ಗಣೇಶ: ಅರ್ಥವಿಶೇಷ
ಸಂದೇಶ
ಗಣೇಶ
ಮನುಷ್ಯ, ಆನೆ,
ಇಲಿ, ಹಾವು
ಸಹಬಾಳ್ವೆಯ ಸಂದೇಶ
ಸಂಕೇತ
ಗೌರಿಯ ನಂತರ
ಗಣಪತಿ ಬಂದ
ತಾಯಿಯ ನಂತರ
ತಾನು, ಎಂದ
ವಕ್ರತುಂಡ
ವಕ್ರತುಂಡ
ಮಧ್ಯ ಕ್ರತು
ಅರ್ಥಾತ್ ಸಂಕಲ್ಪ
ಸಿದ್ಧಿಗಾಗಿ.
ಹೇರಂಬ
ಹೇರಂಬ,
ನೀನು ಗಣೇಶ.
ನಾನೂ ಹೇರಂಬ;
ಮಹಿಷ.
ಪ್ರಾರ್ಥನೆ
ನಮ್ಮ ತಪ್ಪುಗಳನ್ನೆಲ್ಲ
ಹೊಟ್ಟೆಗೆ ಹಾಕಿಕೋ
ಲಂಬೋದರಾ
ಎಚ್ಚರಿಕೆ
ನೋಡಿ ನಿನ್ನ ಪಾಶಾಂಕುಶ
ನೆನಪಾಗಿ ಯಮಪಾಶ
ಆಸೆಗಳಿಗೆ ಅಂಕುಶ!
ಮೋದಕ
ಬೆಲೆ ಏರಿಕೆಯ ನಡುವೆಯೂ
ಮನಕೆ ಮೋದಕ
ನಿನ್ನೆದುರಿನ ಮೋದಕ
ಪ್ರಶ್ನೆ
ಆನೆಭಾರ ಹೊರಲು
ಆ ಇಲಿ!
ಏಕಂತ,
ಏಕೆ ಅದು? ಅಂತ.
-ಎಚ್. ಆನಂದರಾಮ ಶಾಸ್ತ್ರಿ