ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಶಂಕರ್ Days

'ಹೊಸ ಬಾಳೂ ನಿನ್ನಿಂದ...' ಎಂದು 'ಆಟೋ ರಾಜ' ಚಿತ್ರದಲ್ಲಿ ಗಾಯತ್ರಿಯ ಕೆನ್ನೆಗಳಲ್ಲಿ..

Rashmi Kasaragodu
Updated On : 30 Sept 2013, 5:40 am

'ಹೊಸ ಬಾಳೂ ನಿನ್ನಿಂದ...' ಎಂದು 'ಆಟೋ ರಾಜ' ಚಿತ್ರದಲ್ಲಿ ಗಾಯತ್ರಿಯ ಕೆನ್ನೆಗಳಲ್ಲಿ ನಗು ಅರಳಿಸಿದವನು, 'ನಲಿವಾ ಗುಲಾಬಿ ಹೂವೇ' ಎಂದು ಮತ್ತದೇ ಚಿತ್ರದಲ್ಲಿ ನೊಂದವನು, 'ಕೇಳದೆ ನಿಮಗೀಗ' ಎಂದು ಹಳೆಕಾಲದ ಕತೆಯಲ್ಲಿ ಹೊಸನೋಟ ತೋರಿದವನು, 'ನೋಡಿ ಸ್ವಾಮಿ ನಾವಿರೋದೆ ಹೀಗೆ' ಎಂದು ಬಿಡುಬೀಸಾಗಿ ನಲಿದವನು... ನೀನಲ್ಲದೆ ಇನ್ನಾರು ಶಂಕರಾ?
ಇಪ್ಪತ್ತಮೂರು ವರ್ಷ ಹಿಂದೆ ನಮ್ಮಿಂದ ಮರೆಯಾದ ನೀನು ಈಗಲೂ ಕಣ್ಣಿಗೆ ಬೀಳುತ್ತಲೇ ಇರುತ್ತೀಯ. ಅದು ರಿಕ್ಷಾಗಳ ಹಿಂದುಮುಂದಿನ ಚಿತ್ರಗಳ ರೂಪದಲ್ಲಿ. ಇನ್ನು ಗಣಪತಿ ಆರ್ಕೆಸ್ಚ್ರಾಗಳಲ್ಲಿ ನಿನ್ನ ಒಂದಾದರೂ ಹಾಡು ಇಲ್ಲದೆ ಹೋದರೆ ಸೇರಿದವರು ಗಲಾಟೆ ಎಬ್ಬಿಸುತ್ತಾರೆ. ಚಿತ್ರರಂಗದಿಂದ ಮರೆಯಾದರೂ ನೆನಪಿನ ಬಿಂಬಗಳಲ್ಲಿ ಶಾಶ್ವತವಾಗಿರುವವನು ನೀನು.
ಮಿಂಚಿನ ಓಟದಲ್ಲಿ ಅದೇನು ನಿನ್ನ ಚುರುಕು, ಗೀತಾದಲ್ಲಿ ಎಂಥ ವಿಷಾದ, ಆಟೋ ರಾಜದಲ್ಲಿ ಎಂಥ ಮಾದರಿ, ಬೆಂಕಿ ಬಿರುಗಾಳಿಯಲ್ಲಿ ಏನು ರೋಷಾವೇಶ, ಒಂದು ಮುತ್ತಿನ ಕಥೆಯಲ್ಲಿ ತೆರೆಯ ಹಿಂದಿನಿಂದಲೇ ಎಂಥ ಸ್ಪಂದನ. ಟಿವಿಯಲ್ಲಿ ಬರುತ್ತಿದ್ದ 'ಮಾಲ್ಗುಡಿ ಡೇಸ್‌' ಎಂಬ ಮಧುರವಾದ ಸೀರಿಯಲ್ ನೋಡಿಕೊಂಡೇ ಬೆಳೆದ ನನ್ನಂಥವರ ಒಂದು ತಲೆಮಾರೇ ಇದೆ.
ನಿನ್ನ ಸ್ವಪ್ನಗಳಿಂದ ಚಿಮ್ಮಿದ ಹೂವುಗಳು ಒಂದೆರಡಲ್ಲ. ಡೈರಿ, ಸ್ಟುಡಿಯೋ, ನಂದಿಬೆಟ್ಟಕ್ಕೆ ರೋಪ್‌ವೇ, ಬಡವರಿಗೆ ಅಗ್ಗದ ಮನೆಗಳು, ಅಮ್ಯೂಸ್‌ಮೆಂಟ್ ಪಾರ್ಕ್, ಕಂಟ್ರಿ ಕ್ಲಬ್... ನಿನ್ನ ಕನಸಿನ ಮೆಟ್ರೋ ಬರುವ ಕಾಲಕ್ಕೆ ನೀನೇ ಇಲ್ಲ. ನಮ್ಮಲ್ಲಿ ನಿನ್ನಂಥ ಕನಸುಗಾರರ ಕೊರತೆಯಿದೆ ಶಂಕರ.
ನೀನಿರುವೆ ಅಲ್ಲಿ, ಇಲ್ಲಿ, ನಿನ್ನ ಚಿತ್ರಗಳಲ್ಲಿ, ಹೀಗೆ ನಾವು ಕಾಪಿಟ್ಟುಕೊಂಡು ಆಗಾಗ ನೋಡುವ ಫೋಟೋಗಳಲ್ಲಿ, ವ್ಯವಸ್ಥೆಯ ಬಗ್ಗೆ ಆಕ್ರೋಶವನ್ನೂ ಕನಸುಗಳನ್ನೂ ಇಟ್ಟುಕೊಂಡ ನವತರುಣರ ಕಣ್ಣುಗಳಲ್ಲಿ. ನಾಳೆ ನೀನು ಅಳಿದ ದಿನವಂತೆ. ನಮ್ಮ ಸ್ಮರಣೆಗಳಲ್ಲಿ ಮತ್ತೆ ಮತ್ತೆ ಹುಟ್ಟುತ್ತಲೇ ಇರುವ ನಿನಗೊಂದು ನೆನಕೆ ಈ ಚಿತ್ರಗಳ ಮೂಲಕ.

ಶಂಕರ್ ನಾಗ್ ಅವರ ಬಾಲ್ಯದ ಅಪರೂಪದ ಫೋಟೊಗಳು - Click Here

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments