ಸಾಪ್ತಾಹಿಕಪ್ರಭ

ರಂಗ ಸಾಂತ್ವನ

ಇದು ಕಲೆಯ ಮೂಲಕ ಕಣ್ಣೀರು ಒರೆಸುವ ಕ್ರಿಯೆ! ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ ಉತ್ತರಾಖಂಡದ ಜಲಪ್ರಳಯದಲ್ಲಿ ಅಸುನೀಗಿದವರಿಗೆ ಶ್ರದ್ಧಾಂಜಲಿ ಹಾಗೂ ಸಂತ್ರಸ್ತರ ನೆರವಿಗೆ ರಂಗಯಾತ್ರೆ ಕೈಗೊಂಡಿದೆ. ಭಾರತದಾದ್ಯಂತ ಶಿವ ದೇಶ ಸಂಚಾರ. ಅ.10 ಮತ್ತು 11ರಂದು ಬೆಂಗಳೂರಿನ ತರಳಬಾಳು ಕಲಾಭವನದಲ್ಲಿ ಉದ್ಘಾಟನೆಗೊಂಡ ರಂಗಯಾತ್ರೆಯು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ತಿರುಗಾಟದ ಮೂಲಕ ನೀಡಲಿದೆ.
ಸಿರಿಗೆರೆಯ ಸ್ವಾಮೀಜಿ ರಚಿತ 'ಮರಣವೇ ಮಹಾನವಮಿ'ಯನ್ನು ಡಾ. ಪ್ರಭಾಶಂಕರ ಪ್ರೇಮಿಯವರು 'ಮರಣ್ ಹಿ ಮಹಾನವಮಿ' ಎಂದು ಹಾಗೂ 'ಶರಣಸತಿ ಲಿಂಗಪತಿ' ನಾಟಕವನ್ನು ಡಾ. ಅಬ್ದುಲ್ ಹಮೀದ್ ಅವರು 'ಮೈ ಬಾವರಿ ಚೆನ್ನಾ ಕಿ' ಎಂದು ಹಿಂದಿಯಲ್ಲಿ ಅನುವಾದಿಸಿದ್ದಾರೆ. ಎನ್‌ಎಸ್‌ಡಿ ಪದವೀಧರರಾದ ತ್ರೀಶ್ ಡೋಭಾಲ್ ಅವರು ಅದ್ಭುತವಾಗಿ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಎರಡು ನಾಟಕಗಳಲ್ಲಿ ಹಿನ್ನೆಲೆ ಸಂಗೀತವನ್ನು ಕಿಶ್ಲೇ ಷಾ, ಕೈಲಾಸ್ ಪಾಂಡೆ, ದಾಕ್ಷಾಯಿಣಿ ಕೆ., ಜ್ಯೋತಿ ಅವರು ಹಿಂದಿಯಲ್ಲಿ ಸುಶ್ರಾವ್ಯವಾಗಿ ವಚನಗಳನ್ನು ಹಾಡಿದ್ದಾರೆ. ಕನ್ನಡದ ವಚನಗಳ ಭಾವಾನುವಾದವನ್ನು ತ್ರೀಶ್ ಡೋಭಾಲ್ ಮಾಡಿದ್ದಾರೆ. ರಾಜು ಅವರದು ಬೆಳಕು. ಅಂದಹಾಗೆ, ಈ ರಂಗಯಾತ್ರೆಯ ಅಭಿನಂದನಾರ್ಹರು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಎಚ್.ಎಸ್. ದ್ಯಾಮೇಶ್ ಸಂಚಾರದ ವ್ಯವಸ್ಥಾಪಕರು. ಕಲಾ ತಂಡದಲ್ಲಿ ಇಪ್ಪತ್ತು ಮಂದಿಯಿದ್ದಾರೆ. ಉತ್ತರಾಖಂಡದ ಕಲಾವಿದರೂ ಇಲ್ಲಿದ್ದಾರೆ.

- ರುದ್ರೇಶ್ ಬಿ. ಅದರಂಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!