ಕಚೇರಿಯಲ್ಲಿ ಆಕಳಿಕೆ ಬರದ ಹಾಗೆ ಏನು ಮಾಡಬೇಕು?
ಕಚೇರಿಯಲ್ಲಿ ಆಕಳಿಕೆ ಬರದ ಹಾಗೆ ಏನು ಮಾಡಬೇಕು?
ಬರ್ಕ್ಲಿ ರಮೇಶ್, ಕಿರಗಂದೂರು ಮಂಡ್ಯ
ನಾಯಿಗಳೇಕೆ ಲೈಟ್ ಕಂಬದ ಬಳಿಯೇ ಕಾಲು ಎತ್ತೋದು?
- ನೀರಿನಿಂದಲೇ ಲೈಟ್ ಬರೋದು ಅಂತ ಅವಕ್ಕೂ ಗೊತ್ತು!
ವಿ. ಹೇಮಂತಕುಮಾರ್, ಬೆಂಗಳೂರು.
ವಾಹನ ಓಡಿಸಲು ಲೈಸೆನ್ಸ್ ಬೇಕು, ಪ್ರೀತಿ ಮಾಡಲು ಏನು ಬೇಕು?
- ಸೆನ್ಸ್ ಬೇಕು, ಇಲ್ಲಾಂದ್ರೆ ನಾನ್ಸೆನ್ಸ್ ಅನ್ನಿಸ್ಕೋತೀರಿ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ.
ಹಾಲಲ್ಲಾದ್ರೂ ಹಾಕು, ನೀರಲ್ಲಾದ್ರೂ ಹಾಕು ಅಂತ ಹೇಳೋರು ಆಲ್ಕೋಹಾಲಲ್ಲಾದ್ರೂ ಹಾಕು ಅಂತ ಯಾಕೆ ಹೇಳೋಲ್ಲ?
- ಅದರಲ್ಲಿ ಅವರಾಗ್ಲೇ ಬಿದ್ದಿರ್ತಾರೆ!
ಮಹೇಶ್ ಸಾನಬಾಳ, ಮಸ್ಕಿ.
ಕಚೇರಿಯಲ್ಲಿ ಆಕಳಿಕೆ ಬರದ ಹಾಗೆ ಏನು ಮಾಡಬೇಕು?
- ಆ 'ಗಳಿಕೆ' ಬಗ್ಗೆಯೇ ಯೋಚಿಸ್ತಿರಬೇಕು!
-ಘಾಟಿ