ಲೈಬ್ರರಿಗಳು ಯಾಕೆ?
ಪುಸ್ತಕಗಳು ಇರುವವರೆಗೂ, ಪುಸ್ತಕಗಳು ಯಾಕೆ ಬೇಕು ಎಂಬ ಪ್ರಶ್ನೆ ಇರುತ್ತದೆ. ಹಾಗೇ, ಲೈಬ್ರರಿಗಳು ಇರುವವರೆಗೂ ಅವು ಯಾಕೆ ಬೇಕು ಎಂಬ ಪ್ರಶ್ನೆ. ಪುಸ್ತಕಗಳನ್ನು ಕದಿಯಲು...
ಪುಸ್ತಕಗಳು ಇರುವವರೆಗೂ, ಪುಸ್ತಕಗಳು ಯಾಕೆ ಬೇಕು ಎಂಬ ಪ್ರಶ್ನೆ ಇರುತ್ತದೆ. ಹಾಗೇ, ಲೈಬ್ರರಿಗಳು ಇರುವವರೆಗೂ ಅವು ಯಾಕೆ ಬೇಕು ಎಂಬ ಪ್ರಶ್ನೆ. ಪುಸ್ತಕಗಳನ್ನು ಕದಿಯಲು ಸೂಕ್ತ ಜಾಗ ಅಂದರೆ ಅದೇ ಎಂಬುದು ಹಳೆಯ ಜೋಕ್. 'ಲೈಬ್ರರೀಸ್ ಆರ್ ಎಸೆನ್ಷಿಯಲ್' ಎಂಬ ವೆಬ್ಸೈಟ್, ಗ್ರಂಥಾಲಯಗಳು ಯಾಕಿರಬೇಕು ಎಂಬ ಕಾರಣಗಳನ್ನು ಪಟ್ಟಿ ಮಾಡಿವೆ.
- ಅವು ಜಗತ್ತಿನ ಜ್ಞಾನವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೊಂಡಿಗಳು.
- ಜಗತ್ತಿನ ಅತ್ಯಂತ ಬುದ್ಧಿವಂತ, ಶ್ರೀಮಂತ ಮಂದಿ ತಮ್ಮ ಅಮೂಲ್ಯ ಸಮಯವನ್ನು ಅಲ್ಲಿ ಕಳೆಯಬಯಸುತ್ತಾರೆ.
- ಅಂತರ್ಜಾಲ ಕ್ಷಣಿಕ ಸರ್ಫಿಂಗ್ಗಷ್ಟೇ ಸೀಮಿತ. ತಜ್ಞರು ತಮ್ಮ ಜ್ಞಾನದ ವಿಸ್ತರಣೆಗೆ ಗ್ರಂಥಾಲಯಗಳನ್ನೇ ಬಳಸುತ್ತಾರೆ.
- ಸಾರ್ವಜನಿಕ ಗ್ರಂಥಾಲಯಗಳು, ಮಿತ ಖರ್ಚಿನಿಂದ ಅಪರಿಮಿತ ಲಾಭ ಪಡೆಯುವುದಕ್ಕೆ ಅತ್ಯುತ್ತಮ ಮಾದರಿ.
- ಜಗತ್ತಿನ ಮಾಹಿತಿಯ ಅತಿ ಸಣ್ಣ ಅಂಶ ಮಾತ್ರ ಅಂತರ್ಜಾಲದಲ್ಲಿದೆ. ಮಾಹಿತಿಯ ಸಮುದ್ರವಿನ್ನೂ ಲೈಬ್ರರಿಗಳಲ್ಲೇ ಇದೆ.
- ಒಂದೇ ಪುಸ್ತಕ, ಸಿಡಿ, ಪತ್ರಿಕೆಯನ್ನು ಹಲವು ಜನ ಹಂಚಿಕೊಳ್ಳುವುದರಿಂದ ಲೈಬ್ರರಿಗಳು ಪರಿಸರಸ್ನೇಹಿ.
- ಅವು ಉಳ್ಳವರು ಮತ್ತು ಇಲ್ಲದವರ ನಡುವೆ ಸಮಾನತೆ ಸ್ಥಾಪಿಸುತ್ತವೆ.
- ಲೈಬ್ರರಿಗಳಿಗೆ 5000 ವರ್ಷಗಳ ಇತಿಹಾಸವಿದೆ. ಅವು ಮಾನವನಿಗೆ ಅವಶ್ಯಕವಲ್ಲದಿದ್ದರೆ ಎಂದೋ ಸಾಯುತ್ತಿದ್ದವು.
- ಶಾಲೆ, ಕಾಲೇಜುಗಳಿಗೆ ಮಕ್ಕಳು ಮಾತ್ರ ಹೋಗಬಹುದು. ಲೈಬ್ರರಿಗೆ ಎಲ್ಲ ವಯೋವಾನದವರೂ ಹೋಗಿ ಕಲಿಬಹುದು.
- ಅಂತರ್ಜಾಲ ಮತ್ತು ಇ-ಪುಸ್ತಕಗಳು ಲೈಬ್ರರಿಗಳನ್ನು ಅಪ್ರಸ್ತುತಗೊಳಿಸಿವೆ ಎಂಬ ವಾದವಿದೆ. ಆದರೆ ಗ್ರಂಥಾಲಯಗಳು ಎಂದೂ ಯಾರನ್ನೂ, ಪುಸ್ತಕದಂಗಡಿಗಳನ್ನು ಕೂಡ ಅಪ್ರಸ್ತುತಗೊಳಿಸಿಲ್ಲ, ಅಲ್ಲವೆ?
ಅದು ಸ್ವರ್ಗ
- ಸ್ವರ್ಗವೆಂದರೇನೆಂದು ನಾನು ಕಲ್ಪಿಸಿಕೊಳ್ಳುವಾಗ, ನನ್ನ ಮನಸ್ಸಿಗೆ ಬರುವ ಚಿತ್ರ ಒಂದು ಗ್ರಂಥಾಲಯದ್ದು. (ಜಾರ್ಜ್ ಲೂಯಿಸ್ ಬೋರ್ಹೆಸ್)
- ಪ್ರತಿವರ್ಷ ಗ್ರಂಥಾಲಯ ಅನುದಾನವನ್ನು ಕಡಿತ ಮಾಡುತ್ತಿದೆ ಸರಕಾರ. ಇದು ಅಮೆರಿಕದ ಸಮುದಾಯ ತನ್ನನ್ನು ತಾನೇ ನಾಶ ಮಾಡಿಕೊಳ್ಳಲು ಕಂಡುಕೊಂಡ ವಿಧಾನ. (ಐಸಾಕ್ ಅಸಿಮೋವ್)
- ಒಂದು ಗ್ರಂಥಾಲಯದಲ್ಲಿ ಯಾವುದು ಮುಖ್ಯ? ಗ್ರಂಥಾಲಯ ಇದೆ ಎಂಬುದೇ ಮುಖ್ಯ. (ಆರ್ಚಿಬಾಲ್ಡ್ ಮೆಕ್ಲೀಶ್)
ಕಬೀರ ಕವಿತೆ
ಯಾರಿಗೆ?
ಏಟು ಝಡ್
- ಕೇರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.