ಹುಬ್ಬಳ್ಳಿಯಲ್ಲಿ ಪ್ರತಿಭಟನೆ 
ಪ್ರಧಾನ ಸುದ್ದಿ

ಬಿಜೆಪಿ ನಾಯಕರ ನಿವಾಸಕ್ಕೆ ಮುತ್ತಿಗೆ

ಕಳಸಾಬಂಡೂರಿ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಧಾನಿ ಮೋದಿಗೆ ರಾಜ್ಯದ ನಿಲುವನ್ನು ಸರಿಯಾಗಿ ಪ್ರತಿಪಾದಿಸಲಿಲ್ಲ ಎಂದು ಆರೋಪಿಸಿ ಹೋರಾಟಗಾರರು ಮತ್ತು ರೈತರು ಬುಧವಾರ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರಾದ..

ಹುಬ್ಬಳ್ಳಿ: ಕಳಸಾಬಂಡೂರಿ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಧಾನಿ ಮೋದಿಗೆ ರಾಜ್ಯದ ನಿಲುವನ್ನು ಸರಿಯಾಗಿ ಪ್ರತಿಪಾದಿಸಲಿಲ್ಲ ಎಂದು ಆರೋಪಿಸಿ ಹೋರಾಟಗಾರರು
ಮತ್ತು ರೈತರು ಬುಧವಾರ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್, ಶಿವಕುಮಾರ ಉದಾಸಿ ನಿವಾಸ, ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದರು.

ಜತೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್‍ಗಳಲ್ಲಿ ಬಂದಿದ್ದ ಧಾರವಾಡ ಜಿಲ್ಲೆಯ ಸಾವಿರಾರು ರೈತರು ಇಲ್ಲಿನ ಬಾದಾಮಿ ನಗರದ ಶೆಟ್ಟರ್ ಮನೆ, ಭವಾನಿನಗರದ ಜೋಶಿ ಮನೆಗೆಸುಮಾರು ಎರಡೂವರೆ ತಾಸು ಮುತ್ತಿಗೆ ಹಾಕಿದ್ದರು. ಪೊಲೀಸರ ಬಿಗಿ ಕಾವಲು ಭೇದಿಸಿ ಚಪ್ಪಲಿಗಳನ್ನು ತೂರಾಡಿದರು. `ಕಳಸಾಬಂಡೂರಿ ಯೋಜನೆ, ಮಹ
ದಾಯಿ ಹೆಸರು ಹೇಳಿ ನೀವು ಮುಖ್ಯ ಮಂತ್ರಿ, ಸಂಸದರಾಗಿದ್ದೀರಿ. ಯೋಜನೆಗೆ ನ್ಯಾಯ ಕೊಡಿಸಲು ನಿಮ್ಮಿಂದ ಆಗಿಲ್ಲ. ನಮ್ಮ ವಿಶ್ವಾಸಕ್ಕೆ ನೀವು ದ್ರೋಹ ಬಗೆದಿದ್ದೀರಿ. ತಕ್ಷಣ ರಾಜಿನಾಮೆ ನೀಡಿ.

ಇಲ್ಲದಿದ್ದರೆ ರಾಜಿನಾಮೆ ನೀಡುವವರೆಗೆ ನಿಮ್ಮ ಮನೆಗಳ ಎದುರು ಆಮರಣ ಉಪವಾಸ ಮಾಡುತ್ತೇವೆ' ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಗೋವಾ ಬಸ್ಸಿಗೆ ಬೆಂಕಿ: ಬೆಳಗ್ಗೆ ಗೋವಾ ದಿಂದ ನಗರಕ್ಕೆ ಆಗಮಿಸಿದ ಗೋವಾ ಸರ್ಕಾರದ ಬಸ್ಸಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಭೇಟಿ ಬಳಿಕದ ಬೆಳವಣಿಗೆಯಲ್ಲಿ
ರಾಜ್ಯ ಸರ್ಕಾರದ 4 ಬಸ್ಸುಗಳಿಗೆ ಬೆಂಕಿ, 15ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಸಿಟ್ಟು ಪ್ರದರ್ಶಿಸಿದ್ದ ರೈತರ ಕೆಂಗಣ್ಣು ಬುಧವಾರ ಗೋವಾ ಬಸ್ಸಿನ ಮೇಲೆ ಬಿದ್ದಿತ್ತು.

ಯೋಜನೆಗಾಗಿ ರಾಜ್ಯ ಸರ್ಕಾರ ಏನು ಮಾಡಬೇಕಾಗಿದೆಯೋ ಅದನ್ನು ಮಾಡಿದೆ. ಆದರೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅವರು ಕಣಿವೆ ರಾಜ್ಯದ ಸಿಎಂಗಳ ಸಭೆ ಕರೆದಿಲ್ಲ.  ಹೀಗಾಗಿ, ಆಯಾ ರಾಜ್ಯಗಳ ಪ್ರತಿಪಕ್ಷಗಳ ನಾಯಕರ ಮನವೊಲಿಸುವ ಪ್ರಶ್ನೆ ಹೇಗೆ ಉದ್ಭವವಾಗುತ್ತದೆ? ಅಂತಾರಾಜ್ಯ ಜಲವಿವಾದಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್​ಗೆ 61 ರನ್ ಗಳ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT