ಪ್ರವಾಸ-ವಾಹನ

ಸಿಟಿ ಸಿವಿಟಿ ಕಾರುಗಳನ್ನು ವಾಪಸ್ ಪಡೆಯುತ್ತಿರುವ ಹೋಂಡಾ

Srinivas Rao BV

ಹೋಂಡಾ ಕಂಪನಿ ಹೋಂಡಾ ಸಿಟಿ ಸಿವಿಟಿ ಮಾದರಿಯ 3,879 ಯುನಿಟ್ ಕಾರುಗಳನ್ನು  ವಾಪಸ್ ಪಡೆಯಲು ಮುಂದಾಗಿದೆ.
ಸಿವಿಟಿಯನ್ನು ನಿರ್ವಹಿಸುವ ಸಾಫ್ಟ್ ವೇರ್ ನ್ನು ಅಪ್ ಡೇಟ್ ಮಾಡಲು ಫೆ.14 ರಿಂದ ಅಕ್ಟೋಬರ್ 14 ವರೆಗೆ ಉತ್ಪಾದನೆಯಾದ ಕಾರುಗಳನ್ನು ವಾಪಸ್ ಪಡೆಯಲಿದೆ.  ಸಿವಿಟಿಯಲ್ಲಿ ಬಳಕೆ ಮಾಡುವ ಹೈಡ್ರಾಲಿಕ್ ಒತ್ತಡ ಉತ್ತಮಗೊಳಿಸಲು ಸಿವಿಟಿ ಸಾಫ್ಟ್ ವೇರ್ ನ್ನು ಅಪ್ ಡೇಟ್ ಮಾಡಲಾಗುತ್ತದೆ ಎಂದು ಹೋಂಡಾ ಸಂಸ್ಥೆ ತಿಳಿಸಿದೆ.
ಭಾರತದಾದ್ಯಂತ ಇರುವ ಹೋಂಡಾ ಡೀಲರ್ ಶಿಪ್ ಗಳನ್ನು ಅಕ್ಟೋಬರ್ 24 ರಿಂದ ಸಾಫ್ಟ್ ವೇರ್ ನ್ನು ಉಚಿತವಾಗಿ ಅಪ್ ಡೇಟ್ ಮಾಡಲಾಗುತ್ತದೆ. ಸಾಫ್ಟ್ ವೇರ್ ಅಪ್ಡೇಟ್ ಆಗದ ಗ್ರಾಹಕರೊಂದಿಗೆ ಹೋಂಡಾ ಸಂಸ್ಥೆ ನೇರವಾಗಿ ಸಂಪರ್ಕಿಸಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಂಡಾ ಸಂಸ್ಥೆಯ ಅಧಿಕೃತ ವೆಬ್ ಸೈಟ್ ನ್ನು ವೀಕ್ಷಿಸಬಹುದಾಗಿದೆ.

SCROLL FOR NEXT