ಘ್ನಾನಪೀಠ
ಪಿ.ಜೆ. ರಾಘವೇಂದ್ರ, ಮೈಸೂರು.
ನಾಚುವುದಕ್ಕೂ ನಂಗಾನಾಚುವುದಕ್ಕೂ ವ್ಯತ್ಯಾಸವೇನು?
- ನಾಚುವುದು ಧರ್ಮ. ನಂಗಾನಾಚುವುದು ಅಧರ್ಮ!
==
ಬಿ.ಎಸ್. ನಾರಾಯಣಸ್ವಾಮಿ, ಬೋಧನ ಹೊಸಹಳ್ಳಿ.
ಇಲ್ಲೊಬ್ಬಳು ನನ್ನ ಕಂಡಾಗಲೆಲ್ಲ 'ನಾಯಿ ಮರಿ... ನಾಯಿ ಮರಿ ತಿಂಡಿ ಬೇಕಾ?' ಅಂತ ಕೇಳುತ್ತಾಳಲ್ಲ?
- 'ತಿಂಡಿ ತಿಂದು ನಿನ್ನ ಮೈಯ ಕಾಯಬೇಕಾ' ಅಂತ ಕೇಳಿ!
==
ಪೇಂಟರ್ ಪಾಪು, ಸಂತೇಮರಹಳ್ಳಿ.
ಜೀವನದಲ್ಲಿ ಎಷ್ಟು ಬಣ್ಣಗಳಿವೆ ಅಂತೀರಾ?
- 'ರಾಜಕೀಯ ಬಣ್ಣ', 'ಜಾತೀಯ ಬಣ್ಣ' ಸೇರಿಸಿದ್ರೆ ಏಳಕ್ಕಿಂತ ಜಾಸ್ತಿಯಾಗುತ್ತೆ!
==
ಉಜ್ಜನಿ ಜಲೇಂದ್ರ, ಮಲುಂಗೆರೆ
ಹೆಂಡತಿಯನ್ನು ಸೈಲೆಂಟ್ ಮೋಡ್ನಲ್ಲಿಡಲು ಯಾವ ಬಟನ್ ಒತ್ತಬೇಕು ಘ್ನಾನಪೀಠ?
- ಬ್ಯಾಟರೀನೇ ತೆಗೀಬೇಕು!
==
ಎ.ಕೆ. ಪಟ್ಟಾಭಿ, ಬೆಂಗಳೂರು.
ಗಂಡಿನ ಐಶ್ವರ್ಯ, ಹೆಣ್ಣಿನ ಸೌಂದರ್ಯ ಎರಡು ಶಾಶ್ವತವಲ್ಲವಂತೆ ಹೌದಾ?
-ಈಗ ಐಶ್ವರ್ಯನ ಸೌಂದರ್ಯನ ಕೊನೆಯವರೆಗೂ ಇಟ್ಕೊಳ್ಳೋಕೆ ಕೃತಕ ಸಾಧನಗಳಿವೆ!
- ಘಾಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.