂದಿದ್ದಾರಲ್ಲಾ ವಿಜ್ಞಾನಿ?
-'ರತ್ನ'ದಂಥ ಮಾತು ಅಂದ್ರಂತೆ ಕಾಂಗ್ರೆಸ್ನವ್ರು!
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಹೆಂಡತಿ ಹಾಗೂ ಗೆಳತಿಗೂ ಮಧ್ಯೆ ಏನು ವ್ಯತ್ಯಾಸ?
-ಏನೇ ಆದ್ರೂ ಥಿಯೇಟರ್ನಲ್ಲಿ ಕುಳಿತು ನೋಡಿದಷ್ಟು ಮಜಾ ಡಿವಿಡಿಯಲ್ಲಿ ನೋಡೋ ಸಿನಿಮಾದಿಂದ ಸಿಗೋದಿಲ್ಲ ಅಲ್ವಾ?
- ಘಾಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.