ಜೈಶ್-ಇ-ಮೊಹಮದ್ ಉಗ್ರ ಸಂಘಟನೆಯಿಂದ ಸರಣಿ ಬಾಂಬ್ ಸ್ಫೋಟ ಸಂಚು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಜೆಇಎಂನಿಂದ ಸರಣಿ ಬಾಂಬ್ ಸ್ಫೋಟ; ಗುಪ್ತಚರ ಇಲಾಖೆಯಿಂದ ಭಾರಿ ಸಂಚು ಬಯಲು

ಕುಖ್ಯಾತ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ಭಾರತದ ಸುಮಾರು 13 ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವ ಕುರಿತು ಹೂಡಿದ್ದ ಭಾರಿ ಸಂಚು ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ....

ನವದೆಹಲಿ: ಕುಖ್ಯಾತ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ಭಾರತದ ಸುಮಾರು 13 ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವ ಕುರಿತು ಹೂಡಿದ್ದ ಭಾರಿ ಸಂಚು ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ.

ಸಂಸತ್ ಭವನದ ದಾಳಿಕೋರ ಅಫ್ಜಲ್ ಗುರುವನ್ನು 13 ವರ್ಷ ಸೆರೆವಾಸದಲ್ಲಿಟ್ಟಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಜೆಇಎಂ ಸಂಘಟನೆ, ಇದೀಗ 13 ವರ್ಷದ ಬದಲಿಗೆ  13 ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಜೆಇಎಂಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಪರೋಕ್ಷ  ಬೆಂಬಲ ನೀಡಿದ್ದು, ಸರಣಿ ಸ್ಫೋಟದ ಮೂಲಕ ಭಾರತದ ಶಾಂತಿ ಕದಡಲು ಯತ್ನಿಸಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಭಾರತದ ಗುಪ್ತಚರ ಇಲಾಖೆಯ ಅಧಿಕಾರಿಗಳು ಜೆಇಎಂ ಮುಖ್ಯಸ್ಥ ಮೌಲಾನ ಅಬ್ದುಲ್ ರಾವೂಫ್ ನ ದೂರವಾಣಿ ಕರೆಯ ಮಾಹಿತಿ ಪಡೆದಿದ್ದು, ಕರೆಯಲ್ಲಿ ರಾವೂಫ್ ಅಫ್ಜಲ್  ಗುರುವಿನ 13 ವರ್ಷ ಜೈಲಿಗೆ ಪ್ರತೀಕಾರವಾಗಿ ಭಾರತದ ಪ್ರಮುಖ 13 ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವ ಕುರಿತು ಚರ್ಚೆ ನಡೆಸಿದ್ದ ಆಘಾತಕಾರಿ ಅಂಶಹೊರಬಿದ್ದಿದೆ.  ಮೌಲಾನ ಅಬ್ದುಲ್ ರಾವೂಫ್ 1999ರ ಕಾಂದಹಾರ್ ವಿಮಾನ ಅಪಹರಣದಲ್ಲಿ ಒತ್ತಾಯಪೂರ್ವಕವಾಗಿ ಬಿಡುಗಡೆಯಾದ ಉಗ್ರ ಮೌಲಾನ ಮಸೂದ್ ಅಜರ್ ಸಹೋದರನಾಗಿದ್ದು,  ಈತನೇ ಸರಣಿ ಬಾಂಬ್ ಸ್ಫೋಟದ ರೂವಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಈಗಾಗಲೇ ಉಗ್ರಸಂಘಟನೆಗೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳ ಕರೆಗಳನ್ನು ವೀಕ್ಷಣೆಯಲ್ಲಿಟ್ಟಿದ್ದು, ಸಂಘಟನೆಯ ಪ್ರತಿಯೊಬ್ಬ ಸದಸ್ಯನ  ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಈ ಸರಣಿ ಸ್ಫೋಟಕ್ಕೆ ಜೆಇಎಂ ಸಂಘಟನೆ ಸ್ಲೀಪರ್ ಸೆಲ್ ಉಗ್ರರನ್ನು ನೇಮಿಸಿಕೊಳ್ಳುವ ಕಾರ್ಯಕ್ಕೆ  ಮುಂದಾಗಿದ್ದು, ಪ್ರಮುಖವಾಗಿ ಈ ಕಾರ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ಮೂಲದ ಮುಸ್ಲಿಂ ಮಹಿಳಾ ಉಗ್ರರನ್ನು ಕೂಡ ನೇಮಕ ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಮತ್ತೊಂದು ದೂರವಾಣಿ ಕರೆಯಲ್ಲಿ ಮಸೂದ್ ಸಹೋದರರು, "ನಮ್ಮಲ್ಲಿ ಈಗಾಗಲೇ ಪಾಕಿಸ್ತಾನದಲ್ಲಿ 300 ಫಿದಾಯಿನ್ ಗಳು ಸಿದ್ಧರಾಗಿದ್ದು, ಯಾವುದೇ ಕ್ಷಣದಲ್ಲಿ ದಾಳಿ ನಡೆಸಲು  ಸನ್ನದ್ಧರಾಗಿದ್ದಾರೆ. ನಾವೀಗ ಮಾಡಬೇಕಿರುವುದು ನಮ್ಮ ಕೆಲ ವ್ಯಕ್ತಿಗಳನ್ನು ಭಾರತಕ್ಕೆ ರವಾನಿಸಿ ಅಲ್ಲಿನ ಮಾಹಿತಿ ಪಡೆಯಬೇಕು. ನಮ್ಮ ಫಿದಾಯಿನ್ ಗಳು ನಮ್ಮ ಸೂಚನೆಗೆ  ಕಾಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ದಾಳಿಗೆ ಸಿದ್ಧರಾಗಿದ್ದಾರೆ. ನಮಗೆ ಸುಮ್ಮನೆ ಕೂರಲು ಸಾಧ್ಯವಾಗುತ್ತಿಲ್ಲ, ಹೇಗಾದರೂ ಸರಿ ಭಾರತ ರಾಷ್ಟ್ರವನ್ನು ಇಬ್ಭಾಗ ಮಾಡಬೇಕು.  ಮೊದಲಿಗೆ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನದ ಭಾಗವಾಗಬೇಕು" ಎಂದು ಜೆಇಎಂ ಸಂಘಟನೆಗೆ ಸೇರಿದ ಸದಸ್ಯನೊಬ್ಬ ದೂರವಾಣಿಯಲ್ಲಿ ಮಾತನಾಡಿರುವ ದಾಖಲೆಗಳು ಲಭ್ಯವಾಗಿವೆ.

ಒಟ್ಟಾರೆ ಪಠಾಣ್ ಕೋಟ್ ದಾಳಿ ಹಸಿರಾಗಿರುವಾಗಲೇ ಜೆಇಎಂ ಉಗ್ರ ಸಂಘಟನೆ ಮತ್ತೊಂದು ಭಾರಿ ದಾಳಿಗೆ ಸಂಚು ರೂಪಿಸುತ್ತಿದ್ದು, ದಾಳಿ ಎದುರಿಸುವ ಕುರಿತು ಭಾರತೀಯ ಸೇನೆ  ಸರ್ವಸನ್ನದ್ಧವಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT