ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ವೈಭವ ಮಂಗಳೂರು ದಸರಾ

Vishwanath S
Updated On : 12 Oct 2013, 4:59 am

ಕ್ರಾಂತಿಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಡಿ ಅವರ ಕೈಗಳಿಂದಲೇ ಪ್ರತಿಷ್ಠಾಪನೆಗೊಂಡ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರಕ್ಕೆ 101ನೇ ವರ್ಷ. ನವೀಕರಣ ಬಳಿಕ 23 ವರ್ಷಗಳಿಂದ ನಡೆಯುವ ಕುದ್ರೋಳಿಯ ಮಂಗಳೂರು ದಸರಾ ಈಗ ಲಕ್ಷಾಂತರ ಮಂದಿ ಭಕ್ತರನ್ನು ಆಕರ್ಷಿಸುತ್ತಿದೆ.
ನಗರದ ರಾಜರಸ್ತೆಯ 9 ಕಿ.ಮೀ. ಉದ್ದಕ್ಕೂ ದೀಪಗಳ ಅಲಂಕಾರ, ಈ ಬಾರಿ 20 ಲಕ್ಷ ಉರಿಯುವ ಬಲ್ಬ್‌ಗಳನ್ನು ಬಳಸಲಾಗಿದೆ. ಈ ದಸರಾಕ್ಕೆ ಭಕ್ತರೇ ದೇಣಿಗೆ ನೀಡಿ ಮಾಡುತ್ತಿರುವುದು ವಿಶೇಷ. ವಿಜಯದಶಮಿಯಂದು ಸಂಜೆ 4 ಗಂಟೆಯಿಂದಲೇ ಮೆರವಣಿಗೆ ಆರಂಭವಾಗುತ್ತದೆ. ಶಾರದೆ, ಗಣಪತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಪ್ರಭಾ, ಕೂಶ್ಮಾಂಡಿನಿ, ಸ್ಕಂದಪುತ್ರಿ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿಯರ ವಿಗ್ರಹಗಳನ್ನು ಕ್ಷೇತ್ರದಿಂದ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಮುಂಭಾಗದಲ್ಲಿ ಚೆಂಡೆಗಳು, ಬಣ್ಣದ ಕೊಡೆಗಳು, ಹುಲಿವೇಷಗಳು, ಜಾನಪದ, ಸಂಸ್ಕೃತಿ ವೈವಿಧ್ಯದ ನೂರಾರು ಸ್ತಬ್ಧಚಿತ್ರಗಳು ಕಳೆ ಕಟ್ಟುತ್ತವೆ.  ಮುಸ್ಸಂಜೆಯಲ್ಲಿ ಹೊರಟು ರಾತ್ರಿ ಇಡೀ ನಗರ ಸಂಚರಿಸಿ ಮರುದಿನ ಬೆಳಗ್ಗೆ ದೇಗುಲದ ಕೆರೆಯಲ್ಲಿ ಶಾರದೆ ವಿಸರ್ಜನೆ.
ದಿನದಿಂದ ದಿನಕ್ಕೆ ಮಂಗಳೂರು ದಸರಾ ಜನಾಕರ್ಷಣೆ ಪಡೆಯುತ್ತಿದೆ. ಹಿಂದಿನ ಬಾರಿ ಆಸ್ತಾ ಟಿ.ವಿ. ಮೂಲಕ ದಸರಾವನ್ನು 154 ದೇಶಗಳಲ್ಲಿ ವೀಕ್ಷಿಸಿದ್ದಾರೆ. ದ್ರಾವಿಡ ಶೈಲಿ ಎತ್ತರ ರಾಜಗೋಪುರ, ಹೊರ ಆವರಣದಲ್ಲಿ ನೀರಿನ ಕೊಳ, ಉದ್ಯಾನವನ, ಕೈಲಾಸಗಿರಿ, ಶಿವನ ಜಟೆಯಿಂದ ಚಿಮ್ಮುವ ಗಂಗಾ ಕಾರಂಜಿ ಪ್ರವಾಸಿ ಸ್ಥಳವಾಗಲು ಪ್ರಮುಖ ಕಾರಣ. ದೇಗುಲ ನಿರ್ಮಾಣಕ್ಕೆ ಹತ್ತು ಸಮಸ್ತರು ನೆರವಾಗಿದ್ದರೂ ಅದರಲ್ಲಿ ಕುದ್ರೋಳಿ ಜಾರಪ್ಪ ಪ್ರಮುಖರು. ನವೀಕರಣದಿಂದ ಭವ್ಯ ಮಂದಿರವಾಗಿ ರೂಪುಗೊಳ್ಳಲು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಕಾರಣ.

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement