ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಯಡಿಯೂರಪ್ಪನವರನ್ನು 'ಏಕೋಪಾಧ್ಯಾಯ ಶಾಲೆ'ಯ ಮುಖ್ಯೋಪಾಧ್ಯಾಯರೆನ್ನಬಹುದೇ?

Vishwanath S
Updated On : 5 Oct 2013, 5:40 am

ವಿ. ಹೇಮಂತಕುಮಾರ್, ಬೆಂಗಳೂರು.
ದಾನಗಳಲ್ಲೇ ಶ್ರೇಷ್ಠ ದಾನ ಯಾವುದು?
- ಬ್ರಹ್ಮಚಾರಿಗಳಿಗೆ ಕನ್ಯಾದಾನ, ಸಂಸಾರಿಗಳಾದ ಮೇಲೆ ಸಮಾಧಾನ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ.
ಹೆಣ್ಣಿಗೆ ಮೌನವೇ ಆಭರಣವಂತೆ ನಿಜನಾ?
- ಬೇರೆ ಆಭರಣ ಬೇಕಾದಾಗ ಮೌನವನ್ನೇ ಮುರಿಯುತ್ತಾರೆ!

ವಿ.ಜಿ. ರಾಘವೇಂದ್ರ, ಮೈಸೂರು.
ಯಡಿಯೂರಪ್ಪನವರನ್ನು 'ಏಕೋಪಾಧ್ಯಾಯ ಶಾಲೆ'ಯ ಮುಖ್ಯೋಪಾಧ್ಯಾಯರೆನ್ನಬಹುದೇ?
- ಅವರು ಏಕೋಪಾಧ್ಯಾಯ ಶಾಲೆಯ ಕುಲಪತಿ!

ವಿ. ಹೇಮಂತಕುಮಾರ್, ಬೆಂಗಳೂರು.
ಕಚಗುಳಿ ಇಟ್ಟರೂ ನಮ್ಮ ಪ್ರಧಾನಿಗಳು ನಗಲಿಲ್ಲವಂತೆ!
- ನಗುವುದಿರಲಿ, ಮೊನ್ನೆ ರಾಹುಲ್ ಗಾಂಧಿ ಬರೆ ಹಾಕಿದ್ರೂ ಅಳಲೂ ಇಲ್ಲವಂತೆ!

- ಘಾಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement