ಘ್ನಾನ ಪೀಠ
ಪಿ.ಜೆ. ರಾಘವೇಂದ್ರ ಮೈಸೂರು
- ಸಚಿನ್ ನಿವೃತ್ತರಾದರೂ ದೇವೇಗೌಡ್ರು ಇನ್ನೂ ಪ್ರವೃತ್ತರಾಗಿದ್ದಾರಲ್ಲ?
-ಲಿಟಲ್ ಮಾಸ್ಟರ್ಗೂ 'ಪೊಲಿಟಿಕಲ್ ಮಾಸ್ಟರ್'ಗೂ ವ್ಯತ್ಯಾಸವಿದೆ!
ಬಿ.ಎಸ್. ನಾರಾಯಣಸ್ವಾಮಿ, ಬೋಧನ ಹೊಸಹಳ್ಳಿ
- ಅರಗಿಣಿಯಂಥ ಹೆಂಡತಿಯಿದ್ದರೂ ಕೆಲವರಿಗೆ ಪರಸ್ತ್ರೀ ವ್ಯಾಮೋಹವೇಕೆ?
-ಅವರಿಗೆ ಅರಗಿಣಿ ಮಾತು ಬೋರಾಗಿ ಕೋಗಿಲೆ ಹಾಡು ಬೇಕೆನಿಸುತ್ತೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
- ಗುಣಕ್ಕೂ ನಡವಳಿಕೆಗೂ ವ್ಯತ್ಯಾಸವೇನು?
-ಒಂದು ಅಂತರಂಗ, ಮತ್ತೊಂದು ಬಹಿರಂಗ!
ಪಿ.ಜೆ. ರಾಘವೇಂದ್ರ, ಮೈಸೂರು
- ಅಧಿಕಾರಿಗಳ 'ಕೈ ಬಾಯಿ ರೋಗ'ಕ್ಕೆ ಮದ್ದಿಲ್ಲವೆ?
-ಕೈ ಬಿಸಿ ಮಾಡಿದ್ರೆ ಬಾಯಿ ರೋಗ ವಾಸಿಯಾಗುತ್ತೆ!
ಸಂಗಮೇಶ್ ಯಡ್ರಾಮಿ, ಅರಕೇರಾ
- ಆಗ ಪ್ರೀತಿಸಿ ಕೈಕೊಟ್ಟು ಹೋದವಳು ಈಗ ಮತ್ತೆ ಹಿಂತಿರುಗಿ ನೋಡುತ್ತಿದ್ದಾಳಲ್ಲ?
-ಅವಳು ಕೈ ಹಿಡಿದವನು ಕೈ ಕೊಟ್ಟಿರಬೇಕು!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
- ಸನ್ಯಾಸಿಗಳಿಗೇಕೆ ದರ್ಬಾರು?
-ಬೇರೆ ಕಾರು 'ಬಾರು' ಮಾಡೋಕ್ಕಾಗಲ್ವಲ್ಲ ಅದಕ್ಕೇ ದರ್ಬಾರು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.