ಪ್ರವಾಸ-ವಾಹನ

ನಿಗೂಢ ಆಯಸ್ಕಾಂತೀಯ ಶಕ್ತಿ ಇರುವ ಜಗತ್ತಿನ ಮೂರು ಶಕ್ತಿ ಸ್ಥಳಗಳಲ್ಲಿ ಭಾರತದ ಕಸರ್ ದೇವಿ ಗುಡಿ

Harshavardhan M

ಡೆಹರಾಡೂನ್: ಜಗತ್ಪ್ರಸಿದ್ಧ ಪ್ರವಾಸಿತಾಣ ಬ್ರಿಟನ್ ನ ಸ್ಟೋನ್ ಹೆಂಜ್, ಪೆರುವಿನ ಮಚುಪಿಚು ಮತ್ತು ಭಾರತದ ಕುಮಾವೊ ಗ್ರಾಮದ ನಡುವೆ ಒಂದು ಕನೆಕ್ಷನ್ ಇದೆ. ಪ್ರವಾಸಿಗರು ಲಕ್ಷಾಂತರ ರೂ. ಖರ್ಚು ಮಾಡಿ ಹೋಗುವ ತಾಣಗಳಲ್ಲಿ ಸ್ಟೋನ್ ಹೆಂಜ್ ಮತ್ತು ಮಚು ಪಿಚು ಪ್ರಮುಖವಾದುವು. ಆದರೆ ಅವಕ್ಕೂ ಉತ್ತರಾಖಂಡದಲ್ಲಿರುವ ಕುಮಾವೊ ಗ್ರಾಮಕ್ಕೂ ಎಂಥಾ ಸಂಬಂಧ ಎಂದರೆ ಯಾರಿಗೇ ಆದರೂ ಹೇಳುವುದು ಕಷ್ಟ. 

ಅದಕ್ಕುತ್ತರ ತಿಳಿಯಬೇಕಾದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ವರದಿಯನ್ನೇ ಓದಬೇಕು. ಭೂಕಾಂತೀಯ ಗುಣವನ್ನು ಹೊಂದಿರುವ ಭೂಮಿಮೇಲಿನ ಕೇವಲ ಮೂರು ಸ್ಥಳಗಳಲ್ಲಿ ಕುಮಾವೊ ಕೂಡಾ ಸೇರಿದೆ. ಈ ಪಟ್ಟಿಯಲ್ಲಿರುವ ಇನ್ನೆರಡು ಸ್ಥಳಗಳೆಂದರೆ ಸ್ಟೋನ್ ಹೆಂಜ್ ಮತ್ತು ಪೆರುವಿನ ಮಚುಪಿಚು. ಕುಮಾವೊ ಗ್ರಾಮದಲ್ಲಿ ಕಸರ್ ದೇವಿಯ ಗುಡಿ ಇದೆ.

ಪ್ರವಾಸದ ಗೀಳನ್ನು ಇಟ್ಟುಕೊಂಡಿರುವವರು ಭಾರತದ ಹಾಗೂ ಜಗತ್ತಿನ ಯಾವಯಾವುದೋ ಮೂಲೆಗಳನ್ನು ತಮ್ಮ ಇಷ್ಟದ ಪಟ್ಟಿಗೆ ಸೇರಿಸಿಕೊಂಡಿರುತ್ತಾರೆ. ಆದರೆ ಕುಮಾವೊದ ಕಸರ್ ದೇವಿ ಗುಡಿಯ ಸ್ಥಳದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದೂ ಒಂದು ಹೆಗ್ಗಳಿಕೆಯೇ. ಆದರೆ ತಿಳಿದವರು ಮಾತ್ರ ಕಾಲ ಕಾಲಕ್ಕೆ ಇಲ್ಲಿಗೆ ಸದ್ದಿಲ್ಲದೆ ಭೇಟಿ ಹೋಗುತ್ತಿರುತ್ತಾರೆ. 

ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟಾಗೋರ್, ಲೇಖಕ ಡಿಎಚ್ ಲಾರೆನ್ಸ್, ಜಗತ್ಪ್ರಸಿದ್ಧ ಸಂಗೀತಗಾರ ಬಾಬ್ ಡಿಲನ್, ಜಾರ್ಜ್ ಹ್ಯಾರಿಸನ್, ಹಾರ್ವರ್ಡ್ ಮನೋವಿಜ್ಞಾನಿ ತಿಮೊತಿ ಲಿಯರಿ, ದಲಾಯಿ ಲಾಮಾ ಸೇರಿದಂತೆ ಹಲವು ಮಂದಿ ಮಹನೀಯರು, ಮೇಧಾವಿಗಳು ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಸರ್ ದೇವಿ ಗುಡಿ ಇರುವ ಜಾಗದಲ್ಲಿ ಹಿಂದೆ ಗುಹೆಯನ್ನೇ ಗುಡಿ ರೂಪದಲ್ಲಿ ಕೆತ್ತಲಾಗಿತ್ತಂತೆ. 1948ರಲ್ಲಿ ಉದ್ಯಮಿ ಬಿರ್ಲಾ ಕುಟುಂಬ ಈ ಜಾಗದಲ್ಲಿ ಈಗಿರುವ ಗುಡಿಯನ್ನು ನಿರ್ಮಿಸಿತ್ತು. ದೇವಿ ವಿಗ್ರಹದ ಜೊತೆಗೇ ಶಿವನ ವಿಗ್ರಹವೂ ಇಲ್ಲಿದೆ.  ಪ್ರತೀತಿ. ೨ನೇ ಶತಮಾನದಲ್ಲಿ ನಿರ್ಮಿತವಾದದ್ದು ಎಂಬ ನಂಬಿಕೆಯಿದೆ. ಕಸರ್ ದೇವಿ ದುರ್ಗಾ ಮಾತೆಯ ಅವತಾರ.

ಭೂಮಿ ಮೇಲೆ ಸೂರ್ಯನ ಸೌರ ಗಾಳಿಯಿಂದಾಗಿ ಸೃಷ್ಟಿಯಾಗಿರುವ ವ್ಯಾನ್ ಅಲೆನ್ ಬೆಲ್ಟ್ ವಲಯವಿದೆ. ಇದನ್ನು ವ್ಯಾನ್ ಅಲೆನ್ ಎಂಬಾತ ಕಂಡುಹಿಡಿದಿದ್ದ. ಈ ವಲಯ ಹಾದು ಹೋಗಿರುವ ಭೂ ಪ್ರದೇಶದಲ್ಲಿ ಕಾಂತೀಯ ಶಕ್ತಿ ಹೆಚ್ಚಿರುತ್ತದೆ. ಈ ವಲಯವನ್ನು zone of energetic charged particles. ನಾಸಾ ಭೂಕಾಂತೀಯತೆ ಹೆಚ್ಚಿರುವ ಮೂರು ಪ್ರದೇಶಗಳನ್ನು ಪತ್ತೆ ಹಚ್ಚಿತ್ತು. ಸ್ಟೋನ್ ಹೆಂಜ್, ಮಚುಪಿಚು ಮತ್ತು ಕುಮಾವೊ. ಇವು ಮೂರೂ ಸ್ಥಳಗಳಲ್ಲಿ ಭೂಕಾಂತೀಯತೆ ಪ್ರಮಾಣ ಹೆಚ್ಚೂ ಕಮ್ಮಿ ಒಂದೇ ತೆರನಾಗಿದೆ. 

ಶಕ್ತಿಯ ಕಣಗಳು ಈ ಪ್ರದೇಶದಲ್ಲಿ ಇರುವುದರಿಂದ ಇಲ್ಲಿ ಮನಸ್ಸಿಗೆ ವಿಶಿಷ್ಟ ಅನುಭೂತಿ ದೊರೆಯುತ್ತದೆ ಎನ್ನಲಾಗುತ್ತದೆ. ಅಲ್ಲಿ ಶಾಂತಿ ಸಿಗುತ್ತದೆ ಎಂದು ನಂಬಲಾಗುತ್ತದೆ.

SCROLL FOR NEXT