ಪ್ರವಾಸ-ವಾಹನ

ಭಾರತದ 20 ದ್ವೀಪಗಳು ಸಾರ್ವಜನಿಕ ಪ್ರವಾಸಕ್ಕೆ ಮುಕ್ತ

Sumana Upadhyaya
ನವದೆಹಲಿ: ಪ್ರಾಚೀನ ಕಡಲತೀರಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿರುವ ಕಾಲುದಾರಿಗಳನ್ನು ಹೊಂದಿದ ಸುಮಾರು 20 ದ್ವೀಪಗಳು, ಪೂರ್ವ ಮತ್ತು ಪಶ್ಚಿಮ ಕರಾವಳಿಗಳು, ಲಕ್ಷದ್ವೀಪ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಅರವಿಂದ ಪನಗರಿಯ ಅವರ ನೇತೃತ್ವದ ನೀತಿ ಆಯೋಗ ಈ ಪ್ರದೇಶಗಳ ಅಭಿವೃದ್ಧಿಗೆ  ನೀಲಿನಕಾಶೆ ಅಂತಿಮಗೊಳಿಸಲಿದೆ.
ಇವುಗಳಲ್ಲಿ ಐದು ದ್ವೀಪಗಳಾದ ಮಾಮ್ಲಿಯಾ, ಮುರ್ಗಾ, ಬೆಟ್ ಶಂಕೋದರ್, ಅಲಿಯಾ ಬೆಟ್ ಮತ್ತು ಪಿರಮ್ ಗುಜರಾತ್ ತೀರದಲ್ಲಿದ್ದು, 5 ಲಕ್ಷದ್ವೀಪದ ಹತ್ತಿರ ಇದ್ದು ಅವುಗಳು ಕದ್ಮತ್ ದ್ವೀಪ, ಕಲ್ಪೇನಿ, ಚೆಟ್ಲೆಟ್, ಕಿಲ್ತನ್ ಮತ್ತು ಮಿನಿಕೊಯಿ ದ್ವೀಪಗಳು, ಮೂರು ದ್ವೀಪಗಳು ಪಶ್ಚಿಮ ಬಂಗಾಳಕ್ಕೆ ಹತ್ತಿರದಲ್ಲಿದ್ದು ಅವುಗಳು ಸಾಗರ ದ್ವೀಪ, ಪಟಿಬುನಿಯಾ ಮತ್ತು ಜಂಬೂದ್ವೀಪ, ಐದು ದ್ವೀಪಗಳು ಅಂಡಮಾನ ಮತ್ತು ನಿಕೋಬಾರ್ ಗೆ ಹತ್ತಿರದಲ್ಲಿವೆ. ಅವುಗಳೆಂದರೆ ಸ್ಮಿತ್ ದ್ವೀಪ, ರಾಸ್, ಲಾಂಗ್, ಹವೆಲೊಕ್ ಮತ್ತು ನೀಲ್ ದ್ವೀಪಗಳು ಹಾಗೂ ತಲಾ ಒಂದೊಂದು ದ್ವೀಪಗಳು ಮಹಾರಾಷ್ತ್ರ ಮತ್ತು ತಮಿಳು ನಾಡುಗಳಲ್ಲಿವೆ.
ರಾಜನಾಥ್ ಸಿಂಗ್ ಇತ್ತೀಚೆಗೆ ಸಚಿವಾಲಯದ ಒಳಗೆ ಪಾನಲ್ ವೊಂದನ್ನು ರಚಿಸಿದ್ದರು. ಅದು ಇತ್ತೀಚೆಗೆ 14 ಅಂಶಗಳ ಶಿಫಾರಸುಗಳೊಂದಿಗೆ ಅನೇಕ ಷೇರುದಾರರಿಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಿಫಾರಸುಗಳನ್ನು ನೀಡಿತ್ತು. ನಮ್ಮ ದೇಶದ ಪೂರ್ವ ಮತ್ತು ಪಶ್ಚಿಮ ತೀರದಲ್ಲಿರುವ ದ್ವೀಪಗಳ ಕುರಿತು ಗಮನಹರಿಸಿಲ್ಲ. ಭದ್ರತಾ ದೃಷ್ಟಿಯಿಂದ ಈ ದ್ವೀಪಗಳಿಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಅಲ್ಲಿ ಸಿಗುವ ಸಂಪನ್ಮೂಲಗಳನ್ನು ಕೂಡ ಕ್ರೋಢೀಕರಿಸುವುದು ಮುಖ್ಯ. ಈ ದ್ವೀಪಗಳ ಆಗಮನ, ನಿರ್ಗಮನ ಎಲ್ಲವನ್ನೂ ಫೂಲ್ ಪ್ರೂಫ್ ವ್ಯವಸ್ಥೆ ಮೂಲಕ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ಹೇಳಿದೆ.
ಅಭಿವೃದ್ಧಿಗೆ ಗುರುತಿಸಲಾಗಿರುವ ದ್ವೀಪಗಳ ಬಹುಪಾಲು ಭಾಗಗಳು ಅರಣ್ಯ ಮೀಸಲು ಪ್ರದೇಶವಾಗಿರುವುದರಿಂದ ಮೀಸಲು ಪ್ರದೇಶಗಳಲ್ಲಿ ಯಾವುದೇ ಒಳನುಸುಳುವಿಕೆ, ಬೇಟೆಯಾಡದಂತೆ ನೋಡಿಕೊಳ್ಳಬೇಕು ಎಂದು ಪರಿಸರ, ಅರಣ್ಯ ಸಚಿವಾಲಯ ಹೇಳಿದೆ.
ದ್ವೀಪಗಳ ಉಸ್ತುವಾರಿ ನೋಡಿಕೊಳ್ಳಲು ರಕ್ಷಣಾ ಸಚಿವಾಲಯ ತೀರಪಡೆಗೆ ವಹಿಸಲಿದೆ. ಎಲ್ಲಾ ದ್ವೀಪಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಭೌಗೋಳಿಕ ಗುರುತು ಮಾಡಿಕೊಳ್ಳಲಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರಿಕೆ ದೋಣಿಗಳನ್ನು ಸುಲಭವಾಗಿ ಗುರುತಿಸಲು ಬಣ್ಣ ಕೋಡಿಂಗ್ ಯೋಜನೆಯನ್ನು ಜಾರಿಗೆ ತರಲು ಗೃಹ ಸಚಿವಾಲಯ ನಿರ್ಧರಿಸಿದೆ.
SCROLL FOR NEXT