ಸಾಪ್ತಾಹಿಕಪ್ರಭ

ಮೇಲು ಕೀಳು

ನಮ್ಮ ಸಮೂಹ ಮಾಧ್ಯಮಗಳಿಗೂ ವಿಚಾರಜೀವಿಗಳಿಗೂ ಮಹಿಳಾ ದಿನಾಚರಣೆ ಎಂದರೆ ಅದೇನೋ ಮೋಹ. ಅಂದು ಸರ್ಕಾರಗಳೂ ಕೋಟಿ ಮೌಲ್ಯದ ಜಾಹಿರಾತುಗಳನ್ನು ಮಾಧ್ಯಮಗಳಿಗೆ ನೀಡುತ್ತವೆ. ಮಹಿಳೆಯರ ಕಷ್ಟ, ಕಣ್ಣೀರು, ಹಕ್ಕುಗಳು, ಅನ್ಯಾಯಗಳನ್ನು ಕುರಿತು ಡಾಕ್ಯುಮೆಂಟರಿಗಳೂ ಪ್ರಸಾರವಾಗುತ್ತವೆ. ಸ್ತ್ರೀವಾದಿಗಳೂ ಅವರನ್ನು ಬೆಂಬಲಿಸುವ ಪುರುಷರೂ ಸಾಕಷ್ಟು ಭಾಷಣ ಮಾಡುತ್ತಾರೆ.
ಮಾಡಲಿ ಬಿಡಿ. ಪುರುಷರ ದಿನಾಚರಣೆ ಎಂತಲೂ ಒಂದಿದೆ ಎಂಬುದು ನಿಮಗೆ ಗೊತ್ತೆ? ಮೊನ್ನೆ ಮೊನ್ನೆ ನ.19ರಂದು ಈ ದಿನಾಚರಣೆ ನಡೆಯಿತು. ಕನಿಷ್ಠ ಈ ಬಗ್ಗೆ ಯಾರೂ ಮಾತಾಡಿದ್ದೂ ವರದಿಯಾಗಲಿಲ್ಲ. ಕಿಂಚಿತ್ತಾದರೂ ಗಮನ ಹರಿಸಿ ಅವರು ಕುರಿತು ಮಾತನಾಡಲಾಗದಷ್ಟು ಕೀಳು ಪ್ರಾಣಿಗಳೆ ಪುರುಷರೆಂದರೆ?
ಭಾರತ ಸೇರಿ ಇನ್ನೂ 60 ದೇಶಗಳಲ್ಲಿ ನ.19ರಂದು ಪುರುಷರ ದಿನ. ಅಂದು ಸಮಾಜವನ್ನು ರೂಪಿಸುವಲ್ಲಿ ಪುರುಷರಿಗೆ ಇರುವ ಪಾತ್ರ, ಅವರ ಕಷ್ಟ ಸುಖಗಳ ಬಗ್ಗೆ ಚರ್ಚೆಯಾಗಬೇಕು. ಪುರುಷ ತೆಗೆದುಕೊಳ್ಳುವ ರಿಸ್ಕ್, ಆತನ ದುಡಿಮೆ, ಆತ ಹೊರುವ ಕುಟುಂಬ ಜವಾಬ್ದಾರಿ... ಇವುಗಳ ಬಗ್ಗೆ ಆತನಿಗೆ ಸಲ್ಲಬೇಕಾದಷ್ಟು ಗೌರವ ಸಂದಿದೆ ಎಂದು ನಿಮಗೆ ಅನಿಸುತ್ತದೆಯೆ?
ಈ ಪುರುಷರ ದಿನಾಚರಣೆಯ ಹಿಂದೆ ಇಂತಹದೇ ಹಿನ್ನೆಲೆ ಇದೆ ಎಂದು ಹೇಳಲಾಗದು. ಆದರೂ ಇದರ ಹಿನ್ನೆಲೆ 1960ರಷ್ಟು ಹಿಂದಕ್ಕೆ ಹೋಗುತ್ತದೆ. ಅಮೆರಿಕಾ ಹಾಗೂ ಯುರೋಪ್ ಖಂಡಗಳಲ್ಲಿ ಸ್ತ್ರೀವಾದ ಪ್ರಭಾವಿಯಾದಂತೆ, ಅದರಿಂದ ಮೂಡಿದ ಕಾನೂನುಗಳೂ ಹೆಚ್ಚತೊಡಗಿದವು. ಇವೆಲ್ಲ ಸ್ತ್ರೀಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡಿದ್ದವು. ಆದರೆ ಇದೇ ವೇಳೆಗೆ ಇವುಗಳ ದುರುಪಯೋಗಗಳೂ ಹೆಚ್ಚತೊಡಗಿದವು. ಸಮಾಜದಲ್ಲಿ ಸ್ತ್ರೀಯ ಹಕ್ಕುಗಳನ್ನು ಗುರುತಿಸಿದಂತೆ, ಪುರುಷರ ಹಕ್ಕುಗಳನ್ನೂ ಗುರುತಿಸಬೇಡವೆ ಎಂಬ ಪ್ರಶ್ನೆಗಳನ್ನೂ ಕೆಲವರು ಎತ್ತತೊಡಗಿದರು.
