ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಮತ್ತೆ ಕಿಷ್ಕಿಂಧೆಗೆ

Mainashree
Updated On : 23 Nov 2013, 6:29 am

ಅವತ್ತು-
ಜಾಂಬವ ಬೆನ್ನುತಟ್ಟಿ ಹುರಿದುಂಬಿಸಿದ:್ದ
ನೀನೇ ಕಲಿ ಹನುಮ-
ಕೊಂಕದೆ ಕೊಸರದೆ
ಲಂಕೆಗೆ ಹಾರಲು
ನೀನೇ ಕಲಿ ಹನುಮ-
ಒಂದೇ ನೆಗೆತಕ್ಕೆ ಕಿಷ್ಕಿಂಧೆಯಿಂದ
ಲಂಕೆಗೆ ಚಿಮ್ಮುವ ಸಂಕಲ್ಪ.
ದಿಗ್ದರ್ಶನಕ್ಕೆ ತೃಣಬಿಂದು ಒದಗಿದ್ದ.

ಸೊಗೆದು ಹೊಗೆಯಟ್ಟಕ್ಕೆ
ಒಗಾಯಿಸಿದ ಲಡ್ಡು ಒನಕೆ ಅಕಾ-
ಕೊನರಿ ಲಕ ಲಕ!
ಚಿವುಟಿದಲ್ಲೇ ಚಿಗಿದು ನಿಲ್ಲುವ ಛಲ

ಇಕಾ! ಇಲ್ಲೇ ಈ ತಿರುವಲ್ಲೇ
ಹೊಡೆದವಘಡದ ಉರಾವರಿಯಲ್ಲಿ
ಆ ಮನೆಯ ಕದ ತಟ್ಟಿ ಮರಳಿದ್ದೆ.

ಛತ್ತಿಗೆ ನೆಟ್ಟ ಕಣ್ಣು; ಹಾಸಿಗೆಗಂಟಿದ್ದ ಬೆನ್ನು
ಅಲುಗಾಡಲಾರದ ಅವಯವ.
ಒಂದ? ಎರಡ?
ಎಲ್ಲ ಅಲ್ಲೇ ಎಂಬಾಗ-
ಬಿಳಿ ಬಟ್ಟೆ ಸುತ್ತಿ, ಹಗ್ಗ ಬಿಗಿದು
ಇನ್ನೇನು ಹೆಗಲೇರಬೇಕೆನ್ನುವಷ್ಟರಲ್ಲಿ-

ರೊಣೆಯ ತುದಿಯಲ್ಲಿದ್ದ ಉಸಿರು,
ಆಪ್ತ ಆಸರೆಯ ಊತಿಗೆ ಅಂತೂ
ತೆವಳುತ್ತೆದ್ದು ನಿಂತು-
ಗುರಿ ತಡುಕುತ್ತ
ಮತ್ತೆ ಕಿಷ್ಕಿಂಧೆಗೆ.

ತೃಣಬಿಂದು ಮಾತ್ರ ಪತ್ತೆ ಇಲ್ಲ.

- ಡಾ. ಜಿ.ಎಸ್.ಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments