ನವದೆಹಲಿ: ಕುಡಿದು ದಾಂಧಲೆ ಎಬ್ಬಿಸಿದ ಎರಡು ಗುಂಪಿನ ನಡುವೆ ನಡೆದ ಕಲ್ಲು ತೂರಾಟದಿಂದ ದೆಹಲಿಯಲ್ಲಿ ಕನಿಷ್ಠ 9 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ದಕ್ಷಿಣ ದೆಹಲಿಯ ಅಸೋಲಾ ಗ್ರಾಮದಲ್ಲಿ ಈ ಹಿಂಸೆಗೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದೆ.
"ಕುಡಿದ ಮತ್ತಿನಲ್ಲಿ ಶುಕ್ರವಾರ ರಾತ್ರಿ ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಅವರುಗಳ ಜೊತೆಗೆ ಹಿರಿಯರು ಸೇರಿದ್ದರಿಂದ ಹಿಂಸೆಗೆ ತಿರುಗಿದೆ" ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ನೂಪುರ್ ಪ್ರಸಾದ್ ಹೇಳಿದ್ದಾರೆ.
"ಈ ಕಲ್ಲು ತೂರಾಟದಲ್ಲಿ ಕನಿಷ್ಠ 9 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಕೂಡ ಅವರು ಹೇಳಿದ್ದಾರೆ. ಇದು ವಾಲ್ಮೀಕಿ ಮತ್ತು ಜಾತವ್ ಸಮುದಾಯದ ಹಿರಿಯರ ನಡುವೆ ಕಾದಾಟಕ್ಕೆ ತಿರುಗಿ ಕೆಲವು ಮನೆಗಳು ಮತ್ತು ವಾಹನಗಳು ಹಾನಿಯಾಗಿವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
"ಗಲಭೆ ಪ್ರಕರಣ ದಾಖಲಿಸಲಾಗುದ್ದು, 15 ರಿಂದ 17 ಜನರನ್ನು ಬಂಧಿಸಿದ್ದೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ.