ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಫಂಟಾ: ನಿನ್ನ ಮೊಬೈಲಿಂದ ನನ್ನ ಗರ್ಲ್‌ಫ್ರೆಂಡಿಗೆ ಒಂದು ಕಾಲ್ ಮಾಡ್ಲಾ?

Vishwanath S
Updated On : 14 Sept 2013, 3:48 am

ಫಂಟಾ: ನಿನ್ನ ಮೊಬೈಲಿಂದ ನನ್ನ ಗರ್ಲ್‌ಫ್ರೆಂಡಿಗೆ ಒಂದು ಕಾಲ್ ಮಾಡ್ಲಾ?
ಕೋಲ್ಯ: ಓಹ್, ಅದಕ್ಕೇನಂತೆ... ರೀಡಯಲ್ ಮಾಡು ತಗೋ.

ಬುದ್ಧಿವಂತ ನಾಯಿ
ಕೋಲ್ಯಿಣಿ: ನಾವೊಂದು ಬುದ್ಧಿವಂತ ನಾಯಿಯನ್ನು ಸಾಕೋಣ. ಅದು ದಿನಾ ಬೆಳಗ್ಗೆ ನ್ಯೂಸ್‌ಪೇಪರನ್ನು ತಂದುಕೊಡ್ಬೇಕು. ಹಾಗಿರಬೇಕು ಆ ನಾಯಿ.
ಕೋಲ್ಯ: ಅದಕ್ಕೆ ಬುದ್ಧಿವಂತ ನಾಯಿನೇ ಆಗ್ಬೇಕಾ? ಎಲ್ಲ ನಾಯಿನೂ ಮಾಡ್ತವೆ.
ಕೋಲ್ಯಿಣಿ: ಹಾಗಾದ್ರೆ, ನಾಳೆಯಿಂದ್ಲೆ ನಾನು ನ್ಯೂಸ್‌ಪೇಪರ್ ಹಾಕಿಸ್ತೀನಿ.

ಫಂಟಾ: ಇಷ್ಟು ಹೊತ್ತು ಯಾರ ಜೊತೆ ಮಾತಾಡ್ತಿದ್ದಿಯೋ?
ಕೋಲ್ಯ: ಹೆಂಡ್ತಿ ಜತೆ.
ಫಂಟಾ: ಅಷ್ಟು ಪ್ರೀತಿಯಿಂದ.
ಕೋಲ್ಯ: ಹೌದು, ನಿನ್ನ ಹೆಂಡ್ತಿ ಜತೆ.

ಮಣ್ಣಿನ ವಾಸನೆ
ಕೋಲ್ಯ: ಹೇಯ್, ವೇಟರ್... ಫ್ರೆಶ್ ಕಾಫಿ ಕೊಡು ಅಂದ್ರೆ ಮಣ್ಣಿನ ವಾಸನೆ ಬರ್ತಿರೋ ಕಾಫಿ ಕೊಟ್ಟಿದ್ಯಲ್ಲಯ್ಯ?
ವೇಟರ್: ಅದು ಫ್ರೆಶ್ ಕಾಫಿನೇ ಸರ್. ಈಗಷ್ಟೇ ಹೆಕ್ಕಿ ತಂದ ಕಾಫಿ ಬೀಜಗಳು ಅವು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಬ್ಬರು ಗೆಳೆಯರು ಫೇಲಾಗ್ತಾರೆ.
1ನೆಯವ: ನಾನಿನ್ನು ಬದುಕಿರೋದಿಲ್ಲ. ಆತ್ಮಹತ್ಯೆ ಮಾಡ್ಕೋತ್ತೀನಿ.
2ನೆಯವ: ನಾನು ಹಾಗೆ ಮಾಡಲ್ಲಪ್ಪ. ಮುಂದಿನ ಜನ್ಮದಲ್ಲಿ ಮತ್ತೆ ನರ್ಸರಿಯಿಂದ ಓದ್ಬೇಕಾಗುತ್ತೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement