ಪ್ರಧಾನ ಸುದ್ದಿ

ಅಸ್ಸಾಂನಲ್ಲಿ ಐವರು ಉಗ್ರರ ಸೆರೆ

Guruprasad Narayana

ಗೌಹಾಟಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಉಲ್ಫಾ ತೀವ್ರವಾದಿಗಳೂ ಸೇರಿದಂತೆ ಐವರು ಉಗ್ರಗಾಮಿಗಳನ್ನು ಅಸ್ಸಾಂನಲ್ಲಿ ಇಂದು ಸೆರೆಹಿಡಿಯಲಾಗಿದೆ.

ಸುಳಿವು ಸಿಕ್ಕ ಹಿನ್ನಲೆಯಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ತೀವ್ರರ್ವಾದಿ ಉಲ್ಫಾ(ಐ) ಉಗ್ರಗಾಮಿಗಳನ್ನು ಸೊಂಟಿಪುರ ಜಿಲ್ಲೆಯ ಹಥಿಬಂಧಲ್ ಗ್ರಾಮದಿಂದ ಸೆರೆಹಿಡಿಯಲಾಗಿದೆ ಎಂದು ಭದ್ರತಾ ವಕ್ತಾರ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆಯಲ್ಲಿ ಭದ್ರತಾ ಪಡೆಗಳು ಗ್ರಾಮವನ್ನು ಸುತ್ತುವರೆದಿದ್ದರಿಂದ ಇಬ್ಬರು ತೀವ್ರರ್ವಾದಿ ಉಲ್ಫಾ(ಐ) ಉಗ್ರಗಾಮಿಗಳನ್ನು ಸೆರೆ ಹಿಡಿಯಲು ಸಾಧ್ಯವಾಗಿದೆ.

ಉಗ್ರಗಾಮಿಗಳನ್ನು ಬಾಬುಲ್ ದಾಸ್ ಮತ್ತು ಮೋಹನ್ ಬಾರಾ ಎಂದು ಗುರುತಿಸಲಾಗಿದ್ದು. ಒಂದು ಎಕೆ೫೬ ಬಂದೂಕು, ಎರಡು ಕೈ ಗ್ರೆನೇಡ್ಗಳು ಮತ್ತಿತರ ಶಸ್ತ್ರಾಸ್ತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಗುಪ್ತಚರ ಮಾಹಿತಿಯ ಪ್ರಕಾರ ಕೊಕ್ರಝಾರ್ ಜಿಲ್ಲೆಯ ಕಾರಿಗಾಂವ್ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಮುಸ್ಲಿಂ ಟೈಗರ್ಸ್ ಫೋರ್ಸ್ ಆಪ್ ಅಸ್ಸಾಂ(ಎಂ ಎಫ್ ಟಿ ಎ) ಗೆ ಸೇರಿದ ಉಗ್ರಗಾಮಿಗಳನ್ನು ರಾಷ್ಟೀಯ ಹೆದ್ದಾರಿ ೨೭ರ ತಡೆಧಾಮದಲ್ಲಿ ಸೆರೆಹಿಡಿಯಲಾಗಿದೆ.

ಈ ಉಗ್ರಗಾಮಿಗಳನ್ನು ಶಹೀದುಲ್ ಹುಸೇನ್, ಆಕಾಶ್ ಅಲಿ ಮತ್ತು ನಜಿರುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು, ಎರಡು ಪಿಸ್ತೂಲುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.

SCROLL FOR NEXT