ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಬರದ ನಾಡಲ್ಲೊಂದು ದಬದಬೆ

Lingaraj Badiger
Updated On : 7 Sept 2013, 4:52 am

ಪುಟ್ಟ ಜಿಲ್ಲೆ ಯಾದಗಿರಿ ಸೂರ್ಯನಿಗೆ ಹೆಚ್ಚು ಪ್ರೀತಿಯ ನಾಡು. ವರ್ಷದ ಎಲ್ಲಾ ದಿನಗಳಲ್ಲೂ ಸುಡು ಬಿಸಿಲು ಮಾಮೂಲಿ. ಆದರೂ ಎಲ್ಲೋ ಒಮ್ಮೆ ಬರುವ ಮಳೆ ಪ್ರಕೃತಿಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ. ಅವುಗಳಲ್ಲಿ ಗುರುಮಠಕಲ್ ಸಮೀಪದ ದಬದಬೆಯೂ ಒಂದು.  ಇದು ವರ್ಷವಿಡೀ ಧುಮುಕ್ಕುವ ಜಲಪಾತವಲ್ಲ. ಮಳೆಗಾಲದಲ್ಲಿ ಮಾತ್ರ ಇದು ನೋಡಲು ಸಿಗುತ್ತದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಿಂದ ನಜರಾಪುರ ಕಡೆ 3 ಕಿಲೋ ಮೀಟರ್ ದೂರ ಕ್ರಮಿಸಿದರೆ ಜೋಗ ಜಲಾಪತ ನೆನಪಿಸುವ ದಬೆದಬೆ ಕಾಣುತ್ತದೆ. ಇದು ಈ ಭಾಗದ ದೊಡ್‌ಡ ಜಲಪಾತವಾಗಿದೆ. ಸದ್ಯ ಮಳೆಯಾಗುತ್ತಿರುವುದರಿಂದ ಇದು ಜನರನ್ನು ಕೈಬೀಸಿ ಕರೆಯುತ್ತಿದೆ. ಸುಮಾರು 150 ಅಡಿ ಎತ್ತರದಿಂದ ಹಂತಹಂತವಾಗಿ ಬೀಳುವುದನ್ನು ನೋಡುವುದೇ ಒಂದುಸೊಬಗು. ಹಾಸು ಬಂಡೆಗಳು, ಕುರುಚಲು ಗಿಡಗಳ ಮಧ್ಯೆ ಸಾಗಿ ಬರುವ ನಜರಾಪುರ ಹಳ್ಳವು ಈ ದಬದಬೆಯನ್ನು ಸೃಷ್ಟಿಸಿದ್ದು, ಮೇಲಿಂದ ದುಮುಕುವ ವೇಳೆ ನೀರು ಹಾಲಿನ ನೊರೆಯಂತೆ ಕಾಣುತ್ತದೆ.

ನಿಶ್ಯಬ್ಧ ಪರಿಸರದಲ್ಲಿ ಈಗ ಜಲಪಾತದ ಸೊಬಗು ನೋಡುವುದೇ ಆನಂದ. ಬಿದ್ದ ಮಳೆಯಿಂದ ಈಗ ದಬದಬೆಯ ಆರ್ಭಟವೂ ಜೋರಾಗಿದೆ. ಆದ್ದರಿಂದ ನಿತ್ಯವೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಮಳೆಗಾಲದ ಪಿಕ್‌ನಿಕ್ ಸ್ಪಾಟ್ ಆಗಿದೆ. ಯಾದಗಿರಿಯಿಂದ ಗುರುಮಠಕಲ್‌ಗೆ 40 ಕಿಮೀ ಸಾಗಿ, ಅಲ್ಲಿಂದ ನಜರಾಪುರಕ್ಕೆ 3 ಕಿಮೀ ಹೋದರೆ ರಸ್ತೆ ಮೇಲಿಂದಲೇ ಈ ದಬದಬೆ ದರ್ಶನವಾಗುತ್ತದೆ. ಹೋಗಿ ಬರಲು ಸಾಕಷ್ಟು ವಾಹನ ವ್ಯವಸ್ಥೆಯಿದ್ದು, ಉತ್ತಮ ರಸ್ತೆ ಸೌಲಭ್ಯವೂ ಇದೆ. ಬೇಸಿಗೆ ಬರುವ ಮುನ್ನ ಒಮ್ಮೆ ಜಲಪಾತ ನೋಡಲೇಬೇಕು.

-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement