ಪ್ರವಾಸ-ವಾಹನ

ನಾಳೆಯಿಂದ ಟಾಟಾ ಮೋಟಾರ್ಸ್‌ ಪ್ರಯಾಣಿಕ ವಾಹನಗಳ ಬೆಲೆ ಏರಿಕೆ

Lingaraj Badiger

ಮುಂಬೈ: ಆಟೊಮೊಬೈಲ್‌ ಕ್ಷೇತ್ರದ ಪ್ರಮುಖ ಸಂಸ್ಥೆ ಟಾಟಾ ಮೋಟಾರ್ಸ್ ಮೇ 8 ರಿಂದ ಜಾರಿಗೆ ಬರುವಂತೆ ಪ್ರಯಾಣಿಕರ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. ಇದು ಸರಾಸರಿ ಶೇ.1.8ರಷ್ಟಿರಲಿದೆ.

ಮೇ 7ರಂದು ಅಥವಾ ಅದಕ್ಕೂ ಮೊದಲು ವಾಹನಗಳನ್ನು ಕಾಯ್ದಿರಿಸಿದ ಗ್ರಾಹಕರಿಗೆ ಬೆಲೆ ಹೆಚ್ಚಳದಿಂದ ರಕ್ಷಣೆ ದೊರೆಯಲಿದೆ.

ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಅಧ್ಯಕ್ಷ  ಶೈಲೇಶ್ ಚಂದ್ರ ಅವರ ಪ್ರಕಾರ, ಉಕ್ಕು ಮತ್ತು ಅಮೂಲ್ಯವಾದ ಲೋಹಗಳಂತಹ ಸರಕುಗಳ ಬೆಲೆಯಲ್ಲಿನ ಹೆಚ್ಚಳದಿಂದ ಉತ್ಪನ್ನಗಳ ಬೆಲೆಯ ಹೆಚ್ಚಳ ಅನಿವಾರ್ಯ. ಈಗಾಗಲೇ ಕಾರುಗಳನ್ನು ಕಾಯ್ದಿರಿಸಿದ ಗ್ರಾಹಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಇಲ್ಲಿಯವರೆಗೆ ಮಾಡಿದ ಎಲ್ಲಾ ಬುಕಿಂಗ್‌ಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾಳೆಯಿಂದ ಬುಕ್ ಮಾಡುವ ಟಿಯಾಗೊದಿಂದ ಹೊಸದಾಗಿ ಪರಿಚಯಿಸಲಾದ ಸಫಾರಿ ಎಸ್‌ಯುವಿವರೆಗೆ ಎಲ್ಲಾ ಮಾದರಿಯ ವಾಹನಗಳಿಗೆ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಚಂದ್ರ ಅವರು ತಿಳಿಸಿದ್ದಾರೆ.

SCROLL FOR NEXT