ಇಂಟರ್ವ್ಯೂ
ಸಂದರ್ಶಕ: ಒಂದು ವಿಮಾನದಲ್ಲಿ 500 ಇಟ್ಟಿಗೆಗಳಿವೆ. ಒಂದನ್ನು ಹೊರಗೆ ಎಸೆದರೆ ಉಳಿಯುವುದು ಎಷ್ಟು?
ಕೋಲ್ಯ: ತುಂಬಾ ಈಸಿ, 499.
ಸಂದರ್ಶಕ: ಆನೆಯನ್ನು ಫ್ರಿಡ್ಜೊಳಗೆ ಸೇರಿಸಲು ಇರುವ 3 ಹಂತಗಳೇನು?
ಕೋಲ್ಯ: ಫ್ರಿಡ್ಜ್ ಬಾಗಿಲು ಓಪನ್ ಮಾಡೋದು, ಆನೆಯನ್ನು ಒಳಗೆ ಹಾಕೋದು, ಫ್ರಿಡ್ಜ್ ಬಾಗಿಲು ಮುಚ್ಚೋದು.
ಸಂದರ್ಶಕ: ಜಿಂಕೆಯನ್ನು ಫ್ರಿಡ್ಜೊಳಗೆ ಸೇರಿಸಲು ಇರುವ 4 ಹಂತಗಳೇನು?
ಕೋಲ್ಯ: ಫ್ರಿಡ್ಜ್ ಬಾಗಿಲು ಓಪನ್ ಮಾಡೋದು, ಆನೆಯನ್ನು ಹೊರಗೆ ಹಾಕೋದು, ಜಿಂಕೆಯನ್ನು ಒಳಗೆ ಸೇರಿಸುವುದು, ಫ್ರಿಡ್ಜ್ ಬಾಗಿಲು ಮುಚ್ಚೋದು.
ಸಂದರ್ಶಕ: ಅದು ಸಿಂಹದ ಜನ್ಮದಿನ. ಅಲ್ಲಿ ಎಲ್ಲ ಪ್ರಾಣಿಗಳೂ ಇದ್ದವು. ಆದರೆ, ಒಂದನ್ನು ಬಿಟ್ಟು. ಯಾವುದದು? ಏಕೆ?
ಕೋಲ್ಯ: ಜಿಂಕೆ. ಅದು ಫ್ರಿಡ್ಜಲ್ಲಿದೆ.
ಸಂದರ್ಶಕ: 'ಮೊಸಳೆಗಳಿವೆ' ಎಂಬ ಫಲಕವಿರುವ ನದಿಯನ್ನು ಯುವಕ ದಾಟಬೇಕು. ಹೇಗೆ?
ಕೋಲ್ಯ: ದಾಟಬಹುದು ಸರ್... ಏಕೆಂದರೆ, ಮೊಸಳೆಗಳೆಲ್ಲ ಸಿಂಹದ ಬರ್ತ್ಡೇ ಪಾರ್ಟಿಯಲ್ಲಿವೆ.
ಸಂದರ್ಶಕ: ಕೊನೇ ಪ್ರಶ್ನೆ. ಹಣ್ಣು ಹಣ್ಣಾದ ಮುದುಕಿ ಕೊನೆಗೆ ಸತ್ತಳು. ಹೇಗೆ?
ಕೋಲ್ಯ: ಬಹುಶಃ ಅನಾರೋಗ್ಯದ ಕಾರಣ ಇರಬೇಕು.
ಸಂದರ್ಶಕ: ನೋ ನೋ... ವಿಮಾನದಿಂದ ಹೊರಗೆ ಎಸೆದ್ರಲ್ಲ ಆ ಇಟ್ಟಿಗೆ ಅವಳ ತಲೆಮೇಲೆ ಬಿದ್ದು ಸತ್ತಳು. ನಿನ್ಗೆ ನಮ್ಮಲ್ಲಿ ಕೆಲ್ಸ ಇಲ್ಲ ನಡೀ...
=========
ಪತ್ನಿಗೆ ಹುಡುಕಾಟ
ಕೋಲ್ಯ ಮತ್ತು ಫಂಟಾ ಇಬ್ಬರ ಹೆಂಡತಿಯರೂ ಕಳೆದುಹೋಗಿದ್ದರು. ಎಲ್ಲಿರಬಹುದು ಎಂದು ಇಬ್ಬರೂ ತುಂಬಾ ದಿನದಿಂದ ಹುಡುಕುತ್ತಿದ್ದರು. ಈ ನಡುವೆ ದಾರಿಯಲ್ಲಿ ಪರಸ್ಪರ ಭೇಟಿಯಾದರು.
ಫಂಟಾ: ನನ್ನ ಹೆಂಡ್ತಿಯನ್ನು ಕಳ್ಕೊಂಡಿದ್ದೀನಿ ಮಾರಾಯ.
ಕೋಲ್ಯ: ರಿಯಲಿ? ನಾನೂ ನನ್ನ ಹೆಂಡ್ತಿಯನ್ನು ಕಳ್ಕೊಂಡಿದ್ದೀನಿ. ಅದ್ಸರಿ, ನಿನ್ನ ಹೆಂಡ್ತಿ ನೋಡಲು ಹೇಗಿದ್ದಾಳೆ?
ಫಂಟಾ: ಸ್ಲಿಮ್ಮಾಗಿ ಎತ್ತರ ಇದ್ದಾಳೆ. ಸೆಕ್ಸಿ ಲುಕ್ಕು. ಮಿನಿ ಸ್ಕರ್ಟ್ ಹಾಕ್ಕೊಂಡಿದ್ದಳು.
ಕೋಲ್ಯ: ಹಾಗಾದ್ರೆ, ಮೊದಲು ನಿನ್ನ ಹೆಂಡ್ತಿಯನ್ನೇ ಹುಡುಕೋಣ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.