ಮೋದಿ ಪ್ರಧಾನಿಯಾದರೆ ನಾನು ಬದುಕಿರಲ್ಲ ಎಂದು ಅನಂತಮೂರ್ತಿ ಹೇಳಿದ್ದಾರಲ್ಲ?
ರವೀಂದ್ರನಾಥ ಶಿ. ಯಡಹಳ್ಳಿ, ಬೀಳಗಿ
ಪ್ರಥಮ ಚುಂಬನ ದಂತಭಗ್ನ, ಕೊನೆಯ ಚುಂಬನ...?
-ನಗ್ನ ಅಂತೆಲ್ಲ ಉತ್ತರ ಹೇಳಕ್ಕೆ ಆಗಲ್ಲಪ್ಪ!
ವಿ. ಹೇಮಂತಕುಮಾರ, ಬೆಂಗಳೂರು
ಕೆಲವು ಸ್ವಾಮೀಜಿಗಳು ಏಕಾಂತ ಸೇವೆಯನ್ನು ಇಷ್ಟಪಡುತ್ತಾರಲ್ಲ?
-ಗುರು'ಕುಲ' ಬೆಳೆಯುವುದು ಬೇಡವೇ?
ಬಾನಂದೂರು ಮಂಜುಳಾ, ದೇವದುರ್ಗ
ಮೋದಿ ಪ್ರಧಾನಿಯಾದರೆ ನಾನು ಬದುಕಿರಲ್ಲ ಎಂದು ಅನಂತಮೂರ್ತಿ ಹೇಳಿದ್ದಾರಲ್ಲ?
-ಅನಾಥೋ ದೈವ ರಕ್ಷಕ! ಪಾಪ.
ಪಿ.ಜೆ. ರಾಘವೇಂದ್ರ, ಮೈಸೂರು
ಖಾಲಿ ಕ್ವಾಟ್ರು ಬಾಟ್ಲ ಹಂಗೆ ಲೈಪು...ಇದು ಭಟ್ಟರ ಸ್ವಾನುಭವವಂತೆ, ನಿಜವೆ?
-ಮೊದಲೆಲ್ಲ 'ಮಧುಪಾನ ಪಾತ್ರೆ ನಿನ್ನೊಡಲು...' ಅಂತಿದ್ರಂತೆ.
ಸಿ. ಅನಂತರಾವ್ ಹಿರೇಹಳ್ಳಿ, ಭರಮಸಾಗರ
ಸ್ಕೂಲ್ನಲ್ಲಿ ಬಾರಿಸುವ ಘಂಟೆಗೂ, ರೈಲ್ವೇ ಸ್ಟೇಷನ್ನಲ್ಲಿ ಬಾರಿಸುವ ಘಂಟೆಗೂ, ದೇವಸ್ಥಾನಗಳಲ್ಲಿ ಬಾರಿಸುವ ಘಂಟೆಗೂ ವ್ಯತ್ಯಾಸವೇನು?
-ಪಾಠದ್ದು, ಓಟದ್ದು, ಊಟದ್ದು!
- ಘಾಟಿ