ಇದಕ್ಕೆ ಇನ್ನಷ್ಟು ಆಧುನಿಕ ರೂಪ ಕೊಟ್ಟವರು ಟ್ರಿನಿಡಾಡ್‌ನ ವೆಸ್ಟ್‌ಇಂಡೀಸ್ ವಿಶ್ವವಿದ್ಯಾಲಯದ ಡಾ.ಜಿರೋಮ್ ತ್ರಿಲೋಕ್ ಸಿಂಗ್. ತ್ರಿಲೋಕ್ ಸಿಂಗ್ ತಮ್ಮ ತಂದೆಯ ದುಡಿಮೆ, ಸೇವೆಯನ್ನು ತುಂಬಾ ಹತ್ತಿರದಿಂದ ಗಮನಿಸಿದ್ದರು. ಅವರ ತಂದೆ ಕುಟುಂಬ ನಿರ್ವಹಿಸಿ, ಮಕ್ಕಳನ್ನು ಆದರ್ಶವಂತರನ್ನಾಗಿ ತಿದ್ದಿ ತೀಡಿ, ಅವರಿಗೆ ವಿದ್ಯೆ ಹೇಳಿಕೊಟ್ಟು, ಉದ್ಯೋಗ ಮತ್ತಿತರ ಮಾರ್ಗಗಳನ್ನು ತೋರಿಸಿ ಉತ್ತಮ ಪೌರರನ್ನಾಗಿ ಮಾಡಿ ಸಮಾಜಕ್ಕಾಗಿ ನೀಡಿದ್ದರು.
ಅಂತಹ ಪ್ರಯತ್ನವನ್ನು ಎಲ್ಲ ಉತ್ತಮ ತಂದೆಯರೂ ಮಾಡುತ್ತಾರೆ. ಆದರೆ ಅದು ಆತನ ಜವಾಬ್ದಾರಿ ಎಂದು ಸಮಾಜ ಭಾವಿಸುತ್ತದೆ. ತಾಯಿಯ ಶ್ರಮವನ್ನು ತ್ಯಾಗವೆಂದು ಬಣ್ಣಿಸಲಾಗುತ್ತದೆ, ಅದನ್ನು ಸಮಾಜವು ಸಹಜವಾಗಿ ಅಂಗೀಕರಿಸುತ್ತದೆ. ಈ ವ್ಯತ್ಯಾಸವನ್ನು ನಾನು ವಿರೋಧಿಸುತ್ತೇನೆ. ನನ್ನ ತಂದೆಯ ಸೇವೆಯನ್ನು ಸ್ಮರಿಸಿ, ಅವರ ಹುಟ್ಟಿದ ದಿನವನ್ನು (ನ.19) ಪುರುಷರ ದಿನಾಚರಣೆಯನ್ನಾಗಿ ಆಚರಿಸುತ್ತೇನೆ ಎಂದು ತ್ರಿಲೋಕ್ ಸಿಂಗ್ ಪ್ರಕಟಿಸಿದರು. ಇದು ಬಹುಬೇಗನೆ ಅಲ್ಲಿನ ಪುರುಷರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ನಂತರ ದೇಶದ ಇತರ ಭಾಗಗಳಿಗೂ ಹರಡಿತು. ಅಲ್ಲಿಂದ ಖಂಡಾಂತರಕ್ಕೆ ಹರಡಿತು.
ಈಗ ಅನೇಕ ವಿಶ್ವವಿದ್ಯಾಲಯಗಳಲ್ಲಿ ವುಮೆನ್ಸ್ ಸ್ಟಡಿ ಸೆಂಟರ್ಸ್ ಇವೆ. ಮಹಿಳಾ ಅಂಶಗಳ ಮೇಲೆ ಅಧ್ಯಯನಗಳೂ ಮೊದಲಾಗಿವೆ. ಅನೇಕ ವರ್ಷಗಳ ಕಾಲ ನಡೆದ ವುಮೆನ್ಸ್ ಸ್ಟಡೀ ಸೆಂಟರ್ಸ್ ಕೆಲಸಗಳನ್ನು ಗಮನಿಸಿದ ಪ್ರೊಫೆಸರ್ ಥಾಮಸ್ ಓಸ್ಟರ್ ಎಂಬವರು ಮಿಸ್ಸೋರಿ ಯೂನಿವರ್ಸಿಟಿಯಲ್ಲಿ ಮೆನ್ಸ್ ಸ್ಟಡೀಸ್ ಸೆಂಟರನ್ನು ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯಲ್ಲಿ ಪುರುಷರಿಗೆ ಸಂಬಂಧಿಸಿದ ವಿಚಾರಗಳು, ಸಮಸ್ಯೆಗಳ ಕುರಿತು ಅಧ್ಯಯನ ನಡೆಯುತ್ತದೆ. ಆದರೆ ಅವರ ಆಲೋಚನೆಗಳಿಗೆ ಪುರುಷರಿಂದಲೇ ಪೂರಕ ಪ್ರತಿಕ್ರಿಯೆ ದೊರೆಯಲಿಲ್ಲ. 1993 ರಲ್ಲಿ ಮೊದಲ ಸಾರಿ ಪುರುಷರಿಗಾಗಿಯೇ ಪ್ರತ್ಯೇಕ ಸಮಾವೇಶ ಏರ್ಪಡಿಸಿದಾಗ ಬಂದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಎರಡು! ಆದರೂ ಅವರ ಹಿಡಿದ ಛಲ ಬಿಡದೆ ಪ್ರತಿ ವರ್ಷವೂ ಸಮಾವೇಶ ಏರ್ಪಡಿಸಿದರು. ನಾಲ್ಕು ವರ್ಷ ನಂತರ ಎಲ್ಲರಿಂದ ಮೆಚ್ಚುಗೆ, ಮನ್ನಣೆ ಲಭಿಸಿದವು.
ಪ್ರತಿ ವರ್ಷದ ಆಚರಣೆಗೂ ಒಂದು ಹೊಸ ಥೀಮ್ ಇರುತ್ತದೆ. ಕಳೆದ ವರ್ಷ 'ಪುರುಷರು, ಹುಡುಗರ ಆನಂದಮಯ, ಆರೋಗ್ಯ ಜೀವನ' ಥೀಮ್ ಆಗಿದ್ದರೆ, ಈ ವರ್ಷ ಅದು 'ಪುರುಷರು ಮತ್ತು ಬಾಲಕರ ಸುರಕ್ಷತೆ' ಆಗಿದೆ.
ಪುರುಷರು ಪ್ರತಿ ದಿನವೂ ಮಾಡುವ ತ್ಯಾಗ ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಪತ್ನಿ ಹಾಗೂ ಮಕ್ಕಳಿಗಾಗಿ ಆತ ಕಠಿಣವಾದ ಕೆಲಸ ಕಾರ್ಯಗಳನ್ನು ಮಾಡುತ್ತಾನೆ. ಕುಟುಂಬಕ್ಕೆ ರಕ್ಷಣೆ, ಆರ್ಥಿಕ ಭದ್ರತೆ ಕಲ್ಪಿಸಲು ನಿರಂತರ ಶ್ರಮಿಸುತ್ತಾನೆ. ಅದಕ್ಕಾಗಿ ರಿಸ್ಕ್ ತೆಗೆದುಕೊಳ್ಳುತ್ತಾನೆ. ಜೀವನವಿಡೀ ಅವರಿಗಾಗಿಯೇ ದುಡಿದರೂ ಕೊನೆಗಾಲದಲ್ಲಿ ಪತ್ನಿ, ಮಕ್ಕಳಿಂದ ದೂಷಣೆ ಎದುರಿಸುವವರ ಸಂಖ್ಯೆ ಸಾಕಷ್ಟು. ಪುರುಷರಲ್ಲಿ ಎಷ್ಟೋ ಮಂದಿ ಆದರ್ಶ ವ್ಯಕ್ತಿಗಳಿದ್ದಾರೆ. ಆದರೆ ಅಂತಹ ರೋಲ್ ಮಾಡೆಲ್‌ಗಳನ್ನು ಗುರುತಿಸಿ ಪ್ರಪಂಚದ ಮುಂದೆ ನಿಲ್ಲಿಸುವ ಬದಲು, ನೆಗೆಟಿವ್ ವ್ಯಕ್ತಿತ್ವಗಳನ್ನೇ ಹುಡುಕಿ ಮುಂದಿಡಲಾಗುತ್ತಿದೆ. ಸ್ತ್ರೀ ಪುರುಷರಿಗೆ ಸಮಾನವಾದ ಹಕ್ಕುಗಳಿವೆ. ಆದರೆ ಕೆಲ ಕಾನೂನುಗಳು ಸ್ತ್ರೀಯರ ಪರವಾಗಿವೆ. ಇಂಥ ತಾರತಮ್ಯವನ್ನು ಸರಕಾರಗಳು ಮಾಡಬಹುದೆ? ಪುರುಷರಿಗೆ ನ್ಯಾಯ ದೊರೆಯುವುದೆಂದು? ಈ ಪ್ರಶ್ನೆಯನ್ನು ಪುರುಷ ದಿನಾಚರಣೆಯಲ್ಲಿ ಮಗ್ನರಾದವರು ಕೇಳುತ್ತಿದ್ದಾರೆ.

- ಎಂ.ಆರ್. ನಾಗರಾಜರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!