ಜ್ಞಾನಪೀಠಕ್ಕಿಂತ ಘ್ನಾನಪೀಠ ಶ್ರೇಷ್ಠವಲ್ಲವೇ?
ಪಿ.ಜಿ. ರಾಘವೇಂದ್ರ, ಮೈಸೂರು.
ಜ್ಞಾನಪೀಠಕ್ಕಿಂತ ಘ್ನಾನಪೀಠ ಶ್ರೇಷ್ಠವಲ್ಲವೇ?
- ಕೆಲವು ಜ್ಞಾನಪೀಠಿಗಳ ನಡವಳಿಕೆ ನೋಡಿದ್ರೆ ಹಾಗೆ ಅನ್ಸುತ್ತೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ.
ಸಂಸ್ಕಾರದ ವೇಳೆ ಶವದ ಮೇಲೆ ಚಿಲ್ಲರೆ ನಾಣ್ಯಗಳನ್ನು ಹಾಕುವುದೇಕೆ?
- ಸ್ವರ್ಗ-ನರಕಗಳಲ್ಲೂ ಚಿಲ್ಲರೆ ಸಮಸ್ಯೆ ಇರಬಹುದು ಎಂಬ ನಂಬಿಕೆ!
ವಿ. ಹೇಮಂತಕುಮಾರ್, ಬೆಂಗಳೂರು.
ಗಾಳಿ ಮಾತಿಗೂ ಗಾದೆ ಮಾತಿಗೂ ವ್ಯತ್ಯಾಸವೇನು?
- ಗಾಳಿ ಮಾತು ಬಾಯಿಂದ ಬಾಯಿಗೆ ಬಂದಿದ್ದು, ಗಾದೆ ಮಾತು ತಲೆತಲಾಂತರಗಳಿಂದ ಬಂದಿದ್ದು!
ಉದಯಶಂಕರ್‌ರಾವ್, ದೊಡ್ಡಬಳ್ಳಾಪುರ.
ಸರ್ಕಾರ ಹಾಲಿನ ಬೆಲೆ ಜಾಸ್ತಿ ಮಾಡಿದ್ರೂ ಹಸುಗಳು ಸಂತೋಷದಿಂದ ಕುಣಿಯುವುದಿಲ್ಲವೇಕೆ?
- ಆ ದುಡ್ಡು ಜೇಬಿಗೆ ಹೋಗುತ್ತೆ, ಕೊಟ್ಟಿಗೆಗೆ ಬರೋಲ್ಲ!
ಪೇಂಟರ್ ಪಾಪು, ಸಂತೇಮರಹಳ್ಳಿ
ಬಾರ್ ಗಂಡುಮಕ್ಕಳ ತವರಂತೆ ನಿಜನಾ?
- ಅದನ್ನು ತವರು ಎನ್ನುವ 'ಯೋಗ' ಎಲ್ಲರಿಗೂ ಇರೋಲ್ಲ.